Advertisement

ಮೆಕ್ಸಿಕೋದಲ್ಲಿ ಪ್ರಬಲ ಭೂಕಂಪ, 8.0ರಷ್ಟು ತೀವ್ರತೆ ದಾಖಲು

11:21 AM Sep 08, 2017 | Team Udayavani |

ಮೆಕ್ಸಿಕೋ ನಗರ: ದಕ್ಷಿಣ ಮೆಕ್ಸಿಕೋದ ಕರಾವಳಿ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವ ಘಟನೆ ಗುರುವಾರ ತಡರಾತ್ರಿ ಸಂಭವಿಸಿದ್ದು, ಭೂಕಂಪದ ತೀವ್ರತೆ 8.0ರಷ್ಟು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಪ್ರಬಲ ಭೂಕಂಪದಿಂದಾಗಿ ಜನರು ಭಯಭೀತರಾಗಿ ಕಟ್ಟಡಗಳಿಂದ ಹೊರಗೆ ಓಡಿಬಂದಿರುವುದಾಗಿ ವರದಿ ಹೇಳಿದೆ. ಏತನ್ಮಧ್ಯೆ ಸುನಾಮಿ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಮೆಕ್ಸಿಕೋ ಹಾಗೂ ಗ್ವಾಟೆಮಾಲಾದ ಗಡಿಯ ಫೆಸಿಪಿಕ್ ಸಾಗರದಲ್ಲಿ ಈ ಪ್ರಬಲ ಭೂಕಂಪ ಸಂಭವಿಸಿದೆ. ಸುಮಾರು 90 ಸೆಕೆಂಡ್ಸ್ ಕಾಲ ಭೂಮಿ ಕಂಪಿಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭೂಕಂಪದ ಬಳಿಕ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next