Advertisement

ಒಡಿಶಾ: 8 ಲಕ್ಷ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ

07:12 PM Mar 02, 2018 | udayavani editorial |

ಹೊಸದಿಲ್ಲಿ / ಭುವನೇಶ್ವರ : ಒಡಿಶಾ ಸರಕಾರ ಸಾರ್ವಜನಿಕ ರಂಗದ ಉದ್ಯಮಗಳ ನೌಕರರಿಗೆ 7ನೇ ವೇತನ ಆಯೋಗವನ್ನು ಅನುಷ್ಠಾನಿಸಲು ನಿರ್ಧರಿಸಿದೆ. ಇದರಿಂದಾಗಿ ಹೋಳಿ ಹಬ್ಬದ ಈ ಸಂದರ್ಭದಲ್ಲಿ  ಎಂಟು ಲಕ್ಷಕ್ಕೂ ಅಧಿಕ ರಾಜ್ಯ ಸರಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.

Advertisement

ರಾಜ್ಯದಲ್ಲಿ 7ನೇ ವೇತನ ಆಯೋಗವನ್ನು 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಅನುಷ್ಠಾನಿಸಲಾಗುವುದೆಂದು ರಾಜ್ಯ ಸರಕಾರಿ ಮೂಲಗಳು ತಿಳಿಸಿವೆ. 

ರಾಜ್ಯದ ಮುಖ್ಯಮಂತ್ರಿ ನವೀನ್‌ ಪಟ್ಟನಾಯಕ್‌ ಅವರು ರಾಜ್ಯದ ಪಿಎಸ್‌ಯು ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ವೇತನವನ್ನು ಪರಿಷ್ಕರಿಸುವಂತೆ ಸಂಬಂಧಿತ ಇಲಾಖೆಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next