ಬಾಗೇಪಲ್ಲಿ: ದೇಶ ಭಕ್ತಿಯ ಹೆಸರಿನಲ್ಲಿ ಬಾಗೇಪಲ್ಲಿ ಯಲ್ಲಿ ಅಚರಿಸಲಾದ ಸ್ವಾತಂತ್ರ್ಯ ಅಮೃತ ಮಹೋ ತ್ಸವದ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಕೆಲವರು ರಾಜಕೀಯ ವ್ಯಾಪಾರಕ್ಕೆ ಬಳಸಿಕೊಂಡಿ ದ್ದಾರೆಂದು ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲಾವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿಯಿಂದ ಅಯೋಜಿಸಲಾಗಿದ್ದ 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಾಗಿ ಆ. 14ರಂದು ಬಾಗೇಪಲ್ಲಿಯಲ್ಲಿ ನಡೆದ ಹರ್ ಘರ್ ತಿರಂಗಾ ಕಾಲ್ನಡಿಗೆ ಜಾಥಾ ಹಾಗೂ ಬೈಕ್ ರ್ಯಾಲಿಯನ್ನು ಧೇಶ ಭಕ್ತಿಗಾಗಿ ಆಚರಣೆ ಮಾಡಿಲ್ಲ, ಕೇವಲ ರಾಜಕೀಯ ವ್ಯಾಪಾರದ ವೃದ್ದಿಗಾಗಿ ಕಾರ್ಯಕ್ರಮ ಮಾಡಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಟೀಕೆ ವ್ಯಕ್ತಪಡಿಸಿದರು.
ದೇಶದ ಬಡವರಿಗೆ, ಧೀನ ದಲಿತರಿಗೆ ಸಹಾಯ ಮಾಡಿದರೆ ಅದನ್ನು ದೇಶ ಸೇವೆ ಎಂದು ಪರಿಗಣಿಸಲಾಗುತ್ತದೆ ಹೊರತು ದೇಶ ಭಕ್ತಿಯ ಹೆಸರಿನಲ್ಲಿ ರಾಜಕೀಯ ವ್ಯಾಪಾರ ವೃದ್ಧಿ ಮಾಡಿಕೊಳ್ಳುವುದನ್ನು ದೇಶ ಭಕ್ತಿ ಎಂದು ಹೇಳಲು ಸಾಧ್ಯವಿಲ್ಲ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಕುಟುಂಬಗಳನ್ನೇ ಕಳೆದುಕೊಂಡು ಪ್ರಾಣ ತ್ಯಾಗ ಮಾಡಿರುವಂತಹ ಮಹನೀಯರು ನಿಜವಾದ ದೇಶ ಪ್ರೇಮಿಗಳು, ಅಂತಹ ದೇಶ ಪ್ರೇಮಿಗಳ ಸ್ಮರಣೆ ಹಾಗೂ ಗೌರವ ಸರ್ಮಣೆಗಾಗಿ ನಾವು ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಬ್ರಿಟಿಷರ್ ಆಢಳಿತದಲ್ಲಿ ಗುಲಾಮಗಿರಿ ಜೀವನ ನಡೆಸುತ್ತಿದ್ದ ಭಾರತೀಯರನ್ನು ಬಂಧನ ಮುಕ್ತರ ನ್ನಾಗಿ ಮಾಡಿರುವ ಲಕ್ಷಾಂತರ ಮಹನೀಯರ ಬಲಿ ದಾನ ಹಾಗೂ ಪ್ರಾಣ ತ್ಯಾಗದಿಂದ ನಾವು ಇಂದು ಸ್ವಾತಂತ್ರ್ಯ ಬದುಕುನ್ನು ನಡೆಸುತ್ತಿದ್ದೇವೆ ಎಂದರು.
ಬಾಗೇಪಲ್ಲಿ ತಾಲೂಕು ವ್ಯಾಪ್ತಿಯ 32 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು 200 ಕೋಟಿ ರೂ ವೆಚ್ಚದ ಮನೆ ಮನೆಗೂ ನಳ ನೀರು ಸಂಪರ್ಕ ಕಲ್ಪಿಸುವ ಯೋಜನೆಯನ್ನು ಕೇವಲ ಒಂದು ವರ್ಷದಲ್ಲಿ ಅನುಷ್ಠಾನಗೊಳಿಸುತ್ತೇನೆ ಎಂದು ನಾಗರೀಕರಿಗೆ ಭರವಸೆ ನೀಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ, ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬ ಸದಸ್ಯರನ್ನು ಸನ್ಮಾನಿಸಿದರು, ಎಸ್. ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.
ತಹಶೀಲ್ದಾರ್ ವೈ.ರವಿ, ತಾಪಂ ಇಒ ಎಚ್. ಎನ್.ಮಂಜುನಾಥ್, ಟಿಹೆಚ್‌ಒ ಡಾ.ಸಿ.ಎನ್. ಸತ್ಯನಾರಾಯಣರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ.ಪ್ರಭಾಕರರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಕೆ.ಮಧುಕರ್, ಅಧ್ಯಕ್ಷೆ ರೇಷ್ಮಭಾನು, ಉಪಾಧ್ಯಕ್ಷ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡ, ಸದಸ್ಯರಾದ ಶ್ರೀನಿವಾಸರೆಡ್ಡಿ, ಅಶೋಕರೆಡ್ಡಿ, ಜಭಿವುಲ್ಲಾ ಖಾನ್, ಗಡ್ಡಂರಮೇಶ್, ಗ್ರೇಡ್ 2 ತಹಶೀಲ್ದಾರ್ ಸುಬ್ರಮಣಿ, ಬಿಇಓ ಸಿದ್ದಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನರಸಿಂಹಾರೆಡ್ಡಿ, ರೇಷ್ಮೆ ಸಹಾಯಕ ನಿರ್ದೇಶಕ ಚಿನ್ನಕೈವಾರಮಯ್ಯ ಇದ್ದರು.