ಚೆನ್ನೈ: ದಳಪತಿ ವಿಜಯ್ ʼವಾರಿಸುʼ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ವಿಶ್ವದೆಲ್ಲೆಡೆ ಸಿನಿಮಾಕ್ಕೆ ಪಾಸಿಟಿವ್ ರೆಸ್ಪಾನ್ಸ್ ಕೇಳಿ ಬರುತ್ತಿದೆ.
ಕಾಲಿವುಡ್ ನ ಹಿಟ್ ನಿರ್ದೇಶಕ ಲೋಕೇಶ್ ಕನಕರಾಜ್ ʼವಿಕ್ರಮ್ʼ ಸಿನಿಮಾದ ಬಳಿಕ ದಳಪತಿ ವಿಜಯ್ ಅವರ 67ನೇ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ʼಮಾಸ್ಟರ್ʼ ಕಾಂಬಿನೇಷನ್ ಬಳಿಕ ಮತ್ತೊಮ್ಮೆ ವಿಜಯ್ – ಲೋಕೇಶ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿನಿಮಾದ ಬಗ್ಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ.
ಸಂಜಯ್ ದತ್, ತ್ರಿಶಾ, ಗೌತಮ್ ಮೆನನ್, ಮಿಸ್ಕಿನ್ ಮತ್ತು ಪ್ರಿಯಾ ಆನಂದ್ ಅವರ ಈಗಾಗಲೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದ ಬಳಿಕ, ಇದೀಗ ಕನ್ನಡದ ಖ್ಯಾತ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು ದಳಪತಿ ವಿಜಯ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಅಪ್ಡೇಟ್ ಹೊರ ಬಿದ್ದಿದೆ.
ಸಿನಿಮಾದ ಚಿತ್ರೀಕರಣ ಚೆನ್ನೈನಲ್ಲಿ ಕಳೆದ ಕೆಲ ದಿನಗಳ ಹಿಂದೆ ಆರಂಭವಾಗಿದೆ. ವರದಿಯ ಪ್ರಕಾರ ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ನಟಿಸಲು ಇನ್ನೂ ಸಹಿ ಹಾಕಿಲ್ಲ. ಆದರೆ ಮಾತುಕತೆ ಚಾಲ್ತಿಯಲ್ಲಿದೆ ಎನ್ನಲಾಗಿದೆ.
ಲೋಕೇಶ್ ಅವರ ಕಳೆದ ಸಿನಿಮಾ ʼವಿಕ್ರಮ್ʼ ನಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ರೊಲೆಕ್ಸ್ ಆಗಿ ಸೂರ್ಯ ಕಾಣಿಸಿಕೊಂಡಿದ್ದರು. ದಳಪತಿ ವಿಜಯ್ ಸಿನಿಮಾದಲ್ಲೂ ಕ್ಲೈಮ್ಯಾಕ್ಸ್ ನಲ್ಲಿ ಸ್ಪೆಷೆಲ್ ಪಾತ್ರವೊಂದು ಇರಬಹುದು ಎಂದು. ಯಾವುದಕ್ಕೂ ಕಾದು ನೋಡಬೇಕಿದೆ.