ಮಹಾಲಿಂಗಪುರ: ಸರ್ಕಾರದ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಹಂಚಿಕೆಯಾದ ಅಕ್ಕಿಯ ಅಕ್ರಮ ದಸ್ತಾನು ಮೇಲೆ ದಾಳಿ ನಡೆಸಿದ ಪೋಲಿಸರು 80 ಚೀಲ ಅಕ್ಕಿಯನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ.
ರಬಕವಿ-ಬನಹಟ್ಟಿ ಕಂದಾಯ ಅಧಿಕಾರಿ ಅಲ್ಲಾಸಾಬ ರಮಜಾನ ತಾಂಬೋಳಿ ಅವರ ದೂರಿನನ್ವಯ ಮಹಾಲಿಂಗಪುರ ಪಟ್ಟಣದ ಬುದ್ನಿಪಿಡಿಯ ತೋಟದ ತಗಡಿನ ಶೆಡ್‌ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 80 ಚೀಲಗಳಲ್ಲಿ 73650 ರೂಗಳ ಬೆಲೆಯ 4910 ಕೆಜಿ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಬುದ್ನಿಪಿಡಿಯ ಲಾಲಸಾಬ ಮಲೀಕ್‍ಜಾನ್ ಹಳಿಂಗಳಿ, ರಾಜೇಂದ್ರ ಸಿದ್ದಮಲ್ಲಪ್ಪ ಮೂಡಲಗಿ ಅವರು ಪರಾರಿಯಾಗಿದ್ದಾರೆ. ಆರೋಪಿತರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ನೀವೆ ಪ್ರಶ್ನೆ ಕೇಳಿ, ನೀವೆ ವಿವಾದ ಮಾಡುತ್ತೀರಾ.. ಮಾಧ್ಯಮದವರ ಮೇಲೆ ಗರಂ ಆದ ಸಿದ್ದು
ಕಾರ್ಯಾಚರಣೆಯಲ್ಲಿ ರಬಕವಿ-ಬನಹಟ್ಟಿ ಕಂದಾಯ ಅಧಿಕಾರಿ ಅಲ್ಲಾಸಾಬ ರಮಜಾನ ತಾಂಬೋಳಿ, ಅಪರಾಧ ವಿಭಾಗದ ಎ.ಎಸೈ ಎಲ್.ಕೆ.ಅಗಸರ, ಪೇದೆಗಳಾದ ಎಸ್.ಡಿ.ಬಾರಿಗಿಡದ, ಜೆ.ಜಿ.ಪಾಟೀಲ, ರಮೇಶ ಬರಗಿ, ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.