Advertisement

ಕೋವಿಡ್: ರಾಜ್ಯದಲ್ಲಿಂದು  803 ಪಾಸಿಟಿವ್ ಪ್ರಕರಣ| 802 ಸೋಂಕಿತರು ಗುಣಮುಖ

06:42 PM Sep 12, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ‍್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖ ಕಂಡಿದೆ. ಇಂದು ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 803 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 17 ಜನರು ಸಾವನ್ನಪ್ಪಿದ್ದಾರೆ.

Advertisement

ವರದಿಗಳ ಪ್ರಕಾರ 802 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಒಟ್ಟು 16656 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ 0.86 % ಹಾಗೂ ಡೆತ್ ರೇಟ್ 2.11 % ಇದೆ ಎಂದು ವರದಿಗಳು ತಿಳಿಸಿವೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-4, ಬೆಳಗಾವಿ-17, ಬೆಂಗಳೂರು ಗ್ರಾಮಾಂತರ-11, ಬೆಂಗಳೂರು ನಗರ-225, ಬೀದರ್-0, ಚಾಮರಾಜನಗರ-6, ಚಿಕ್ಕಬಳ್ಳಾಪುರ-2, ಚಿಕ್ಕಮಗಳೂರು-14, ಚಿತ್ರದುರ್ಗ-4, ದಕ್ಷಿಣ ಕನ್ನಡ-153, ದಾವಣಗೆರೆ-9, ಧಾರವಾಡ-9, ಗದಗ-0, ಹಾಸನ-30, ಹಾವೇರಿ-1, ಕಲಬುರಗಿ-2, ಕೊಡಗು-63, ಕೋಲಾರ-8, ಕೊಪ್ಪಳ-0, ಮಂಡ್ಯ-11, ಮೈಸೂರು-36, ರಾಯಚೂರು-2, ರಾಮನಗರ-1, ಶಿವಮೊಗ್ಗ-24, ತುಮಕೂರು-22, ಉಡುಪಿ-90, ಉತ್ತರ ಕನ್ನಡ-28, ವಿಜಯಪುರ-0, ಯಾದಗಿರಿ-0.

Advertisement

Udayavani is now on Telegram. Click here to join our channel and stay updated with the latest news.

Next