Advertisement

ಅಬ್ಬಕ್ಕ ಭವನಕ್ಕೆ 8 ಕೋಟಿ ರೂ.ಮಂಜೂರು: ಕೋಟ

09:53 AM Mar 03, 2020 | sudhir |

ಉಳ್ಳಾಲ: ದ. ಕ. ಜಿಲ್ಲಾಡಳಿತ, ಜಿ. ಪಂ. ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಿಂದ ಖ್ಯಾತ ಸಾಹಿತಿ, ಕಾದಂಬರಿಗಾರ್ತಿ ಉಷಾ ಪಿ. ರೈ ಮತ್ತು ಸಾಹಿತ್ಯೇತ್ತರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ ಅವರಿಗೆ ಅಬ್ಬಕ್ಕ ಪ್ರಶಸ್ತಿ ನೀಡಿ ಸಮ್ಮಾನಿಸಿ ಗೌರವಿಸಲಾಯಿತು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿ ರಾಣಿ ಅಬ್ಬಕ್ಕ ತನ್ನ ಬದುಕನ್ನೇ ದೇಶಕ್ಕೆ ಪಣವಾಗಿಟ್ಟಿದ್ದು ರಾಷ್ಟ್ರಪ್ರೇಮದ ಪ್ರಶ್ನೆ ಬಂದಾಗ ಮೊದಲ ಪ್ರಾಶಸ್ತÂ ರಾಣಿ ಅಬ್ಬಕ್ಕಳಿಗೆ ಸಿಗಬೇಕು ಎಂದ ಅವರು ಕಾರ್ಯಕ್ರಮದಲ್ಲಿ ಇಬ್ಬರು ಸಾಧಕ ಮಹಿಳೆಯರಿಗೆ ಜಿಲ್ಲಾಡಳಿತ ಅಬ್ಬಕ್ಕ ಪ್ರಶಸ್ತಿ ನೀಡಿದೆ. ಉಳ್ಳಾಲದಲ್ಲಿ ಅಬ್ಬಕ್ಕ ಭವನಕ್ಕೆ ಎಂಟು ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು ಶೀಘ್ರದಲ್ಲಿಯೇ ಭವನ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಆ ಭವನದಲ್ಲಿ ಅಬ್ಬಕ್ಕಳ ಬದುಕನ್ನು ಇಡೀ ಪ್ರಪಂಚವೇ ಕಣ್ತೆರೆದು ನೋಡುವಂತೆ ಮಾಡುವಂತಹ ಎಲ್ಲ ಪ್ರಯತ್ನ ಸರಕಾರ ಮಾಡಲಿದೆ ಎಂದರು.

ಶಾಸಕ ಯು.ಟಿ. ಖಾದರ್‌, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್‌, ಜಿಲ್ಲಾ ಧಿಕಾರಿ ಸಿಂಧೂ ಬಿ. ರೂಪೇಶ್‌, ಅಪರ ಜಿಲ್ಲಾ ಧಿಕಾರಿ ಎಂ.ಜೆ. ರೂಪಾ, ಸಹಾಯಕ ಆಯುಕ್ತ ಮದನ್‌ ಮೋಹನ್‌, ತಹಶೀಲ್ದಾರ್‌ ಗುರುಪ್ರಸಾದ್‌, ವಾರ್ತಾಧಿಕಾರಿ ಖಾದರ್‌ ಷಾ ಉಪಸ್ಥಿತರಿದ್ದರು.
ರಾಜೇಂದ್ರ ಕಲಾºವಿ ಹಾಗೂ ಬಬಿತಾ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಕೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next