Advertisement

ಮಹಾಮಳೆ: 60ಕಿ.ಮೀಟರ್‌ ತಲುಪಲು 8 ಗಂಟೆ ಪ್ರಯಾಣ

11:24 AM Sep 06, 2019 | Team Udayavani |

ಮುಂಬೈ ಮಹಾಮಳೆಗೆ ಸಿಕ್ಕಿ ಆದೆಷ್ಟೋ ಜನರು ಕಷ್ಟ ಆನುಭವಿಸಿದ್ದಾರೆ ತಮ್ಮ ಮನೆ ಮಠಗಳನ್ನು ಕಳೆದುಕೊಂದಿದ್ದಾರೆ.

Advertisement

ಮನೆಯಿಂದ ಹೊರಹೋದವರು ಮಳೆಗೆ ಅರ್ಧದಾರಿಯಲ್ಲಿ ಸಿಲುಕಿಕೊಂಡ ಘಟನೆಗಳು ನಾವು ಕೇಳಿದ್ದೇವೆ,ಕಳೆದ ಕೆಲವು ದಿನಗಳ ಹಿಂದೆ ಮುಂಬೈ ಪರಿಸರದಲ್ಲಿ ಸಾಕಷ್ಟು ಮಳೆ ಸುರಿದಿತ್ತೂ ಕೂಡ ಆದರೆ ಇಂದು ಸುರಿದ ಮಳೆಯ ಜೊತೆಗೆ ಸಮುದ್ರದ‌ ನೀರಿನ ಅಲೆಗಳ ಪ್ರಮಾಣ ಹೆಚ್ಚಿದ್ದರಿಂದ ಮುಂಬೈ ಮಹಾನಗರವನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

ಪ್ರವಾಹದಲ್ಲಿ ಸಿಲುಕಿ ಸಾಕಷ್ಟು ತೊಂದರೆ ಅನುಭವಿಸಿದವರು ತುಂಬಾ ಮಂದಿ ಇದ್ದಾರೆ ನಾನಾ ಸಹ ರೀತಿಯ ತೊಂದರೆಗಳಿಂದ ಪಾರಾಗಿ ಬಂದು ತಮ್ಮ ಅನುಭವವನ್ನು ಹಂಚಿಕೊಂಡವರು ಹಲವು ಮಂದಿ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮರೆಯಲಾಗದ ಘಟನೆಗಳು ಒಂದಲ್ಲ ಒಂದು ಇದ್ದೇ ಇರುತ್ತದೆ. ಅಂತಹ ಒಂದು ಸನ್ನಿವೇಶಕ್ಕೆ ಉದಯವಾಣಿ ಮುಂಬೈಕಛೇರಿಯ ಹಿರಿಯ ಉಪಸಂಪಾದಕರಾದ ದಿನೇಶ್‌ ಶೆಟ್ಟಿ ಅವರು ಸಾಕ್ಷಿಯಾಗಿದ್ದಾರೆ. ತಮ್ಮ ಜೀವನದಲ್ಲಿ ಹಿಂದೆಂದೂ ಅನುಭವಿಸದ ಯಾತನೆ ಅನುಭವಿಸಿದ ರೀತಿಯನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ದಿನೇಶ್‌ ಶೆಟ್ಟಿಯವರು ತಮ್ಮ ಮನೆ( ದೊಂಬಿವಿಲಿ) ಯಿಂದ ನಾರಿಮನ್‌ ಪಾಯಿಂಟ್‌ ಬಳಿಯಿರುವ ಉದಯವಾಣಿ ಕಛೇರಿಗೆ ಅಂದರೆ ಸುಮಾರು 60 ಕಿಲೋ ಮೀಟರ್‌ ದೂರವನ್ನು ಕ್ರಮಿಸಲು ದಿನನಿತ್ಯ ಒಂದು ಗಂಟೆ ನಲ್ವತ್ತೈದು ನಿಮಿಷತಗಲುತ್ತಿತ್ತು, ಆದರೆ ಇಂದು ಅವರು ತಮ್ಮ ನಿವಾಸದಿಂದ ಕಛೇರಿಗೆ ತಲುಪಲು ಬರೋಬ್ಬರಿ ಎಂಟು ಗಂಟೆ ಮೂವತ್ತು ನಿಮಿಷ ತೆಗೆದುಕೊಂಡಿದ್ದಾರೆ ಕಾರಣ ಮುಂಬೈಯಲ್ಲಿ ಸುರಿಯುತ್ತಿರುವ ಮಹಾಮಳೆ. ಬೆಳಿಗ್ಗೆ 10.30ಕ್ಕೆಹೊರಟು ರಾತ್ರಿ 7 .15 ಗಂಟೆಯವರೆಗೆಗಿನ ತಮ್ಮ ಪ್ರಯಾಣದ ಆನುಭವವನ್ನು ನನ್ನ ಜೀವನದಲ್ಲಿ ಹಿಂದೆಂದೂ ಕಂಡಿರಲಿಲ್ಲ ಎಂದು ತಮ್ಮ ಪ್ರಯಾಣದ ಪ್ರಯಾಸವನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ಮುಂಬೈಯಲ್ಲಿ ಮಳೆ ಬಂತ್ತೆಂದರೆ ಎಲ್ಲರೂ ತಮ್ಮ ಕಛೇರಿಗೆ ಕೆಲಸಕ್ಕೆ ತೆರಳುವವರು ತುಸು ಬೇಗನೆ ಹೊರಟು ರೆಡಿಯಾಗಿರುತ್ತಾರೆ. ಅಂತೆಯೇ ದಿನೇಶ್‌ ಶೆಟ್ಟಿ ಯವರೂ ಕೂಡಾ ಬುಧವಾರ ಸುರಿಯುತ್ತಿರುವ ಮಳೆಯಿಂದ ಕೆಲಸಕ್ಕೆ ತೊಂದರೆ
ಯಾಗಬಾರದೆಂದು ಪ್ರತಿನಿತ್ಯ ಹೊರಡುವ ಸಮಯಕ್ಕೆ ಒಂದು ಗಂಟೆ ಮುಂಚಿತವಾಗಿ ಹೊರಟು ಬೆಳಗ್ಗಿನ ಉಪಹಾರವೂ ಮಾಡದೇ ಕೇವಲ ಒಂದು ಲೋಟ ಹಾಲು ಕುಡಿದು ದೊಂಬಿವಿಲಿರೈಲ್ವೇಸ್ಟೇಷನ್‌ ಕಡೆಗೆ ಬರುತ್ತಾರೆ. ಮುಂಬೈಯಲ್ಲಿ ಹೆಚ್ಚಿನ ಜನರು ಪ್ರಯಾಣಕ್ಕಾಗಿ ರೈಲನ್ನು ಅವಲಂಭಿಸುವುದು ಸಾಮಾನ್ಯ ಅದರಂತೆ 10.30 ರ ಸುಮಾರಿಗೆ ದೊಂಬಿವಲಿ ರೈಲ್ವೇ ನಿಲ್ದಾಣದಲ್ಲಿ ಬಂದು ನಿಂತರೆ ನಿಲ್ದಾಣದಲ್ಲಿ ಒಂದು ರೈಲೂಇಲ್ಲ .ರೈಲು ನಿಲ್ದಾಣಗಳಲ್ಲಿ ಕಣ್ಣು ಹಾಯಿಸಿದಷ್ಟು ದೂರ ನೀರಿನಿಂದ ಆವರಿಸಿದ ಪ್ರದೇಶವಷ್ಟೇ, ಕೆಲವು ಕಡೆ ರಕ್ಷಣಾ ಸಿಬಂಧಿಗಳಿಂದ ಜನರನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿಸುವುದು ಕಂಡು ಬಂದರೆ ಕೆಲವು ಪ್ರದೇಶಗಳಲ್ಲಿ ಕಟ್ಟಡಗಳ ಒಳಗೆ ನೀರು ಹರಿದು ಬರುತ್ತಿರುವುದು ಕಂಡುಬಂದಿದೆ.

