ರಾಂಚಿ: ಪಲಮೌ ಹುಲಿ ಸಂರಕ್ಷಿತ ಪ್ರದೇಶದ ಗ್ರಾಮವೊಂದರಲ್ಲಿ ಇಡೀ ಮೇಕೆಯನ್ನು ನುಂಗಿದ ಎಂಟು ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲಾಗಿದೆ ಎಂದು ಜಾರ್ಖಂಡ್‌ನ ಅರಣ್ಯಾಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಮೀಸಲು ವ್ಯಾಪ್ತಿಯ ಗಾರು ಅರಣ್ಯ ವ್ಯಾಪ್ತಿಯ ಸುಮಾರು 400 ಕುಟುಂಬಗಳಿರುವ ಕರವಾಯಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಹೆಬ್ಬಾವು ಭಯವನ್ನು ಹರಡುತ್ತಿತ್ತು. ಪ್ರತಿದಿನ ಬೆಳಗ್ಗೆ ಆಡು, ಕೋಳಿಗಳು ನಾಪತ್ತೆಯಾಗುತ್ತಿರುವುದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಯು.ಪಿ ಸರ್ಕಾರ ಮದರಸಾಗಳನ್ನು ಸರ್ವೆ ಮಾಡಬಹುದು..: ಜಮೀಯತ್ ಉಲಮಾ-ಎ-ಹಿಂದ್ ಅಧ್ಯಕ್ಷ
ಶನಿವಾರ ಮಣೇಶ್ವರ ಓರಾನ್ ಎಂಬುವರ ಮನೆ ಸಮೀಪಕ್ಕೆ ಬಂದಿದ್ದ ಹಾವು ಅವರ ಮೇಕೆಯನ್ನು ನುಂಗಿದೆ. ಮೇಕೆಯನ್ನು ನುಂಗಿ ಓಡಲು ಸಾಧ್ಯವಾಗದ ಹೆಬ್ಬಾವನ್ನು ಗ್ರಾಮಸ್ಥರು ಪತ್ತೆ ಹಚ್ಚಿ ನನಗೆ ಮಾಹಿತಿ ನೀಡಿದರು ಮತ್ತು ನಾನು ತಕ್ಷಣವೇ ಅರಣ್ಯ ಸಿಬಂದಿ ತಾರಾ ಕುಮಾರ್ ನೇತೃತ್ವದ ನಾಲ್ಕು ಜನರ ರಕ್ಷಣಾ ತಂಡವನ್ನು ಗ್ರಾಮಕ್ಕೆ ಕಳುಹಿಸಿದೆ ಎಂದು ಅರಣ್ಯಾಧಿಕಾರಿಗಳ ಉಸ್ತುವಾರಿ ನಿರ್ಭಯ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಗ್ರಾಮಸ್ಥರ ಸಹಾಯದಿಂದ ಹೆಬ್ಬಾವನ್ನು ರಕ್ಷಿಸಿ ಕೊಯೆಲ್ ನದಿಯ ಇನ್ನೊಂದು ಬದಿಯ ದಟ್ಟ ಅರಣ್ಯದಲ್ಲಿ ಬಿಡಲಾಯಿತು ಎಂದು ಅವರು ಹೇಳಿದರು.