ಪಣಜಿ: ಆಗಸ್ಟ್ 10 ರಂದು ಗೋವಾದಲ್ಲಿ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಗೆಲುವಿಗಾಗಿ ಕಸರತ್ತು ಆರಂಭಿಸಿವೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ರಾಜ್ಯದ ಜನತೆಯ ಗಮನ ಸೆಳೆದಿದ್ದಾರೆ.
ಮಯೆಮ್ ಕ್ಷೇತ್ರದ ಗ್ರಾಮ ಪಂಚಾಯಿತಿಯಲ್ಲಿ 82 ವರ್ಷದ ವ್ಯಕ್ತಿಯೊಬ್ಬರು ಚುನಾವಣೆಯಲ್ಲಿ ಸ್ಫರ್ಧಿಸಿದ್ದಾರೆ. 82ನೇ ವಯಸ್ಸಿನ ವ್ಯಕ್ತಿಯೊಬ್ಬರು ಚುನಾವಣೆಗೆ ಸ್ಫರ್ಧಿಸಿರುವುದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಕುಡಚಡೆ ಪಂಚಾಯತ್ ನ ಮಯೆಮ್ ಕ್ಷೇತ್ರದ ವಾರ್ಡ್ ನಂ.6ರಿಂದ ಭಾಗೋ ವರಕ್ ಎಂಬ ವೃದ್ಧ ಗ್ರಾ.ಪಂ ಚುನಾವಣೆಗೆ ಸ್ಫರ್ಧಿಸಿದ್ದಾರೆ. ಸಿಕ್ಕಿರುವ ಮಾಹಿತಿಯ ಪ್ರಕಾರ 1998ರಲ್ಲಿ ವರಕ್ ರವರು ಚುನಾವಣೆಯಲ್ಲಿ ಸ್ಫರ್ಧಿಸಿ ಜಯಗಳಿಸಿದ್ದರು. ಇದಾದ ಬಳಿಕ ಇದೀಗ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜನರ ಒತ್ತಾಯದ ಮೇರೆಗೆ ಪ್ರಸಕ್ತ ಬಾರಿ ಚುನಾವಣೆಗೆ ಸ್ಫರ್ಧಿಸಿದ್ದೇನೆ ಎಂದು ಅಭ್ಯರ್ಥಿ ಭಾಗೊ ವರಕ್ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ರೋಚಕ ಗೆಲುವು :ಫೈನಲ್ ಗೆ ಲಗ್ಗೆ ಇಟ್ಟ ಭಾರತದ ವನಿತೆಯರು ಚಿನ್ನ ಗೆಲ್ಲಲಿ
ಮಾಧ್ಯಮದವರೊಂದಿಗೆ ಮಾತನಾಡಿದ, ಭಾಗೊ ವರಕ್- ನಾನು ಮೊದಲ ಬಾರಿ ಚುನಾವಣೆಗೆ ಸ್ಫರ್ಧಿಸಿದಾಗ ಈ ವಾರ್ಡ್ ನಲ್ಲಿ ರಸ್ತೆ ಇರಲಿಲ್ಲ, ಮನೆಗಳಿಗೆ ನೀರು ಪೂರೈಕೆ ಇರಲಿಲ್ಲ, ವಿದ್ಯುತ್ ಸಂಪರ್ಕವಿರಲಿಲ್ಲ, ಅಂದು ನಾನು ಐದು ವರ್ಷ ಇಲ್ಲಿ ಕೆಲಸ ಮಾಡಿದ್ದೇನೆ. ಇಂದು ಕೂಡ ನಮ್ಮ ವಾರ್ಡ್ ನಲ್ಲಿರುವ ಕೆಲವು ಸಮಸ್ಯೆಗಳನ್ನು ನಾನು ಪರಿಹರಿಸಲು ಬಯಸುತ್ತೇನೆ ಎಂದರು.