Advertisement

ಬಂಟರ ಸಂಘ ಸಿಟಿ ಪ್ರಾದೇಶಿಕ  ಸಮಿತಿಯ 7ನೇ  ವಾರ್ಷಿಕೋತ್ಸವ  

03:34 PM Oct 12, 2017 | Team Udayavani |

ಮುಂಬಯಿ: ಬಂಟರ ಸಂಘ ಪ್ರಾದೇಶಿಕ ವಿಭಾಗಗಳು ಸಂಘದ ಬಹುದೊಡ್ಡ ಆಸ್ತಿಯಂತಿವೆ. ಸಂಘವನ್ನು ಸಂರಕ್ಷಿಸುವ ಸೈನಿಕ ಬಲದಂತೆ ಅವು ಸದಾ ಕಾರ್ಯನಿರ್ವಹಿಸುತ್ತಿದ್ದು ಸಂಘದ ಶಕ್ತಿ ಇನ್ನಷ್ಟು ಪ್ರಬಲವಾಗಿದೆ ಎಂದು  ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ನುಡಿದರು.

Advertisement

ಅ. 8ರಂದು ಅಪರಾಹ್ನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಸಿಟಿ ಪ್ರಾದೇಶಿಕ ಸಮಿತಿಯ  7ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿದ್ದು, ಸಮಿತಿಯ ಅತ್ಯಂತ ನಿಕಟವರ್ತಿಯಾಗಿರುವ ನನಗೆ, ಈ ಸಮಿತಿಯ ಬಗ್ಗೆ ಅಪಾರ ಅಭಿಮಾನವಿದೆ. ಸಮಿತಿಯು ಉತ್ತಮ ಕಾರ್ಯಚಟುವಟಿಕೆಗಳಿಂದ ಗುರುತಿಸಿಕೊಂಡಿರುವುದು ಅಭಿನಂದನೀಯ. ಸಂಘದ ಅತ್ಯಂತ ಮಹತ್ವದ ಆರೋಗ್ಯ ಭಾಗ್ಯ, ಕಂಕಣ ಭಾಗ್ಯ ಯೋಜನೆಯನ್ನು ಜಾರಿಗೆ ತರುತ್ತಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅನಾರೋಗ್ಯ ಪೀಡಿತರ ಶಸ್ತÅಕ್ರಿಯೆ ಹಾಗೂ ಸಮುದಾಯದ ಹೆಣ್ಮಕ್ಕಳ ವಿವಾಹಕ್ಕಾಗಿ ಸಹಾಯ ನೀಡುವ ಈ ಯೋಜನೆ ಸಂಘದ ಜೊತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ ಅವರ ನೇತೃತ್ವದಲ್ಲಿ ಶೀಘ್ರವೇ ಕಾರ್ಯಗತವಾಗಲಿದ್ದು, ಈ ಯೋಜನೆಗೆ ಮಹಾದಾನಿಗಳು ಮುಕ್ತ ಮನಸ್ಸಿನಿಂದ ಸಹಾಯ ನೀಡುವರೆಂಬ ವಿಶ್ವಾಸ ನನಗಿದೆ. ಬಂಟರ ಸಂಘ ಬಂಟ ಸಮಾಜದ ಸೇವೆಗಾಗಿ ನಿಂತಿರುವ ಸಂಸ್ಥೆಯಾಗಿದೆ. ಸಮಾಜ ಬಾಂಧವರೆಲ್ಲರೂ ಇದರ ಪ್ರಯೋಜನ ಪಡೆದು ತಾವು ಪಡೆದ ಸಹಾಯದ ಋಣವನ್ನು ಮುದೊಂದು ದಿನ ಸಂಘಕ್ಕೆ ಹಿಂದಿರುಗಿಸುವಂತೆ ವಿನಂತಿಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಕಟೀಲು ಎಸ್‌ಡಿಪಿಟಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಬಾಲಕೃಷ್ಣ ಶೆಟ್ಟಿ ಅವರು ಮಾತನಾಡಿ, ಸುಸಂಸ್ಕೃತ ಯುವ ಜನಾಂಗವನ್ನು ನಿರ್ಮಿಸುವಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿದೆ. ಮನೆಯೇ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು ಎನ್ನುವಂತೆ ತನ್ನ ಮಕ್ಕಳ ಉಜ್ವಲ ಭವಿಷ್ಯವನ್ನು ನಿರ್ಮಿಸುವಲ್ಲಿ ತಾಯಿಯೇ ಶ್ರೇಷ್ಠ ಶಿಲ್ಪಿಯಾಗುತ್ತಾಳೆ. ನಾವು ಸಾಮರಸ್ಯದಿಂದ ಸಂಘ-ಸಂಸ್ಥೆಗಳಲ್ಲಿ ದುಡಿಯಬೇಕು ಎಂದರು.

