Advertisement

83ನೇ ಅಂತರ್‌ ವಿ.ವಿ. ಆ್ಯತ್ಲೆಟಿಕ್ಸ್‌ : ಮಂಗಳೂರು ವಿವಿ ಚಾಂಪಿಯನ್‌

12:29 AM Jan 09, 2024 | Team Udayavani |

ಮೂಡುಬಿದಿರೆ: ಚೆನ್ನೈಯ ತಮಿಳನಾಡು ಫಿಸಿಕಲ್‌ ಎಜುಕೇಶನ್‌ ಆ್ಯಂಡ್‌ ನ್ಪೋರ್ಟ್ಸ್ ವಿವಿಯಲ್ಲಿ ನಡೆದ 83ನೇ ಅ.ಭಾ. ಅಂತರ್‌ ವಿ.ವಿ. ಪುರುಷರ ಆ್ಯತ್ಲೆಟಿಕ್ಸ್‌ ನಲ್ಲಿ ಹಾಗೂ ಒಡಿಶಾದ ಭುವನೇಶ್ವರದಲ್ಲಿ ಜರಗಿದ 83ನೇ ಅ.ಭಾ. ಅಂತರ್‌ ವಿ.ವಿ. ಮಹಿಳಾ ಕ್ರೀಡಾಕೂಟದಲ್ಲಿ ಮಂಗಳೂರು ವಿ.ವಿ. ಚಾಂಪಿಯನ್‌ಶಿಪ್‌ ಗಳಿಸಿದೆ.

Advertisement

ಮಂಗಳೂರು ವಿವಿ ಪುರುಷರ ತಂಡ 48 ಹಾಗೂ ಮಹಿಳಾ ತಂಡ 56 ಅಂಕ ಸಹಿತ 104 ಅಂಕ ಗಳಿಸಿದೆ. ಮಂಗಳೂರು ವಿವಿ ಎರಡು ವಿಭಾಗಗಳಲ್ಲಿ ಒಟ್ಟು 4 ಚಿನ್ನ, 3 ಬೆಳ್ಳಿ, 7 ಕಂಚು ಸಹಿತ 14 ಪದಕಗಳನ್ನು ಗೆದ್ದಿದೆ. ಪದಕ ವಿಜೇತರೆಲ್ಲರೂ ಮೂಡುಬಿದಿರೆ ಆಳ್ವಾಸ್‌ ಕಾಲೇಜಿನವರು. 72 ಮಂದಿಯ ಮಂಗಳೂರು ವಿವಿ ತಂಡದಲ್ಲಿ 59 ಮಂದಿ ಆಳ್ವಾಸ್‌ನ ವಿದ್ಯಾರ್ಥಿಗಳೇ ಇದ್ದರು.

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಸಂಸ್ಥೆಯ ಕ್ರೀಡಾ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next