Advertisement

83 ರ ಹರೆಯದಲ್ಲಿ ಸ್ನಾತಕೋತ್ತರ ಪದವಿಗಳಿಸಿದ ಮೇಧಾವಿ..

08:41 AM Sep 24, 2019 | Suhan S |

ಕಲಿಯುವ ಮನಸ್ಸು ಮತ್ತು ಸಾಧಿಸುವ ಛಲ ಇದ್ದರೆ ಬದುಕಿನ ಕೊನೆಯವರೆಗೂ ಅವಕಾಶಗಳಿರುತ್ತವೆ ಅಂತೆ !  ಈ ಮಾತಿಗೆ ಉದಾಹರಣೆಯಾಗಿ ನಿಂತಿದ್ದಾರೆ ಪಂಜಾಬಿನ 83 ವರ್ಷದ ವೃದ್ಧ ಸೋಹನ್ ಸಿಂಗ್ ಗಿಲ್.

Advertisement

ಹೌದು ತನ್ನ 83 ನೇ ವಯಸ್ಸಿನಲ್ಲಿ  ಪಂಜಾಬ್‌ನ ಜಲಂಧರ್‌ನಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ತಿಗೊಳಿಸಿದ್ದಾರೆ  ಸೋಹನ್ ಸಿಂಗ್ ಗಿಲ್. ಪಂಜಾಬ್‌ನ ಹೋಶಿಯಾರ್‌ಪುರದ ದತ್ತಾ ಗ್ರಾಮದಲ್ಲಿ ವಾಸಿಸುವ ಗಿಲ್ ಅವರು ಮಹಿಪಾಲ್‌ಪುರದ ಖಲ್ಸಾ ಕಾಲೇಜಿನಿಂದ ಪದವಿ ಮುಗಿಸಿದ ನಂತರ 1957 ರಲ್ಲಿ ವಿದ್ಯಾಭ್ಯಾಸವನ್ನು ತೊರೆದಿದ್ದರು.

ನಂತರ  ಅಧ್ಯಯನ ತರಬೇತಿಯಲ್ಲಿ ತೊಡಗಿಕೊಂಡ ಸೋಹನ್ ಸಿಂಗ್ ಎರಡು ವರ್ಷಗಳ ಹಿಂದೆ, ಅಂದರೆ ತನ್ನ 81 ನೇ ವಯಸ್ಸಿನಲ್ಲಿ, ಗಿಲ್ ದೂರ ಶಿಕ್ಷಣ ಅಧ್ಯಯನ ಮಾಡಲು ಸೇರಿದರು. ಇದರ ಪರಿಣಾಮವಾಗಿ ಸೋಹನ್ ಸಿಂಗ್ ಇಂಗ್ಲಿಷ್ ಭಾಷೆಯಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ತಿಗೊಳಿಸಿದರು.

ದೇವರ ಅನುಗ್ರಹ ಹಾಗೂ ಇಚ್ಛಾ ಶಕ್ತಿಯಿಂದ ನಾನು ಬಾಲ್ಯದಲ್ಲಿ ಅಂದುಕೊಂಡದ್ದನ್ನು ಈಗ ಸಾಧಿಸಿದ್ದೇನೆ. ಇಂಗ್ಲಿಷ್ ನನ್ನ ಮೆಚ್ಚಿನ ಭಾಷೆ,ನಾನು ಕೀನ್ಯಾದಲ್ಲಿದ್ದ ಸಮಯದಲ್ಲಿ ಅದನ್ನು ಕರಗತ ಮಾಡಿಕೊಂಡೆ ಎಂದು ಹೇಳುತ್ತಾರೆ ಸೋಹನ್ ಸಿಂಗ್ ಗಿಲ್. ಸಧ್ಯ ನಾನು ಐಇಎಲ್ಟಿಎಸ್ ವಿದ್ಯಾರ್ಥಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದೇನೆ ಎಲ್ಲರೂ ಉತ್ತಮ ಅಂಕ ಗಳಿಸಿದ್ದಾರೆ ಅನ್ನುವ ಖುಷಿಯನ್ನು ಹಂಚಿಕೊಂಡರು.

ಬಾಲ್ಯದಲ್ಲಿ ಗ್ರಾಮೀಣ ಭಾಗದ ಶಾಲೆಯಲ್ಲಿ ಕಲಿತ ಸೋಹನ್ ಸಿಂಗ್ , ಆಂಗ್ಲ ಭಾಷೆಯ  ಮೇಲಿನ ಹಿಡಿತವನ್ನು ಹೊರದೇಶದಲ್ಲಿ ಕರಗತ ಮಾಡಿಕೊಂಡಿದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next