ಮತ್ತೋರ್ವ ಗೌರವ ಅತಿಥಿ ಆರ್ಟ್‌ ಆಫ್‌ ಲಿವಿಂಗ್‌ ಆರ್ಗನೈಜೇಶನ್‌ ಅಂತಾರಾಷ್ಟ್ರೀಯ ಪ್ರತಿನಿಧಿ ವಿನಯಾ ಹೆಗ್ಡೆ ಅವರು ಮಾತನಾಡಿ, ಜೀವನದಲ್ಲಿ ಆಧ್ಯಾತ್ಮಿಕ ಚಿಂತನೆಯನ್ನು ಅಳವಡಿಸಿಕೊಳ್ಳುವುದರಿಂದ ನಮ್ಮ ಸಾಮರ್ಥ್ಯ ಬಲವು ಹೆಚ್ಚುತ್ತದೆ. ಮಾನವ ಜನ್ಮ ಪವಿತ್ರವಾದುದು. ಈ ಜನ್ಮದಲ್ಲಿ ಬದುಕಿರುವವರೆಗೆ ನಮ್ಮ ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಕಾಯ್ದಿಟ್ಟುಕೊಳ್ಳಬೇಕು ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಮೆಕೆನ್ಸಿ ಆ್ಯಂಡ್‌ ಕಂಪೆನಿ ಇದರ ಸಮೀರ್‌ ಶೆಟ್ಟಿ ಬಿಟೆಕ್‌ ಅವರು ಮಾತನಾಡಿ, ನಾವು ಯಾವುದೇ ವಿದ್ಯೆಯಲ್ಲಿ ಪರಿಣತರಾಗಬೇಕಾದರೆ ನಮ್ಮಲ್ಲಿ ಅಭ್ಯಾಸ ಧ್ಯಾನ ಬಹಳ ಅಗತ್ಯ. ನಮ್ಮ ಮನಸ್ಸನ್ನು ಒಂದೇ ವಿಚಾರದ ಬಗ್ಗೆ ಕೇಂದ್ರೀಕರಿಸಿಕೊಂಡು ಸುಮಾರು ಹತ್ತು ಸಾವಿರ ಗಂಟೆಗಳಷ್ಟು ಪ್ರಯತ್ನ ಪಟ್ಟರೆ ನಮಗೆ ಬೇಕಾದ ವಿದ್ಯೆ ಪರಿಪೂರ್ಣವಾಗಿ ಕರಗತವಾಗುತ್ತದೆ ಎಂದು ನುಡಿದರು.

Advertisement

ಸಿಟಿ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿರುವ ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈಯುತ್ತಿರುವ ಸಾಧಕರಾದ ಮೇಘ… ದರ್ಶನ್‌ ಹೊಟೇಲ್‌ ರಾಜಾ ದಾದರ್‌ ಇದರ ಮಾಲಕ ಸಾಧು ಎಸ್‌. ಶೆಟ್ಟಿ ಕಾಲೋಟುಗುತ್ತು ಮತ್ತು ಲಕ್ಷ್ಮೀ ಎಸ್‌. ಶೆಟ್ಟಿ ದಂಪತಿ, ಬಂಟರ ಸಂಘ ಮುಂಬಯಿ ಮಾಜಿ ಕೋಶಾಧಿಕಾರಿ ಪ್ರಭಾಕರ ಬಿ. ಶೆಟ್ಟಿ ಎಫ್‌ಸಿಎ ಮತ್ತು ಪುಷ್ಪಲತಾ ಪಿ. ಶೆಟ್ಟಿ ದಂಪತಿ, ಕಾಸೆ¾ಟಿಕ್‌ ಆ್ಯಂಡ್‌ ಅಸೆಥೆಟಿಕ್‌ ಡೆಂಟಿಸ್ಟ್‌ ಡಾ| ಉದಯ್‌ ಬಿ. ಶೆಟ್ಟಿ ದಂಪತಿ, ಆಲ್‌ ಸೀಸನ್ಸ್‌ ಬ್ಯಾಂಕ್ವೆಟ್‌ ನಿರ್ದೇಶಕ ಕಿರಣ್‌ ಶೆಟ್ಟಿ ಮತ್ತು ವಿದ್ಯಾ ಕೆ. ಶೆಟ್ಟಿ ದಂಪತಿಯನ್ನು ಈ ಸಂದರ್ಭದಲ್ಲಿ ಸಮ್ಮಾನಿಸಲಾಯಿತು.

