Advertisement

ಶಾರದಾದೇವಿ ವಿಶ್ವಭಾವೈಕ್ಯ ಮಂದಿರ 7ನೇ ವಾರ್ಷಿಕೋತ್ಸವ

10:44 AM Feb 03, 2020 | Suhan S |

ಹುಬ್ಬಳ್ಳಿ: ರಾಮಕೃಷ್ಣ ಮತ್ತು ವಿವೇಕಾನಂದ ಆಶ್ರಮಗಳು ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ, ಧಾರ್ಮಿಕ ಸಂಸ್ಕೃತಿ ಅನನ್ಯವಾದದ್ದು. ಸಮಾಜಕ್ಕೆ ಇವುಗಳ ಕೊಡುಗೆ ಅಪಾರವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ ಮೇಟಿ ಹೇಳಿದರು.

Advertisement

ಗೋಕುಲ ರಸ್ತೆ ಡಾಲರ್ಸ್‌ ಕಾಲೋನಿಯ ಶ್ರೀ ಮಾತಾ ಆಶ್ರಮದಲ್ಲಿ ಶ್ರೀಮಾತೆ ಶಾರದಾದೇವಿ ವಿಶ್ವಭಾವೈಕ್ಯ ಮಂದಿರದ 7ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಭಕ್ತ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಆಶ್ರಮಗಳು ಮಕ್ಕಳು, ಜನರಿಗೆ ನೀಡುತ್ತಿರುವ ಕೊಡುಗೆಗಳನ್ನು ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಮಠ, ಆಶ್ರಮಗಳು ಬೆಳೆಯಲು ಭಕ್ತರುಬೆನ್ನೆಲುಬಾಗಿದ್ದಾರೆ. ಆಶ್ರಮಕ್ಕೆ ನನ್ನ ಕೈಲಾದ ಸೇವೆ ಮಾಡುವೆ ಎಂದರು.

ಲೆಕ್ಕ ಪರಿಶೋಧಕ ರತ್ನಾಕರ ಅಣ್ಣಿಗೇರಿ ಮಾತನಾಡಿ, ಜನ ಪಾಶ್ಚಿಮಾತ್ಯ ಸಂಸ್ಕೃತಿಗೆ ಅಂಟಿಕೊಂಡು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಾವು ಎಷ್ಟೇ ಆಸ್ತಿ, ಅಂತಸ್ತು ಹೊಂದಿದ್ದರೂ ಸಂಸ್ಕಾರ ಇಲ್ಲವೆಂದರೆ ಅದಕ್ಕೆ ಬೆಲೆಯಿಲ್ಲ. ಸಂಸ್ಕಾರ ನೀಡುವ ಕಾರ್ಯ ಆಗಬೇಕಿದೆ. ಸಂಸ್ಕಾರವಂತರಾದರೆ ಏನನ್ನಾದರೂ ಸಾಧನೆ ಮಾಡಬಹುದು ಎಂದು ಹೇಳಿದರು.

ಚಿನ್ಮಯ ಪಿಯು ಕಾಲೇಜು ಪ್ರಾಂಶುಪಾಲ ರಜನಿ ತುಂಗಳ ಅತಿಥಿಯಾಗಿ ಆಗಮಿಸಿದ್ದರು. ಬೆಂಗಳೂರು ಶ್ರೀ ಭವತಾರಿಣಿ ಆಶ್ರಮದ ಅಧ್ಯಕ್ಷೆ ಮಾತಾಜಿ ವಿವೇಕಮಯಿ ಅವರು ಭವಸಾಗರ ತಾರಣ-ಶ್ರೀ ರಾಮಕೃಷ್ಣವಿಷಯವಾಗಿ, ಶ್ರೀಮಾತಾ ಆಶ್ರಮದಅಧ್ಯಕ್ಷೆ ಮಾತಾಜಿ ತೇಜೋಮಯಿ ಅವರು ಶ್ರೀಮಾತೆ-ಶ್ರೀ ರಾಮಕೃಷ್ಣ ರೂಪವೆರಡು ಶಕ್ತಿಯೊಂದು ವಿಷಯವಾಗಿ ಹಾಗೂ ಮಾತಾಜಿ ಅಮೂಲ್ಯಮಯಿ ಗೃಹಸ್ಥರಿಗೆ ಶ್ರೀ ರಾಮಕೃಷ್ಣರ ಗೃಹೀ ಭಕ್ತರ ಆದರ್ಶ ವಿಷಯವಾಗಿ ಉಪನ್ಯಾಸ ನೀಡಿದರು.

ವರಸಿದ್ಧಿ ಭಜನಾ ಮಂಡಳದವರಿಂದ ಭಜನೆ, ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯರಿಂದ ಜಾನಪದ ನೃತ್ಯ, ಶಾಲಾ ಮಕ್ಕಳಿಂದ ಭೂತ ಬೆನ್ನಟ್ಟಿದೆ ಎಚ್ಚರ ಎಚ್ಚರ ಪ್ರಹಸನ ಹಾಗೂ ಹೇಮಾ ವಾಘಮೋಡೆ ಶಿಷ್ಯ ವೃಂದದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next