Advertisement
ಗುರುವಾರ ಇಬ್ಬರು ಸೋಂಕಿತರು ಗುಣಮುಖರಾಗುವುದರೊಂದಿಗೆ ರಾಜ್ಯದಲ್ಲಿ ಈ ವರೆಗೆ ಗುಣಮುಖರಾದವರ ಸಂಖ್ಯೆ 28. ಅವರಲ್ಲಿ ನಾಲ್ವರು ವಿದೇಶಿಗರು. ಇದೀಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 256 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ.
ಜಿಲ್ಲೆಯಲ್ಲಿ 10,240 ಮಂದಿ ನಿಗಾ
ದಲ್ಲಿದ್ದಾರೆ. ಈ ಪೈಕಿ 10,063 ಮಂದಿ ಮನೆಗಳಲ್ಲೂ, 177 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಗುರುವಾರ 37 ಸ್ಯಾಂಪಲ್ ಸೇರಿದಂತೆ ಈ ತನಕ 1,214 ಸ್ಯಾಂಪಲ್‌ಗಳನ್ನು ಲ್ಯಾಬ್‌ಗಳಿಗೆ ಕಳುಹಿಸಲಾಗಿದೆ. 362ರ ಫಲಿತಾಂಶ ಇನ್ನಷ್ಟೇ ಲಭಿಸ ಬೇಕಾಗಿದೆ. ಹೊಸದಾಗಿ 21 ಮಂದಿ ಯನ್ನು ಐಸೋಲೇಶನ್ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಈ ವರೆಗೆ ಕೋವಿಡ್- 19 ಬಾಧಿಸಿದವರಲ್ಲಿ 200 ಮಂದಿ ವಿದೇಶದಿಂದ ಬಂದವರು ಮತ್ತು 7 ಮಂದಿ ವಿದೇಶಿಗರು. ರೋಗಿಗಳೊಂದಿಗಿನ ಸಂಪರ್ಕ ದಿಂದ 76 ಮಂದಿಗೆ, ನಿಜಾಮುದ್ದೀನ್ ಸಮಾವೇಶದಲ್ಲಿ ಭಾಗವಹಿಸಿ ಮರಳಿದ ಇಬ್ಬರಿಗೆ ಗುಜರಾತ್‌ನಿಂದ ಬಂದ ಓರ್ವನಿಗೆ ಸೋಂಕು ಬಾಧಿಸಿದೆ. ಗುರುವಾರ ತಿರುವನಂತಪುರ ಮತ್ತು ಮಲಪುರ ಜಿಲ್ಲೆಯ ತಲಾ ಒಬ್ಬರು ರೋಗ ಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
Related Articles
ಲಾಕ್‌ಡೌನ್ ಆದೇಶ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ 25 ಕೇಸು ದಾಖಲಿಸಿ 45 ಮಂದಿಯನ್ನು ಬಂಧಿಸಲಾಗಿದೆ. 18 ವಾಹನಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಕುಂಬಳೆ ಠಾಣೆಯಲ್ಲಿ 2, ಆದೂರು 3, ವಿದ್ಯಾನಗರ 2, ಮೇಲ್ಪರಂಬ 5, ಚಿತ್ತಾರಿಕಲ್ 2, ಅಂಬಲತ್ತರ 1, ಹೊಸದುರ್ಗ 1, ನೀಲೇಶ್ವರ 1, ಚಂದೇರ 2,ವೆಳ್ಳರಿಕುಂಡ್ 5, ರಾಜಪುರಂ 1 ಕೇಸು ದಾಖಲಾಗಿವೆ. ಈ ವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 269 ಕೇಸು ದಾಖಲಿಸಿ 390 ಮಂದಿಯನ್ನು ಬಂಧಿಸಲಾಗಿದೆ.
Advertisement
ಹೊರದೇಶ, ರಾಜ್ಯಗಳಲ್ಲಿ ಕೇರಳದ ನಾಲ್ವರ ಸಾವುಕಾಸರಗೋಡು: ಕೋವಿಡ್- 19 ವೈರಸ್ ಸೋಂಕಿನಿಂದಾಗಿ ಯುಎಸ್‌ನಲ್ಲಿ ಇಬ್ಬರು, ದುಬಾೖ ಮತ್ತು ಮುಂಬಯಿಯಲ್ಲಿ ತಲಾ ಒಬ್ಬರಂತೆ ನಾಲ್ಕು ಮಂದಿ ಕೇರಳಿಗರು ಸಾವಿಗೀಡಾಗಿದ್ದಾರೆ.