Advertisement

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

12:47 AM May 30, 2024 | Team Udayavani |

ಮೈಸೂರು: ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿ ಅವರು ವಾಸವಿದ್ದ ಅತಿಥಿ ಗೃಹದಲ್ಲಿ ಸಾಮಗ್ರಿಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅವರ ವೇತನದಲ್ಲಿಯೇ ಮೊತ್ತವನ್ನು ಕಡಿತಗೊಳಿಸುವಂತೆ ಸರಕಾರದ ಕಾರ್ಯದರ್ಶಿಗೆ ಆಡಳಿತ ತರಬೇತಿ ಸಂಸ್ಥೆ (ಎಟಿಐ) ಮನವಿ ಮಾಡಿದೆ.

Advertisement

ಕಾಣೆಯಾಗಿರುವ ಸಾಮಗ್ರಿಗಳ ಮೊತ್ತ 77,296 ರೂ.ಗಳನ್ನು ರೋಹಿಣಿ ಸಿಂಧೂರಿ ಅವರ ವೇತನದಲ್ಲಿ ಕಡಿತಗೊಳಿಸಿ ಡಿಡಿ ಮೂಲಕ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕರ ಹೆಸರಿಗೆ ಕಳುಹಿಸುವಂತೆ ಸಂಸ್ಥೆಯ ಜಂಟಿ ನಿರ್ದೇಶಕರು ರಾಜ್ಯ ಸರಕಾರದ ಸಿಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾ ರೆ.

ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ವರ್ಗವಾಗಿ ಬಂದ ಅನಂತರ 2020 ಅ. 2ರಿಂದ ನ. 14ರ ತನಕ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಅತಿಥಿ ಗೃಹದಲ್ಲಿ ವಾಸ್ತವ್ಯ ಇದ್ದರು. ತೆರವುಗೊಳಿಸಿದಾಗ ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಇರಲಿಲ್ಲ. ಅತಿಥಿ ಗೃಹದಲ್ಲಿದ್ದ ಟೆಲಿಫೋನ್‌ ಟೇಬಲ್ , ಕೋಟ್‌ ಹ್ಯಾಂಗರ್‌, ಬ್ಲಾಂಕೆಟ್‌ ಸೇರಿದಂತೆ ವಿವಿಧ ಸಾಮಗ್ರಿಗಳು ನಾಪತ್ತೆಯಾಗಿದ್ದವು.

 

Advertisement

Udayavani is now on Telegram. Click here to join our channel and stay updated with the latest news.

Next