Advertisement

ಐನ್‌ಸ್ಟೈನ್‌ಗಿಂತ ಚುರುಕು ಈ 8ರ ಪೋರಿ!

09:18 PM Sep 11, 2021 | Team Udayavani |

ಮೆಕ್ಸಿಕೋ: ಅಲ್ಬರ್ಟ್‌ ಐನ್‌ಸ್ಟೈನ್‌ ತೀರಾ ಜಾಣನಾಗಿದ್ದ ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಆದರೆ ಇದೀಗ ಅವನಿಗಿಂತ ಜಾಣೆ ಯೊಬ್ಬಳು ಕಾಣಿಸಿಕೊಂಡಿದ್ದಾಳೆ.

Advertisement

ಮೆಕ್ಸಿಕೋದ 8 ವರ್ಷದ ಪುಟಾಣಿ ಅಧಾರಾ ಪೆರೇಜ್‌ ಐನ್‌ ಸ್ಟೈನ್‌ ಮತ್ತು ಸ್ಟೀಫ‌ನ್‌ ಹಾಕಿಂಗ್‌ ಗಿಂತಲೂ ಜಾಣೆ. ಅವರಿಗೆ ಐಕ್ಯೂ 160 ಇದ್ದರೆ ಇವಳಿಗೆ 162 ಇದೆ.

ಅಧಾರಾ 3 ವರ್ಷದವಳಿದ್ದಾಗ ಆಸ್ಪರ್ಜರ್‌  ಸಿಂಡ್ರೋಮ್‌ ಹೆಸರಿನ ಕಾಯಿಲೆಯಿಂದ ಬಳಲುತ್ತಿದ್ದಳಂತೆ. ಅದರಿಂದಾಗಿ ಅವಳಿಗೆ ಬೇರೆಯವರಿಗೆ ಬೆರೆಯುವುದು ಕಷ್ಟವಾಗಿತ್ತು. ಆಕೆಗೆ ಸ್ನೇಹಿ ತರು ಚುಡಾಯಿಸುವುದನ್ನು ಕಂಡು, ಆಕೆಯ ತಾಯಿ ಬೇಸರಗೊಂಡು, ಅವಳನ್ನು ಟ್ಯಾಲೆಂಟ್‌ ಕೇರ್‌ ಸೆಂಟರ್‌ಗೆ ಸೇರಿಸಿದ್ದಳು. ಅಲ್ಲಿ ಆಕೆಯ ಐಕ್ಯೂ ಬಗ್ಗೆ ತಿಳಿದು ಬಂದಿದೆ.

ಈ ಬಾಲಕಿ ಈಗಾಗಲೇ ಪ್ರೌಢ ಶಿಕ್ಷಣವನ್ನೂ ಮುಗಿಸಿದ್ದು, ಆನ್‌ ಲೈನ್‌ ಕೋರ್ಸ್‌ಗಳ ಎರಡು ಪದವಿಯನ್ನೂ ಮುಗಿಸಿದ್ದಾಳೆ. ಡು ನಾಟ್‌ ಗೀವ್‌ ಅಪ್‌ ಹೆಸರಿನ ಪುಸ್ತಕವನ್ನೂ ಬರೆದಿದ್ದಾಳೆ. ದಿವ್ಯಾಂಗ ಮಕ್ಕಳ ಭಾವನೆಗಳನ್ನು ಮಾನಿಟರ್‌ ಮಾಡುವ ವ್ಯವಸ್ಥೆಯನ್ನು ನಿರ್ಮಿಸುತ್ತಿರುವುದರ ಜತೆಗೆ ಅಮೆರಿಕದ ಆರಿ ಜೋನಾ ವಿವಿ ಪ್ರವೇಶ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾಳಂತೆ.

Advertisement

Udayavani is now on Telegram. Click here to join our channel and stay updated with the latest news.

Next