Advertisement
ಮಧ್ಯಪ್ರದೇಶದ ಸುಸ್ನೇರ್ ಸಮೀಪದ ಮಗರಿಯಾ ಗ್ರಾಮದ ನಿವಾಸಿ ಬಲುರಾಮ್ ಬಗ್ರಿ ಅವರು ಮಹಾರಾಷ್ಟ್ರದ ಅಮರಾವತಿ ನಿವಾಸಿ ಶೀಲಾ ಇಂಗ್ಲೆ ಅವರನ್ನು ಏಪ್ರಿಲ್ 1 ರಂದು ವಿವಾಹವಾಗಿದ್ದಾರೆ. ಈ ಇಬ್ಬರೂ ವಿವಾಹವಾಗಲು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ 80 ರ ಹರೆಯದ ಬಲುರಾಮ್ ಅವರೇ ಕಾರಣವಂತೆ…
ಮೂಲತಃ ಮಧ್ಯಪ್ರದೇಶದ ಮಗರಿಯ ಗ್ರಾಮದಲ್ಲಿ ವಾಸಿಸುತ್ತಿದ್ದ ಬಾಲುರಾಮ್ ಅವರಿಗೆ ಈಗಾಗಲೇ ಒಂದು ಮದುವೆಯಾಗಿದ್ದು ಕೆಲ ವರ್ಷಗಳ ಹಿಂದೆ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು ಬಾಲುರಾಮ್ ಅವರಿಗೆ ಓರ್ವ ಪುತ್ರನಿದ್ದು ಮೂವರು ಪುತ್ರಿಯರಿದ್ದಾರೆ ಆದರೆ ಅವರೆಲ್ಲರೂ ಬೇರೆ ಬೇರೆಯಾಗಿ ವಾಸಮಾಡುತ್ತಿದ್ದಾರೆ ಹೆಂಡತಿಯನ್ನು ಕಳೆದುಕೊಂಡ ಬಳಿಕ ಬಾಲುರಾಮ್ ಗೆ ಒಂಟಿ ತನ ಕಾಡ ತೊಡಗಿದೆ ಇದರಿಂದ ಖಿನ್ನತೆಗೆ ಒಳಗಾಗಿದ್ದರು ಈ ವೇಳೆ ಅರೋಗ್ಯ ವಿಚಾರಿಸಲು ಬಂದ ಬಾಲುರಾಮ್ ಅವರ ಸ್ನೇಹಿತನಾದ ವಿಷ್ಣು ಗುಜ್ಜರ್ ಖಿನ್ನತೆಯಿಂದ ಬಳಲುತ್ತಿದ್ದ ತನ್ನ ಸ್ನೇಹಿತನಿಗೆ ಒಂದು ಸಲಹೆ ನೀಡಿದ್ದಾನೆ ಅದೇನೆಂದರೆ ಈಗಿನ ಕಾಲದಲ್ಲಿ ಹೆಚ್ಚಿನವರು ಸೋಶಿಯಲ್ ಮೀಡಿಯಾ ದಲ್ಲಿ ರೀಲ್ಸ್ ಗಳನ್ನು ಮಾಡುತ್ತಾರೆ ಅದರಂತೆ ನೀನು ಕೂಡ ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಹಾಕುವ ವಿಧಾನಗಳನ್ನು ಹೇಳಿಕೊಟ್ಟಿದ್ದಾರೆ ಸ್ನೇಹಿತನ ಮಾತು ಕೇಳಿ ಕೆಲ ಸಣ್ಣ ಸಣ್ಣ ತಮಾಷೆಯ ವಿಡಿಯೋಗಳನ್ನು ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಿದ್ದರು ಇದಾದ ಕೆಲವೇ ಸಮಯದಲ್ಲಿ ಬಾಲುರಾಮ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಫಾಲ್ಲೋ ಮಾಡಲು ಆರಂಭಿಸಿದ್ದರು ಅದರಲ್ಲಿ ಮಹಾರಾಷ್ಟ್ರದ ಶೀಲಾ ಇಂಗ್ಲೆ ಅವರೂ ಒಬ್ಬರಾಗಿದ್ದರು. ಹೀಗೆ ಬಾಲುರಾಮ್ ಅವರು ಹಾಕುತ್ತಿದ್ದ ಎಲ್ಲಾ ರೀಲ್ಸ್ ಗಳಿಗೆ ಶೀಲಾ ಅವರು ಲೈಕ್ ಕೊಡುತ್ತಿದ್ದರು ಹೀಗೆ ಮುಂದುವರೆಯುತ್ತಾ ಇಬ್ಬರೂ ಚಾಟ್ ಮಾಡುವ ಹಂತಕ್ಕೆ ಬಂದಿದ್ದಾರೆ ಇದೇ ಚಾಟ್ ಮುಂದೆ ಇಬ್ಬರ ನಡುವೆ ಪ್ರೀತಿ ಹೆಚ್ಚಾಗಲು ಕಾರಣವಾಗಿದೆ. ಬಳಿಕ ಇಬ್ಬರೂ ಮದುವೆಯ ನಿರ್ಧಾರಕ್ಕೆ ಬಂದು ಏಪ್ರಿಲ್ 1 ರಂದು ಶೀಲಾ ಅವರು ಮಧ್ಯಪ್ರದೇಶಕ್ಕೆ ಬಂದು ಬಾಲುರಾಮ್ ಜೊತೆ ರಿಜಿಸ್ಟರ್ ಮದುವೆಯಾಗಿದ್ದಾರೆ ಇದಾದ ಬಳಿಕ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಇಬ್ಬರ ವಿವಾಹಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
Related Articles
Advertisement