ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ದಿನಕ್ಕೊಂದು ಆಘಾತಕಾರಿ ಮಾಹಿತಿ ಹೊರಹಾಕುತ್ತಿದ್ದಾರೆ. ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಸುತ್ತ ತನಿಖೆ ನಡೆಯುತ್ತಿದ್ದು, ಇದೀಗ ಮತ್ತೊಂದು ಮಾಹಿತಿ ಬಯಲಾಗಿದೆ.
ಸುಮಾರು ಒಂದು ವರ್ಷಗಳ ಕಾಲ ಪ್ರೀತಿಯ ಬಲೆಯಲ್ಲಿದ್ದ ಸುಶಾಂತ್ ಮತ್ತು ರಿಯಾ ಜೂನ್ ನಲ್ಲಿ ಬೇರ್ಪಟ್ಟಿದ್ದರು. ಅಂದರೆ ಸುಶಾಂತ್ ಸಾವಿಗೆ ಕೆಲವೇ ದಿನಗಳ ಮೊದಲು. ಅವರಿಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಜೂನ್ 8ರಂದು ರಿಯಾ ಮನೆಬಿಟ್ಟು ಬಂದಿದ್ದಳು.
ಸುಶಾಂತ್ ಗೆಳೆಯ ಸಿದ್ದಾರ್ಥ್ ಪಿತಾನಿ ಸಿಬಿಐ ತನಿಖೆ ಎದುರಿಸುತ್ತಿದ್ದು, ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ರಿಯಾ ಮತ್ತು ಸುಶಾಂತ್ ಬ್ರೇಕ್ ಅಪ್ ಮಾಡಿಕೊಳ್ಳುವ ಮೊದಲು ಎಂಟು ಹಾರ್ಡ್ ಡಿಸ್ಕ್ ಗಳನ್ನು ಡಿಲೀಟ್ ಮಾಡಿದ್ದರು ಎಂದಿದ್ದಾರೆ.
ಇದನ್ನೂ ಓದಿ: ನನಗೆ ರಕ್ಷಣೆ ಬೇಕು,ತಂದೆಯೇ ನನ್ನನ್ನು ಕೊಲ್ಲಲು ಬರುತ್ತಿದ್ದಾರೆ: ಕಣ್ಣೀರಿಟ್ಟ ಕಿರುತೆರೆ ನಟಿ
ಒಂದು ವರ್ಷ ಜೊತೆಯಲ್ಲಿದ್ದ ರಿಯಾ ಮತ್ತು ಸುಶಾಂತ್ ಸಾಕಷ್ಟು ಸುತ್ತಾಡಿದ್ದರು. 2019 ದೀಪಾವಳಿ ಸಂದರ್ಭದಲ್ಲಿ ಯೂರೋಪ್ ಪ್ರವಾಸ ಮಾಡಿದ್ದರು. ಅವರಿಬ್ಬರ ಚಿತ್ರಗಳು ಮತ್ತು ವಿಡಿಯೋಗಳು ಈ ಹಾರ್ಡ್ ಡಿಸ್ಕ್ ನಲ್ಲಿದ್ದು, ಅವುಗಳನ್ನು ಡಿಲೀಟ್ ಮಾಡಿದ್ದರು ಎಂದು ಸಿದ್ದಾರ್ಥ್ ಹೇಳಿದ್ದಾರೆ.
ಸುಶಾಂತ್ ಮತ್ತು ರಿಯಾ ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡಿ ಡಿಲೀಟ್ ಮಾಡಿದ್ದಾರೆ. ಈ ಸಮಯದಲ್ಲಿ ಸುಶಾಂತ್ ಮನೆಗೆಲಸದ ದಿಲ್ಪೇಶ್ ಸಾವಂತ್ ಮತ್ತು ಅಡುಗೆಯಾಳು ನೀರಜ್ ಸಿಂಗ್ ಕೂಡಾ ಜೊತೆಗಿದ್ದರು ಎನ್ನಲಾಗಿದೆ.