Advertisement

ಕರ್ತವ್ಯಕ್ಕೆ ತೆರಳದೆ ಬೇರೆ ಮಾರ್ಗವಿಲ್ಲ ದಿನಪತ್ರಿಕೆಯಲ್ಲಿ ಕೆಲಸ ಮಾಡುವವರ ಜೀವನವೇ ಹಾಗೆ ಯಾವುದೇ ಪ್ರದೇಶದಲ್ಲಿ ಯಾವುದೇ ಘಟನೆ ನಡೆದರೂ ಅಲ್ಲಿಯ ವರದಿ ಬಿತ್ತರಿಸಲು ಪತ್ರಕರ್ತರು ಇರುತ್ತಾರೆ. ಹಾಗೆ ಕಛೇರಿಯಲ್ಲಿ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸುವುದು ಇದ್ದೇ ಇರುತ್ತದೆ. ಹಾಗಾಗಿ ಕಛೇರಿಗೆ ಹೋಗಲೇ ಬೇಕಾದ ಅನಿವಾರ್ಯ.

ಒಂದು ಕಡೆ ಜೋರಾಗಿ ಸುರಿಯುತ್ತಿರುವ ಮಳೆ ಇನ್ನೊಂದು ಕಡೆ ಸಮಯಕ್ಕೆ ಸರಿಯಾಗಿ ಕಛೇರಿಗೆ ತೆರಳಲು ಆಗುತ್ತೂ ಇಲ್ಲವೋ ಅನ್ನೊಚಿಂತೆ ವಿಚಾರಣೆ ಕೌಂಟರ್‌ನಲ್ಲಿ ವಿಚಾರಿಸಿದರೆ ಕೆಲವೊಂದು ರೈಲುಗಳು ರದ್ಧಾಗಿವೆ ಎಂದು ತಿಳಿಯಿತು. ಆದರೂ ಕಾದೂ ನೋಡೋಣ ಎಂದು ಕುಳಿತು ಮಧ್ಯಾಹ್ನ ಸುಮಾರು 1 ಗಂಟೆಗೆ ಹೊತ್ತಿಗೆ ಒಂದು ರೈಲು ಬಂತು,ಆದನ್ನು ವಿಚಾರಿದಾಗ ಅದು ಕೇವಲ ಧನಘಾಟ್‌ ತನಕ ಮಾತ್ರ ಸಂಚರಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಆದರೂ ಚಿಂತೆಯಿಲ್ಲ ಎಂದು ಆ ರೈಲನ್ನು ಹತ್ತಿದೆ ಅದು ಧನಘಾಟ್‌ ಗೆತೆರಳುವಷ್ಟರಲ್ಲಿ ಸಂಜೆ ಸುಮಾರು ನಾಲ್ಕುವರೆ ಗಂಟೆಯಾಗಿತು.ರೈಲು ಇಳಿದು ನೋಡಿದರೆನೀರಿನ ಪ್ರವಾಹ ಹರಿಯುವುದು ಬಿಟ್ಟರೆ ಬೇರೇನು ಕಾಣುವುದಿಲ್ಲ ,ಮುಂದೆ ಸಾಗಿ ಬಂದರೆ ಸಾಲು ಸಾಲು ವಾಹನಗಳು ನೆರೆ ನೀರಿನಲ್ಲಿ ಸಿಲುಕಿಸವಾರರು ಪರದಾಡುವುದು ಕಂಡುಬರುತ್ತಿತ್ತು ಮತ್ತೂಂದುಕಡೆ ಶಾಲಾ ಮಕ್ಕಳ ವಾಹನವೊಂದು ನೀರಿನಲ್ಲಿ ಸಿಲುಕಿ ಅದರಲ್ಲಿರುವ ವಿದ್ಯಾರ್ಥಿಗಳನ್ನು ಅಲ್ಲಿಂದ ಬೇರೆ ಕಡೆಗೆ ಸಾಗಿಸುವ ಸನ್ನಿವೇಶ ಮನಕಲಕುವಂತಿತ್ತು.

ರೈಲ್ವೇ ಹಳಿಗಳಲ್ಲಿಯೂ ನೀರು ನಿಂತು ರೈಲು ಸಂಚಾರ ದುಸ್ಥರ ಇನ್ನು ಮಂದೆ ಹೇಗೆ ಸಾಗಬಹುದೆಂದು ವಿಚಾರಿಸಿದರೆ ಅಲ್ಲಿ ಕೆಲವು ಬಾಡಿಗೆ ಕಾರುಗಳು ನಿಂತಿದ್ದವು ಅವರಲ್ಲಿ ವಿಚಾರಿಸಿದರೆ ಅವರು ದುಪ್ಪಟ್ಟು ಬಾಡಿಗೆಗೆ ಬೇಡಿಕೆ ಇಟ್ಟರು.ಇದು ಆಗಿ ಹೋಗುವ ವ್ಯವಹಾರ ಅಲ್ಲ ಎಂದು ಅಲ್ಲಿದ್ದ ಆಟೋ ರಿಕ್ಷಾದವರನ್ನು ಕೇಳಿದೆವು ಅವನು ಪ್ರವಾಹದ ನೀರಿನ ನಡುವೆಯೂ ನಮ್ಮನ್ನು ಮುಲ್ಗುಂಡಿಚೆಟ್‌ನಾಕ ಎಂಬ ರಾಷ್ಟ್ರೀಯಹೆದ್ದಾರಿಗೆ ಬಿಡುವ ಪ್ರಯತ್ನ ಮಾಡಿದನು ಅಷ್ಟು ಹೊತ್ತಿಗೆ ಸಮಯ ಸಂಜೆ ಸುಮಾರು ಐದು ಗಂಟೆ ಆಗಿತ್ತು,ಅಷ್ಟಾದರೂ ನಮ್ಮ ಜೀವ ಬೆಳಗ್ಗಿನ ಒಂದು ಲೋಟ ಹಾಲಿನ ಬಲದಲ್ಲಿತ್ತು, ಇನ್ನು ನಮ್ಮ ಪ್ರಯಾಣ ಒಂದು ಒಂದುವರೆ ಗಂಟೆ ಬಾಕಿ ಇತ್ತು ಹಾಗೋ ಹೀಗೋ ಒಂದು ಬಾಡಿಗೆ ಕಾರನ್ನು ಗೊತ್ತುಪಡಿಸಿ ಅಲ್ಲಿಂದ ನಮ್ಮ ಪ್ರಯಾಣ ಮುಂದುವರೆಸಿ ಮಳೆ ಪ್ರವಾಹದ ನೀರಿನ ನಡುವೇ ಸಂಚರಿಸಿ ರಾತ್ರಿ 7.15 ನಿಮಿಷಕ್ಕೆ ಮುಂಬೈ ಉದಯವಾಣಿ ಕಛೇರಿಯನ್ನು ತಲುಪಿದೆವು.

Advertisement

Udayavani is now on Telegram. Click here to join our channel and stay updated with the latest news.

Next