ಪೆನಿನ್ಸೂಲಾ ಗ್ರಾÂಂಡ್‌ ಹೊಟೇಲ್‌ನ ಸತೀಶ್‌ ಶೆಟ್ಟಿ ಮತ್ತು ಶಶಿಕಾಂತಿ ಎಸ್‌. ಶೆಟ್ಟಿ ದಂಪತಿಯನ್ನು ಆಲ್‌ಟೈಮ್‌ ಸಪೋರ್ಟರ್‌ ಪ್ರಶಸ್ತಿಯನ್ನು ಪ್ರಧಾನಿಸಲಾಯಿತು. ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಕೃಷ್ಣ ವಿ. ಶೆಟ್ಟಿ ಮತ್ತು ಕಲ್ಪನಾ ಕೆ. ಶೆಟ್ಟಿ,  ಕಾರ್ಯಾಧ್ಯಕ್ಷೆ ಉಮಾ ಕೆ. ಶೆಟ್ಟಿ ಮತ್ತು ಕೃಷ್ಣ ಕೆ. ಶೆಟ್ಟಿ ದಂಪತಿಗಳು, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರದೀಪ್‌ ಬಿ. ಶೆಟ್ಟಿ ಮತ್ತು ಮೇಘಾ ಪಿ. ಶೆಟ್ಟಿ ದಂಪತಿ ಇವರ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.  ಸಿಟಿ ಪ್ರಾದೇಶಿಕ ವಲಯದಲ್ಲಿದ್ದು, ಶಿಕ್ಷಣ ಕ್ರೀಡೆ ಹಾಗೂ ಕಲಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧಕರಾಗಿ ಮಿಂಚಿರುವ ಶಾಲಾ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಾಧನ ಪ್ರಶಸ್ತಿಯನ್ನು ನೀಡಲಾಯಿತು. ಸಮ್ಮಾನ ಪತ್ರವನ್ನು ಕಾರ್ಯದರ್ಶಿ ನಲ್ಯಗುತ್ತು ಪ್ರಕಾಶ್‌ ಶೆಟ್ಟಿ, ಅಶೋಕ್‌ ಪಕ್ಕಳ ವಾಚಿಸಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅಶೋಕ್‌ ಪಕ್ಕಳ ಅವರನ್ನು ಗೌರವಿಸಲಾಯಿತು.

ಪ್ರಾಯೋಜಕರಾಗಿ ಸಹಕರಿಸಿದ ಇಸ್ಸಾರ್‌ ಫೈನಾನ್ಶಿಯಲ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಆರ್‌. ಕೆ. ಶೆಟ್ಟಿ ಆ್ಯಂಡ್‌ ಕಂಪೆನಿಯ ಆರ್‌. ಕೆ. ಶೆಟ್ಟಿ, ಶಾರದಾ ರೆಸಿಡೆನ್ಸಿಯ ಅಶೋಕ್‌ ಶೆಟ್ಟಿ, ಅನಿತಾ ಎಸ್‌. ಶೆಟ್ಟಿ ದಂಪತಿ, ಲಕ್ಷ್ಮೀ ಹೊಟೇಲ್‌ನ ಚಂದ್ರಕಾಂತ ಶೆಟ್ಟಿ ಅವರನ್ನು  ಗೌರವಿಸಲಾಯಿತು.

ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ದೊಡ್ಡಗುತ್ತು ಭುಜಂಗ ಆರ್‌. ಶೆಟ್ಟಿ ಸ್ವಾಗತಿಸಿ ಮಾತನಾಡಿ, ಬಂಟರ ಸಂಘದ ಎಂಟನೇ ಪ್ರಾದೇಶಿಕ ಸಮಿತಿಯು ಸಂಘದ ಅಧ್ಯಕ್ಷರಾಗಿದ್ದ ಐಕಳ ಹರೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಸಮಿತಿಯಾಗಿದೆ. ಸೂರ್ಯಚಂದ್ರರಿರುವ ತನಕ ಶಾಶ್ವತವಾಗಿ ಬೆಳೆದು ಬರಬೇಕು. ಸಮಿತಿಯ ಕಾರ್ಯಚಟವಟಿಕೆಗಳಿಗೆ ಸದಾ ನೆರವು ನೀಡುತ್ತಿರುವ ದಾನಿಗಳನ್ನು ಮರೆಯಲು ಸಾಧ್ಯವಿಲ್ಲ. ಇಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವವರು ಅತೀ ವಿರಳ ಎಂಬುದು ಸಂತೋಷದ ಸಂಗತಿಯಾಗಿದೆ ಎಂದರು.

ಸಮಿತಿಯ ಸಂಚಾಲಕ ಕೃಷ್ಣ ವಿ. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಂಟರ ಸಂಘದ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಸಮಿತಿಗಳ ಪಾತ್ರ ಮಹತ್ತರವಾಗಿದೆ. ಸಮಿತಿಗಾಗಿ ಅತ್ಯುತ್ತಮ ಸೇವೆ ಮಾಡಿದ್ದೇನೆ ಎಂಬ ಸಂತೃಪ್ತಿ ನನ್ನಲ್ಲಿದೆ. ಮುಂದೆಯೂ ಸಿಟಿ ಪ್ರಾದೇಶಿಕ ಸಮಿತಿಗೆ ನನ್ನ ಸೇವೆ ಸದಾಯಿರಲಿದೆ ಎಂದರು. ಕಾರ್ಯದರ್ಶಿ ನಲ್ಯಗುತ್ತು ಪ್ರಕಾಶ್‌ ಟಿ. ಶೆಟ್ಟಿ ಗತ ವಾರ್ಷಿಕ ವರದಿ ಮಂಡಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕಲ್ಪನಾ ಕೆ. ಶೆಟ್ಟಿ ಮಹಿಳಾ ವಿಭಾಗದ ವರದಿ ನೀಡಿದರು. ವೋಟ್‌ ಪೋಲಿಂಗ್‌ ಪರ್ಸಟೇಜ್‌ ಅವಾರ್‌ನೆಸ್‌ ಪ್ರಶಸ್ತಿ ಪಡೆದ ಸ್ವರಾಜ್‌ ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು.  ದಿವ್ಯಾ, ಪ್ರಮೋದಾ, ವಿನೋದಾ ಅವರು ಪ್ರಾರ್ಥನೆಗೈದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಂಘದ ಮಹಾಪ್ರಬಂಧಕ ಪ್ರವೀಣ್‌ ಶೆಟ್ಟಿ ವರಂಗ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ  ಬಂಟರ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಕುತ್ಯಾರ್‌, ಜತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಪ್ರಾದೇಶಿಕ ಸಮನ್ವಯಕ ಮುಂಡಪ್ಪ ಎಸ್‌. ಪಯ್ಯಡೆ,
ಉಪ ಕಾರ್ಯಾಧ್ಯಕ್ಷ ಶಿಬರೂರುಗುತ್ತು ಸುರೇಶ್‌ ಎಸ್‌. ಶೆಟ್ಟಿ, ಕೋಶಾಧಿಕಾರಿ ಸಂತೋಷ್‌ ಆರ್‌. ಶೆಟ್ಟಿ, ಜತೆಕಾರ್ಯದರ್ಶಿ ಮಹಾಬಲ ಶೆಟ್ಟಿ, ಜತೆ ಕೋಶಾಧಿಕಾರಿ ಮಹೇಶ್‌ ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಪ್ರಾದೇಶಿಕ ಸಲಹಾ ಸಮಿತಿಯ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಅನಿತಾ ಎ. ಶೆಟ್ಟಿ, ಕಾರ್ಯದರ್ಶಿ ಸುಚಿತಾ ಕೆ. ಶೆಟ್ಟಿ, ಕೋಶಾಧಿಕಾರಿ ಜಯಂತಿ ಶೆಟ್ಟಿ, ಜತೆ ಕಾರ್ಯದರ್ಶಿ ವಿನೋದಾ ಶೆಟ್ಟಿ, ವಾರ್ಷಿಕೋತ್ಸವ ಸಲಹಾ ಸಮಿತಿಯ ಜಯ ರಾಮ ಶೆಟ್ಟಿ ಇನ್ನ, ಅನಿಲ್‌ ಶೆಟ್ಟಿ ಏಳಿಂಜೆ, ಕೃಷ್ಣ ವೈ. ಶೆಟ್ಟಿ,ಅಂಗಡಿಗುತ್ತು ಪ್ರಸಾದ್‌ ಶೆಟ್ಟಿ, ರಾಘು ಪಿ. ಶೆಟ್ಟಿ, ಸುಜಯ್‌ಆರ್‌. ಶೆಟ್ಟಿ, ಪ್ರತೀಕ್‌ ಡಿ. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ  ಸಮಿತಿಯ ಕಾರ್ಯಾಧ್ಯಕ್ಷ ಶಿವರಾಮ ಶೆಟ್ಟಿ, ಸಾಹಿತ್ಯ -ಸಾಂಸ್ಕೃತಿ-ಮಾಹಿತಿ ಮತ್ತು ತಂತ್ರಜ್ಞಾನ ಕಾರ್ಯಾಧ್ಯಕ್ಷೆ ಕೀರ್ತಿ ಎಚ್‌. ಶೆಟ್ಟಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಿಟಿ ರೀಜನ್ಸ್‌ ಸದಸ್ಯ-ಸದಸ್ಯೆಯರಿಂದ ಭಜನೆ, ವಿಶ್ವನಾಥ್‌ ಎಸ್‌. ಶೆಟ್ಟಿ ಮತ್ತು ತಂಡದವರಿಂದ ರಸಮಂಜರಿ, ಬಳಿಕ ನಾರಾಯಣ ಶೆಟ್ಟಿ ನಂದಳಿಕೆ ರಚಿಸಿ, ಮನೋಹರ್‌ ಶೆಟ್ಟಿ ನಂದಳಿಕೆ ನಿರ್ದೇಶಿಸಿರುವ ತುಳು ಏಕಾಂಕ ನಾಟಕ ದೆಯ್ಯಕ್ಕನ ದೆಯ್ಯದಿಲ್‌ ಪ್ರದರ್ಶನಗೊಂಡಿತು. ಸುಚಿತಾ ಶೆಟ್ಟಿ ಮತ್ತು ಪ್ರತೀಕ್‌ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. 

