Advertisement

ಕೆರೆ ನಿರ್ಮಾಣಕ್ಕೆ ಸಿಎಂಗೆ 80ಕೋಟಿ ರೂ. ಪ್ರಸ್ತಾವನೆ

11:25 AM Feb 19, 2022 | Team Udayavani |

ಆಳಂದ: ತಾಲೂಕಿನ ಜಿಡಗಾ ನವಕಲ್ಯಾಣ ಮಠದ 40 ಎಕರೆ ಪ್ರದೇಶದಲ್ಲಿ ಉದ್ದೇಶಿತ ಕೆರೆ ನಿರ್ಮಾಣಕ್ಕೆ ಸರ್ಕಾರದಿಂದ 80 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಶ್ರೀ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ| ಮುರುಘರಾಜೇಂದ್ರ ಮಹಾ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಶುಕ್ರವಾರ ಪ್ರಸ್ತಾವನೆ ಸಲ್ಲಿಸಿದರು.

Advertisement

ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಶಾಸಕರನ್ನು ಒಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶ್ರೀಗಳು, ಆಳಂದ ತಾಲೂಕಿನ ಶ್ರೀಕ್ಷೇತ್ರ ಜಿಡಗಾ ನವಕಲ್ಯಾಣ ಮಠದ ನಿವೇಶನದಲ್ಲಿ ಕೆರೆ ನಿರ್ಮಾಣಕ್ಕೆ ಈಗಾಗಲೇ 30 ಎಕರೆ ಪ್ರದೇಶವನ್ನು ಘೋಷಿಸಲಾಗಿದೆ. ಆದರೆ ಬೃಹತ್‌ ಪ್ರಮಾಣದಲ್ಲಿ ಕೆರೆ ನಿರ್ಮಾಣವಾದರೆ ಹೆಚ್ಚಿನ ರೈತರಿಗೆ ಅನುಕೂಲವಾಗುತ್ತದೆ ಎಂದು ಮನಗಂಡು 10 ಎಕರೆ ಸೇರಿಸಿ ಒಟ್ಟು 40 ಎಕರೆ ಒಂದೇ ಪ್ರದೇಶದಲ್ಲಿ ಕೆರೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ.

ಇದಕ್ಕೆ ಆರಂಭಿಕವಾಗಿ ಸುಮಾರು 80 ಕೋಟಿ ರೂ. ತಗಲುವ ವೆಚ್ಚದ ಕುರಿತು ಅಂದಾಜಿಸಲಾಗಿದೆ. ಆರಂಭಿಕವಾಗಿ 80 ಕೋಟಿ ರೂ. ಬಿಡುಗಡೆ ಮಾಡಿದರೆ, ಸುತ್ತಮುತ್ತಲಿನ ಜಮೀನುಗಳು ನೀರಾವರಿಯಾಗಿ, ಕೃಷಿ ಸೇರಿದಂತೆ ಜನಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿದರು.

ಶ್ರೀಗಳು ನೀಡಿದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೆರೆ ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಿರುವ ಶ್ರೀಗಳ ಕಾರ್ಯಕ್ಕೆ ಸಂತಸಗೊಂಡ ಅವರು, 80 ಕೋಟಿ ರೂ.ಗಳ ಪ್ರಸ್ತಾವನೆಗೆ ಶೀಘ್ರವೇ ಅನುಮೋದನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ನಿಯೋಗದಲ್ಲಿ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌, ಮುಖ್ಯ ಸಚೇತಕ ಡಾ| ಅಜಯಸಿಂಗ್‌, ಹುನಗುಂದ ಶಾಸಕ ದೊಡ್ಡಣ್ಣಗೌಡ ಜಿ. ಪಾಟೀಲ, ಆಳಂದ ಶಾಸಕ ಸುಭಾಷ ಗುತ್ತೇದಾರ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಅವಿನಾಶ ಜಾಧವ, ಶರಣು ಸಲಗರ, ಮಾಜಿ ಎಂಎಲ್‌ಸಿ ಅಲ್ಲಂ ಪ್ರಭು ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next