Advertisement

ಲಯನ್ಸ್‌ ಸೇವೆಗೆ 8 ಪ್ರಶಸ್ತಿ ಗರಿ

03:38 PM Jul 20, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಲಯನ್ಸ್‌ ಕ್ಲಬ್‌ನಿಂದ ಕೈಗೊಂಡ ಹಲವು ಸಾಮಾಜಿಕ ಸೇವೆಗೆ 8 ಪ್ರಶಸ್ತಿಗಳು ಬಂದಿದ್ದು, ಪ್ರಸಕ್ತ ವರ್ಷ ಇನ್ನೂ ಹೆಚ್ಚಿನ ಸಾಮಾಜಿಕ ಸೇವೆ ಕೈಗೊಳ್ಳಲು ಲಯನ್ಸ್‌ ಕ್ಲಬ್‌ ಮುಂದಾಗಿದೆ ಎಂದು ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಡಾ| ವಿಕಾಸ ದಡ್ಡೇನವರ ಹೇಳಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್‌ ಕ್ಲಬ್‌ನ ಜಿಲ್ಲಾ ಶಾಖೆ, ಕಳೆದ 48 ವರ್ಷಗಳಿಂದ ಬಡವರ ಸೇವೆಯಲ್ಲಿ ತೊಡಗಿದೆ. ಪ್ರಸ್ತುತ ವರ್ಷ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ನೂತನ ಪದಾಧಿಕಾರಿಗಳು, ಹಲವು ವಿನೂತನ ಸೇವೆಗೈಯಲು ಸಜ್ಜಾಗಿದ್ದಾರೆ ಎಂದರು.

ಕ್ಲಬ್‌ನ ನೂತನ ಅಧ್ಯಕ್ಷರಾಗಿ ಖ್ಯಾತ ಚಿಕ್ಕ ಮಕ್ಕಳ ತಜ್ಞವೈದ್ಯ ಡಾ| ರಾಘವೇಂದ್ರ ವನಕಿ ಜು.21ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಕಾರ್ಯದರ್ಶಿಯಾಗಿ ವೈಜನಾಥ ಪಾಟೀಲ, ಖಜಾಂಚಿಯಾಗಿ ಹರ್ಷಾ ಕಂಠಿ ಆಯ್ಕೆಯಾಗಿದ್ದಾರೆ. ಲಯನ್ಸ್‌ ಕ್ಲಬ್‌ನ ಅಧ್ಯಕ್ಷೆಯಾಗಿ ಡಾ| ಸುಚಿತ್ರಾ ವನಕಿ, ಕಾರ್ಯದರ್ಶಿಯಾಗಿ ರಜನಿ ಪಾಟೀಲ, ಖಜಾಂಚಿಯಾಗಿ ಶೃತಿ ಕಂಠಿ ನೇಮಕಗೊಂಡಿದ್ದಾರೆ. ಇದೇ ಮೊದಲ ಬಾರಿಗೆ ಲಯನ್ಸ್‌ ಕ್ಲಬ್‌ನ ಉಪ ಶಾಖೆ ರಚನೆ ಮಾದು, ಅದರ ಅಧ್ಯಕ್ಷೆಯಾಗಿ ಡಾ| ಅರ್ಚನಾ ದಡ್ಡೇನವರ, ಕಾರ್ಯದರ್ಶಿಯಾಗಿ ಡಾ| ಕ್ಷಮತಾ ಕೆರೂಡಿ, ಖಜಾಂಚಿಯಾಗಿ ಸುಷ್ಮಾ ಹಿರೇಮಠ, ಜು.21ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ಅಗತ್ಯವಿದ್ದಲ್ಲಿ ಲಯನ್ಸ್‌: ಎಲ್ಲಿ ಅಗತ್ಯವಿದೆಯೋ ಅಲ್ಲಿ ಲಯನ್ಸ್‌ ಇದೆ ಎಂಬ ಗುರಿಯೊಂದಿಗೆ ವಿಶ್ವದಾದ್ಯಂತ ಲಯನ್ಸ್‌ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ವಿಶ್ವದ 200 ದೇಶಗಳು, 47 ಸಾವಿರ ಶಾಖೆಗಳು ಹಾಗೂ 1.4 ಮಿಲಿಯನ್‌ ಸದಸ್ಯರೊಂದಿಗೆ ಸಮಾಜದ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಪರಿಸರ ಸಂರಕ್ಷಣೆ, ಯುವ ಜನತೆ ಏಳ್ಗೆ, ಹಸಿವು ಮುಕ್ತ ಭಾರತ, ಜನರ ಮೊಗದಲ್ಲಿ ಸಂತಸ ಎಂಬ ಕಳಿಕಳಿಯೊಂದಿಗೆ ನಿರಂತರ ಶ್ರಮಿಸುತ್ತಿದೆ. ಕಳೆದ 2018ರಲ್ಲಿ ಲಯನ್ಸ್‌ ಕ್ಲಬ್‌ 100ಕ್ಕೂ ಹೆಚ್ಚು ಸಾಮಾಜಿಕ ಚಟುವಟಿಕೆ ಹಮ್ಮಿಕೊಂಡು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ಸಾಮಾಜಿಕ ಸೇವೆಗೆ 8 ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದರು.

ಲಯನ್ಸ್‌ ಕ್ಲಬ್‌ ನೂತನ ಅಧ್ಯಕ್ಷ ಡಾ| ರಾಘವೇಂದ್ರ ವನಕಿ ಮಾತನಾಡಿ, ಹಿಂದಿನ ವರ್ಷದ ಪದಾಧಿಕಾರಿಗಳ ಸಲಹೆ, ಮಾರ್ಗದರ್ಶನದ ಜತೆಗೆ ಮುಂಬರುವ ವರ್ಷ ಜಿಲ್ಲೆಯಲ್ಲಿ ಹಮ್ಮಿಕೊಳ್ಳಬೇಕಾದ ಸಾಮಾಜಿಕ ಸೇವೆಗಳ ಪಟ್ಟಿ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಶ್ರೀಮಂತರು, ಉದ್ಯಮಿಗಳ ಮನೆಯಲ್ಲಿ ಅನಗತ್ಯವಾಗಿರುವ ವಸ್ತುಗಳನ್ನು ಸಂಗ್ರಹಿಸಿ, ಅಗತ್ಯವಿರುವವರ ಮನೆಗೆ ಹಂಚುವ ವಿಶೇಷ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದರು.

Advertisement

ಲಯನ್ಸ್‌ ಕ್ಲಬ್‌ನ ಎಂ.ಎಸ್‌. ಜಿಗಜಿನ್ನಿ, ಹನಮಂತ ದೊಡಮನಿ, ವೈಜನಾಥ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next