ಪ್ರಪಂಚದಲ್ಲಿ ಬಂಟ ಜನಾಂಗದಷ್ಟು ವೈವಿಧ್ಯಮಯ, ಸುಂದರ ಹಾಗೂ ವಿಶಿಷ್ಟ ಜನಾಂಗ ಬೇರಿಲ್ಲ. ಬಂಟರು ಸಾಹಸಿಗರು, ಪರಿಶ್ರಮ ಜೀವಿಗಳು, ಹೃದಯವಂತರು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಇಂದು ಪ್ರತಿಯೊಂದು ಸಮಾಜದಲ್ಲಿ ಹಣವೇ ಮುಖ್ಯವಾಗಿದೆ. ಕುಟುಂಬದೊಳಗಿನ ಸಂಬಂಧವು ಕಳಚಿ ಹೋಗುತ್ತಿರುವುದು ವಿಷಾದನೀಯ. ಸಿಟಿ ಪ್ರಾದೇಶಿಕ ಸಮಿತಿಯ ಉತ್ತಮ ಸಾಧನೆಗೆ ಇಂದಿನ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ನಾವು ನಮ್ಮ ನಮ್ಮೊಳಗಿನ ಕಚ್ಚಾಟವನ್ನು ತೊರೆದು ಒಂದಾದರೆ ನಮ್ಮ ಶಕ್ತಿಯ ವಿರುದ್ಧ ಯಾವ ಶಕ್ತಿಯೂ ಮುಂದೆ ಬರಲು ಸಾಧ್ಯವಿಲ್ಲ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಸದಾ ತಲೆಬಾಗುವೆ                                                      – ಸುರೇಶ್‌ ಪಿ. ಶೆಟ್ಟಿ ಗುರ್ಮೆ (ಉದ್ಯಮಿ, ಸಮಾಜ ಸೇವಕ).

