Advertisement
ಈ ಸಂದರ್ಭ ಮಾಹಿತಿ ನೀಡಿದ ಅಧಿಕಾರಿಗಳು ಡಂಪಿಂಗ್ ಯಾರ್ಡ್ ಪ್ರದೇಶದಲ್ಲಿ ತಡೆಗೋಡೆ, ತ್ಯಾಜ್ಯಗಳ ವಿಲೇವಾರಿ ಕುರಿತಂತೆ ಎನ್‌ಐಟಿಕೆ ತಜ್ಞರಲ್ಲಿ ಚರ್ಚಿಸಲಾಗಿದೆ. ಮಳೆಗಾಲದಲ್ಲಿ ತ್ಯಾಜ್ಯ ಪ್ರದೇಶದಲ್ಲಿ ಹರಿಯುವ ನೀರಿನ ಹರಿವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು. ಸ್ಥಳೀಯರು ಈ ಭಾಗದಲ್ಲಿ ಸಮಸ್ಯೆಯಲ್ಲಿದ್ದರೂ ಸಮರೋಪಾದಿಯಲ್ಲಿ ಸ್ಪಂದಿಸದ ಅ ಧಿಕಾರಿಗಳ ನಿಧಾನಗತಿಯ ಪರಿಹಾರ ಕಾರ್ಯಗಳಿಗೆ ಅಸಮಧಾನ ವ್ಯಕ್ತ ಪಡಿಸಿದರು.
ಎಂಟು ತಿಂಗಳುಗಳಿಂದ ನಮಗೆ ಪರಿಹಾರ, ಮುಂದಿನ ಕ್ರಮದ ಬಗ್ಗೆ ಮಹಿತಿ ಸಿಗುತ್ತಿಲ್ಲ. 27 ಕುಟುಂಬಗಳು ಅತಂತ್ರವಾಗಿವೆ. 18 ಕುಟುಂಬಗಳು ಸರಕಾರ ಒದಗಿಸಿದ ಫ್ಲ್ಯಾಟ್‌ನಲ್ಲಿ ವಾಸವಿದ್ದಾರೆ ಎಂದು ಸಂತ್ರಸ್ಥ ಕುಟುಂಬದ ಮಂದಾರಬೈಲು ರಾಜೇಶ್ ಭಟ್, ಗಣೇಶ್ ಹೇಳಿದಾಗ, ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು ಯಾರಿಗೂ ಅನ್ಯಾಯ ವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಶಾಸಕರು, ಪಾಲಿಕೆಯ ಮೇಯರ್ ಸಹಿತ ಜನಪ್ರತಿನಿ ಧಿಗಳನ್ನು ವಿಶ್ವಾಸಕ್ಕೆ ಪಡೆದು ಶೀಘ್ರ ತಡೆಗೋಡೆ ಸಹಿತ ಪರಿಹಾರ ಕಾರ್ಯ ಆರಂಭಿಸಬೇಕು. ಕಾಮಗಾರಿಯ ಚಿತ್ರವನ್ನು ವಾಟ್ಸ್‌ಆಪ್ ಮೂಲಕ ತನಗೆ ಕಳಿಸಬೇಕು. ಮುಂದಿನ ತಿಂಗಳ ಪ್ರವಾಸದ ಮುನ್ನ ಕಾಮಗಾರಿ ಆರಂಭವಾಗಿರಬೇಕು. ಇದಕ್ಕೆ ಬೇಕಾದ ಎಲ್ಲ ಸಹಕಾರವನ್ನು ಇಲಾಖೆ ನೀಡುತ್ತದೆ. ಇನ್ನೂ ವಿಳಂಬವಾದಲ್ಲಿ ತಪ್ಪಿತಸ್ಥ ಅಧಿ ಕಾರಿಗಳ ಮೇಲೆ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಿದರು. ಶಾಸಕ ವೇದವ್ಯಾಸ ಕಾಮತ್, ಮೇಯರ್ ದಿವಾಕರ್, ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ, ಜಂಟಿ ಆಯುಕ್ತ ಸಂತೋಷ್ ಕುಮಾರ್, ಭಾಸ್ಕರ ಮೊಲಿ, ಸ್ಥಳೀಯ ಕಾರ್ಪೊರೇಟರ್ ಸಂಗೀತಾ, ಹಿರಿಯ ಪಾಲಿಕೆ ಎಂಜಿನಿಯರ್‌ಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
Related Articles
ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಈ ಸಂದರ್ಭ ಸ್ಥಳೀಯರಿಗೆ ಪರಿಹಾರಕ್ಕೆ ಈಗಾಗಲೇ ಸರಕಾರ 8 ಕೋ.ರೂ. ಬಿಡುಗಡೆ ಮಾಡಿದ್ದರೂ ಸಾಕಾಗದು. ಸ್ಥಳೀಯರನ್ನು ಇದೀಗ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾಂತರಿಸಲಾಗಿದೆ. ಪರ್ಯಾಯ ವ್ಯವಸ್ಥೆ, ಅವರ ಕೃಷಿ ಭೂಮಿ ಮತ್ತಿತರ ಕಳೆದುಕೊಂಡ ಭೂಮಿ, ಮನೆ ಮತ್ತಿತರ ವಸ್ತುಗಳ ಮೌಲ್ಯ ನಿಗದಿ, ಪರಿಹಾರ ಮತ್ತಿತರ ಕ್ರಮಗಳಿಗೆ ಹೆಚ್ಚುವರಿ ಅನುದಾನ ಬಿಡಗಡೆಗೊಳಿಸುವಂತೆ ಮನವಿ ಮಾಡಿದರು.
Advertisement
ಸಿಎಂ ಜತೆ ಚರ್ಚಿಸಿ ಕ್ರಮಪಚ್ಚನಾಡಿ ತ್ಯಾಜ್ಯ ಕುಸಿತ ತೆರವು ಹಾಗೂ ಪರಿಹಾರ ಕಾರ್ಯಗಳಿಗೆ ಈಗಾಗಲೇ ಸರಕಾರ 8 ಕೋಟಿ ರೂ. ಬಿಡುಗಡೆಗೊಳಿಸಿದೆ. ಸಮಗ್ರ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಇನ್ನೂ 20 ಕೋಟಿ ರೂ.ಗಳ ಅಗತ್ಯವಿದೆ ಎಂದು ಆಯುಕ್ತರು ಹಾಗೂ ಶಾಸಕರು ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಎ. ಬಸವರಾಜ್ ತಿಳಿಸಿದರು.