Advertisement
ರಾಜ್ಯ ಹಜ್ ಮತ್ತು ವಕ್ಫ್ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಉದ್ಘಾಟಿಸುವರು. ಸಚಿವ ಯು.ಟಿ. ಖಾದರ್ ಪ್ರಥಮ ಹಜ್ ಯಾತ್ರಾರ್ಥಿಗಳ ಪಾಸ್ ಪೋರ್ಟ್ ವಿತರಿಸುವರು. ರಾಜ್ಯ ಹಜ್ ಸಮಿತಿ ಅಧ್ಯಕ್ಷ ಆರ್. ರೋಶನ್ ಬೇಗ್ ಪ್ರಥಮ ತಂಡದ ವಾಹನಕ್ಕೆ ಹಸಿರು ನಿಶಾನೆ ತೋರಿಸುವರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರಸ್ತಾವನೆಗೈಯುವರು.
2009 ಅಕ್ಟೋಬರ್ 25ರಂದು ಮಂಗಳೂರು ಹಜ್ ಕೇಂದ್ರ ಅಸ್ತಿತ್ವಕ್ಕೆ ಬಂದಿದ್ದು, 9 ವರ್ಷಗಳಲ್ಲಿ ಈ ಹಜ್ ನಿರ್ವಹಣ ಸಮಿತಿ ಮೂಲಕ 6,000 ಮಂದಿ ಹಜ್ ಯಾತ್ರೆ ಕೈಗೊಂಡಿದ್ದಾರೆ ಎಂದು ಸಮಿತಿ ಅಧ್ಯಕ್ಷ ವೈ. ಮಹಮ್ಮದ್ ಕುಂಞಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜು. 17 ಮತ್ತು 18ರಂದು ದ.ಕ. ಮತ್ತು ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳು ಹಾಗೂ ಜು. 19ರಂದು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ ಮತ್ತು ಹಾಸನ ಜಿಲ್ಲೆಯ ಯಾತ್ರಾರ್ಥಿಗಳು ಒಟ್ಟು 5 ವಿಮಾನಗಳಲ್ಲಿ ಪ್ರಯಾಣ ಬೆಳೆಸುವರು. ಯಾತ್ರೆ ಮುಗಿಸಿ ಹಾಜಿಗಳು ಆ. 31ರಿಂದ ಸೆ. 2ರ ತನಕ 5 ತಂಡಗಳಾಗಿ ಹಂತ ಹಂತವಾಗಿ ಮಂಗಳೂರಿಗೆ ಹಿಂದಿರುಗಲಿರುವರು ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.