ಬಂಟರ ಸಂಘವೆಂಬುದು ಒಂದು ವಿಶಾಲ ವೃಕ್ಷವಾಗಿದೆ. ಈ ವೃಕ್ಷದ 9 ರೆಂಬೆಗಳು 9 ಕಡೆಗೆ ಪಸರಿಸಿವೆ. ಹಾಗಾಗಿ ಸಂಘಕ್ಕೆ ವಿಶೇಷ ಬಲ ಬಂದಂತಾಗಿದೆ. ವಿದ್ಯೆ ಇದ್ದರೆ ಮಾತ್ರ ಸಾಲದು. ಅನುಭವವೂ ಮುಖ್ಯವಾಗಿರಬೇಕು. ಸಂಪತ್ತು ಇದ್ದರೆ ಮಾತ್ರ ಸಾಲದು, ದಾನಿಯಾಗುವ ಹೃದಯವಂತಿಕೆಯೂ ಇರಬೇಕು. ಮನುಷ್ಯನಿಗೆ ಅಹಂಕಾರ, ದರ್ಪ, ಬಂದಾಗ  ಆತ ಇತರರ ಮನಸ್ಸುಗಳನ್ನು ಹಾಳು ಮಾಡುತ್ತಾನೆ. ಜೀವನದಲ್ಲಿ ಅಸಹಾಯಕನಾಗಿರುವವರ ಮೇಲೆ ಎಂದೂ ದಬ್ಟಾಳಿಕೆ ಮಾಡಬಾರದು. ಅದನ್ನು ಎಲ್ಲರೂ ವಿರೋಧಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಹಣದ ಸಹಾಯದ ಬದಲು ನೌಕರಿ ಅಥವಾ ವ್ಯವಸಾಯ ಮಾಡಲು ಅಥವಾ ತನ್ನ ಕಾಲಲ್ಲಿ ತಾನೇ ನಿಲ್ಲುವಂತಹ ಸಹಾಯದ ಅಗತ್ಯವಿದೆ
 – ಮುಂಡಪ್ಪ ಎಸ್‌. ಪಯ್ಯಡೆ (ಸಮನ್ವಯಕರು : ಪಶ್ಚಿಮ ಪ್ರಾದೇಶಿಕ ಸಮಿತಿಗಳು).

ಏಳು ವರ್ಷಗಳ ಹಿಂದೆ ಅಧ್ಯಕ್ಷನಾಗಿದ್ದಾಗ ಸ್ಥಾಪನೆಯಾದ ಸಿಟಿ ಪ್ರಾದೇಶಿಕ ವಿಭಾಗವು ಇಂದು ಅಭಿವೃದ್ಧಿಯ ದಾಪು ಗಾಲಿಡುತ್ತಾ ಸಾಗುತ್ತಿರುವುದಕ್ಕೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರನ್ನು ಅಭಿನಂದಿಸುತ್ತಿದ್ದೇನೆ. ಸಿಟಿ  ಪ್ರಾದೇಶಿಕ ಕೇವಲ ಶ್ರೀಮಂತ ಸಮಿತಿಯಷ್ಟೇ ಅಲ್ಲ, ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಮೈಗೂಡಿಸಿಕೊಂಡ ಕ್ರಿಯಾಶೀಲ ಸಮಿತಿಯಾಗಿದೆ. ಇಲ್ಲಿರುವಷ್ಟು ದಾನಿಗಳು ಬೇರೆ ಸಮಿತಿಗಳಲ್ಲಿ ಕಂಡುಬರುತ್ತಿಲ್ಲ.ಸಿಟಿ ಪ್ರಾದೇಶಿಕ ಸಾವಿರ ಸಾವಿರ ವರ್ಷಗಳಷ್ಟು ಕಾಲ ಹೆಸರು ಗಳಿಸುತ್ತಲೇ ಇರಬೇಕು
  – ಐಕಳ ಹರೀಶ್‌ ಶೆಟ್ಟಿ (ಮಾಜಿ ಅಧ್ಯಕ್ಷರು : ಬಂಟರ ಸಂಘ ಮುಂಬಯಿ)

Advertisement

Udayavani is now on Telegram. Click here to join our channel and stay updated with the latest news.

Next