Advertisement

ವರ್ಷದೊಳಗೆ 7ನೇ ವೇತನ ಆಯೋಗದ ಸೌಲಭ್ಯ: ಸಿ.ಎಸ್‌. ಷಡಾಕ್ಷರಿ

12:10 AM Jun 27, 2022 | Team Udayavani |

ಉಡುಪಿ: ಸರಕಾರಿ ನೌಕರರ 7ನೇ ವೇತನ ಆಯೋಗದ ರಚನೆ ಕುರಿತಂತೆ ಒಂದು ತಿಂಗಳೊಳಗೆ ಸಮಿತಿ ರಚನೆಯಾಗಲಿದೆ. ಇದೇ ವರ್ಷದ ಡಿಸೆಂಬರ್‌ ಒಳಗೆ ರಾಜ್ಯದ ಸರಕಾರಿ ನೌಕರರ ಬಹು ನಿರೀಕ್ಷಿತ ವೇತನ ಆಯೋಗದ ಸೌಲಭ್ಯಗಳನ್ನು ನೌಕರರಿಗೆ ದೊರಕಿಸುವಲ್ಲಿ ಸಂಘ ಬದ್ಧವಾಗಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಹೇಳಿದರು.

Advertisement

ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿ ವಾರ ಜರಗಿದ ಜಿಲ್ಲಾ ಸರಕಾರಿ ನೌಕರರ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.

ಈ ಡಿಸೆಂಬರ್‌ ಒಳಗೆ ಆರ್ಥಿಕ ಸೌಲಭ್ಯಗಳನ್ನು ನೌಕರರಿಗೆ ನೀಡುವಂತೆ ಸರ ಕಾರದ ಮೇಲೆ ಒತ್ತಡ ಹಾಕಲಾಗಿದ್ದು, ಡಿ ದರ್ಜೆ ನೌಕರರಿಗೆ 10 ಸಾವಿರ ರೂ., ಸಿ ದರ್ಜೆ ನೌಕರರರಿಗೆ 20 ಸಾವಿರ ರೂ., ಬಿ ದರ್ಜೆ ಅಧಿಕಾರಿಗಳಿಗೆ 30 ಸಾವಿರ ರೂ. ಹಾಗೂ ಎ ದರ್ಜೆ ಅಧಿಕಾರಿಗಳಿಗೆ ಕನಿಷ್ಠ 40 ಸಾವಿರ ರೂ. ವರೆಗೆ ವೇತನ ಹೆಚ್ಚಳವಾಗಲಿದೆ ಎಂದರು.

ಶೇ. 100 ಉಚಿತ ಚಿಕಿತ್ಸೆ
ಸರಕಾರಿ ನೌಕರರಿಗೆ ನಗದು ರಹಿತ ಶೇ. 100 ಉಚಿತ ಆರೋಗ್ಯ ಚಿಕಿತ್ಸೆ ನೀಡುವ ಯೋಜನೆ ಶೀಘ್ರದಲ್ಲಿ ಜಾರಿಯಾಗಲಿದ್ದು, ಈ ಕುರಿತಂತೆ ಅಂತಿಮ ಸಭೆ ನಡೆಯಲಿದೆ. ಈ ಯೋಜನೆಯ ಮೂಲಕ ನೌಕರರು ಮತ್ತು ಅವರ ಅವಲಂಬಿತರು ಯಾವುದೇ ಕಾಯಿಲೆಗಳಿಗೆ 1 ಲಕ್ಷದಿಂದ 1 ಕೋಟಿ ರೂ.ವರೆಗೆ ಯಾವುದೇ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯದ 6 ಲಕ್ಷ ನೌಕರರ ಸಮಸ್ಯೆಗಳನ್ನು ಆಧ್ಯಯನ ಮಾಡಿ ಇವುಗಳನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟಿದೆ ಎಂದರು.

ಸರಕಾರಿ ನೌಕರರ ಸೇವಾವಹಿಗಳನ್ನು ಆನ್‌ಲೈನ್‌ ಮಾಡಲಾಗುತ್ತಿದ್ದು, ಎಚ್‌ಆರ್‌ಎಂಎಸ್‌, ಮಹಾ ಲೇಖಪಾಲರ ಕಚೇರಿ ಮತ್ತು ಖಜಾನೆ ಗಳನ್ನು ಪರಸ್ಪರ ಜೋಡಣೆ ಮಾಡುವ ಮೂಲಕ ನಿವೃತ್ತ ನೌಕರರು ನಿವೃತ್ತಿ ದಿನವೇ ಪಿಂಚಣಿ ಪಡೆಯುವಂತೆ ಯೋಜನೆ ರೂಪಿಸಲಾಗುತ್ತಿದೆ. ಕೆಜಿಐಡಿ ಯನ್ನು ಆನ್‌ಲೈನ್‌ ಮಾಡಲಾಗಿದ್ದು ಅರ್ಜಿ ಸಲ್ಲಿಸಿದ 7 ದಿನಗಳ‌ ಒಳಗೆ ಸಾಲದ ಮೊತ್ತ ಬ್ಯಾಂಕ್‌ ಖಾತೆಗೆ ಜಮೆ ಆಗುವ ಯೋಜನೆ 1 ತಿಂಗಳೊಳಗೆ ಜಾರಿಗೆ ತರುವ ಚಿಂತನೆಯಿದೆ. 2019ರಿಂದ ಬಾಕಿ ಇರುವ ಕೆಜಿಐಡಿ ಬೋನಸ್‌ ಮೊತ್ತ 488 ಕೋಟಿ ರೂ. ಒಂದು ವಾರದಲ್ಲಿ ಬಿಡುಗಡೆ ಆಗಲಿದೆ. ಎನ್‌ಪಿಎಸ್‌ ಬದಲು ಹಳೆಯ ಪಿಂಚಣಿ ವ್ಯವಸ್ಥೆಜಾರಿಗೆ ತರುವ ಕುರಿತಂತೆ ಮುಖ್ಯಮಂತ್ರಿ ಯವರೊಂದಿಗೆ ಚರ್ಚಿ ಸಿದ್ದು, ರಾಜ್ಯದ ಸರಕಾರಿ ನೌಕರರ ಹಿತ ಕಾಪಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next