Advertisement

8, 9ನೇ ತರಗತಿಗೆ ಎಸ್ಸೆಸ್ಸೆಲ್ಸಿ ಸ್ವರೂಪದ ಪ್ರಶ್ನೆಪತ್ರಿಕೆ

11:36 PM Nov 05, 2019 | Team Udayavani |

ಮಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮಗೊಳಿಸುವುದಕ್ಕಾಗಿ ಪ್ರಶ್ನೆಪತ್ರಿಕೆಗಳ ಸ್ವರೂಪದಲ್ಲಿ ಬದಲಾವಣೆ ಮಾಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಈಗ 8 ಮತ್ತು 9ನೇ ತರಗತಿ ಹಂತದಲ್ಲೇ 10ನೇ ತರಗತಿಯ ಪ್ರಶ್ನೆಪತ್ರಿಕೆಯ ಸ್ವರೂಪವನ್ನು ಅಳವಡಿಸಲು ಎಲ್ಲ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚಿಸಿದೆ.

Advertisement

ಒಟ್ಟು ಪ್ರಶ್ನೆಗಳ ಸಂಖ್ಯೆ 40ರಿಂದ 38ಕ್ಕೆ ಇಳಿಕೆ, ಬಹು ಆಯ್ಕೆ-ಒಂದು ಅಂಕದ ಪ್ರಶ್ನಾಸಂಖ್ಯೆಯಲ್ಲಿ ಸಮಾನತೆ, ಎರಡು ಅಂಕದ ಪ್ರಶ್ನೆಗಳು 16ರಿಂದ 8ಕ್ಕೆ ಇಳಿಕೆ, 3 ಅಂಕದ ಪ್ರಶ್ನೆ 6ರಿಂದ 9ಕ್ಕೆ ಏರಿಕೆ ಮತ್ತು ಹೊಸದಾಗಿ ಐದು ಅಂಕದ ಪ್ರಶ್ನೆ ಸೇರ್ಪಡೆ ಸೇರಿ ಎಸೆಸ್ಸೆಲ್ಸಿ ಪ್ರಶ್ನೆಪತ್ರಿಕೆಯ ಸ್ವರೂಪದಲ್ಲಿ ಈ ಬಾರಿ ಅಲ್ಪಪ್ರಮಾಣದಲ್ಲಿ ಬದಲಾವಣೆ ಮಾಡಲು ಇಲಾಖೆ ನಿರ್ಧರಿಸಿದೆ.

ಮುಂಬರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಸಿಗುವುದಕ್ಕಾಗಿ ಇದೇ ಸ್ವರೂಪದ ಪ್ರಶ್ನೆಪತ್ರಿಕೆಯನ್ನು 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆಯುವ ಪೂರ್ವದಲ್ಲಿ ಬದಲಾದ ಸ್ವರೂಪದ ಪ್ರಶ್ನೆಪತ್ರಿಕೆಯನ್ನು 8, 9ನೇ ತರಗತಿ ಹಂತದಲ್ಲಿ ಜಾರಿಗೆ ತಂದಲ್ಲಿ ಮುಂದೆ ಅವರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅನುಕೂಲವಾಗಲಿದೆ ಎಂಬುದು ಇದರ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next