Advertisement

ಯೋಗದ 8 ಹಂತಗಳು

11:57 PM Jan 13, 2020 | mahesh |

ಪತಂಜಲಿ ಮಹರ್ಷಿಗಳು ಯೋಗ ಎಂದರೆ ಯೋಗಶ್ಚಿತ್ತ ವೃತ್ತಿ ನಿರೋಧ ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿ ಸುವುದು ಯೋಗದ ಉದ್ದೇಶ. ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ 8 ಹಂತಗಳಿವೆ.

Advertisement

ಯಮವೆಂದರೆ: ಇಂದ್ರಿಯಗಳನ್ನು ಬಿಗಿಹಿಡಿ ಯುವುದು, ಕೆಲವು ಬಗೆಯ ಆಹಾರ, ಅಭ್ಯಾಸಗ ಳನ್ನು ಬಿಡುವುದು. ನಿಯಮವೆಂದರೆ: ಪಾಲನೆ, ಅನು ಷ್ಠಾನ, ಮನಸ್ಸಿನ ಪ್ರವೃತ್ತಿಗಳಿಗೆ ಸಂಬಂಧಿಸಿದ ವಿಧಿನಿ ಯಮಗಳು. ಆಸನವೆಂದರೆ: ದೇಹದ ಭಂಗಿ, ವಿನ್ಯಾಸ, ಅಂಗವಿನ್ಯಾಸ, ಸುಖವಾಗಿಯೂ ಇರಬೇಕು, ಆಸನ. ಪ್ರಾಣಾಯಾಮ: ಉಸಿರಾಟದ ಮೇಲಿನ ಹತೋಟಿ, ಒಳಗೆಳೆದುಕೊಂಡು ಉಸಿರನ್ನು ದೀರ್ಘ‌ ಕಾಲ ಬಿಗಿಹಿಡಿಯುವುದು. ಪ್ರತ್ಯಾಹಾರ: ಇಂದ್ರೀಯಗಳನ್ನು ಅವುಗಳ ಹೊರಗಿನ ಕೆಲಸದಿಂದ ಹಿಂದಕ್ಕೆ ಸೆಳೆದು ಮನಸ್ಸಿನ ವಿವರಗಳನ್ನು ಒಂದೆಡೆ ಕೂಡಿಸುವುದು. ಧ್ಯಾನ: ಏಕಮನಸ್ಸಿನಿಂದ ಚಿತ್ತ ವೃತ್ತಿಗಳನ್ನು ಕೇಂದ್ರೀಕರಿಸುವುದು. ಧಾರಣ: ಈ ಧ್ಯಾನವನ್ನು ಹಿಡಿದು, ಅದು ಹೆಚ್ಚುವಂತೆ ಮಾಡು ವುದು. ಸಮಾಧಿ: ಹೊರಗಿನ ಎಲ್ಲ ಚಟುವಟಿಕೆಗಳ ಸಂಪರ್ಕವನ್ನು ಬಿಟ್ಟು ಮನಸ್ಸಿನ ಎಲ್ಲ ನೆಲೆಗಳನ್ನೂ ವಿವರಗಳನ್ನೂ ತನ್ನೊಳಗೇ ಇಡುವುದು.

Advertisement

Udayavani is now on Telegram. Click here to join our channel and stay updated with the latest news.

Next