Advertisement
ನಗರದ ಹುತಾತ್ಮ ಮೈಲಾರ ಮಹಾದೇವಪ್ಪನವರ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹುತಾತ್ಮ ಮೈಲಾರ ಮಹದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ 75ನೇ ಭಾರತದ ಸ್ವಾತಂತ್ರ್ಯೊತ್ಸವದಅಮೃತ ಮಹೋತ್ಸವ ಹಾಗೂ ವಿಜಯ ದಿವಸ್, ಕಿಸಾನ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ಬಲಿದಾನ ಮಾಡಿದ್ದರ ಫಲವಾಗಿ ಇಂದು ನಾವು ಆರಾಮವಾಗಿ ಹಾಗೂ ಸ್ವತ್ಛಂದವಾಗಿ ಹಾರಾಡುತ್ತಿದ್ದೇವೆ. ಆದರೆ ಸ್ವಾತಂತ್ರ್ಯಕ್ಕೆ ಕಾರಣರಾದವರನ್ನು ಮರೆಯುತ್ತಿರುವ ಭಯ ಕಾಡುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದಬಗ್ಗೆ ತಿಳಿಸಬೇಕಾಗಿದೆ. ಮೈಲಾರ ಮಹದೇವಪ್ಪ ಸೇರಿದಂತೆ ಜಿಲ್ಲೆಯ ಹಲವಾರು ಹೋರಾಟ ಗಾರರನ್ನು ಯಾರೂ ಮರೆಯಬಾರದು. ದೇಶದ ಭದ್ರತೆಗೆ ಹೋರಾಡುವ ಯೋಧರನ್ನು ಹಾಗೂ ರೈತರನ್ನು ಸ್ಮರಿಸಬೇಕು. ನಗರದ ವಿವಿಧ ಬಡಾವಣೆಗಳಿಗೆ, ವೃತ್ತಗಳಿಗೆ ಹಾಗೂಉದ್ಯಾನವನಗಳಿಗೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡಲು ತೀರ್ಮಾನಿಸಲಾಗಿದೆ ಎಂದರು.
ವಿ.ಎಲ್.ತಿಪ್ಪನಗೌಡ್ರ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಮೋಟೆ ಬೆನ್ನೂರಿನ ಲಿಂಗಪ್ಪ ಕೃಷ್ಣಪ್ಪ ಕುಲಕರ್ಣಿ ಹಾಗೂ ಹಿರೇಅಣಜಿಯ ಸಿದ್ದಪ್ಪ ಮಲ್ಲಪ್ಪ ಕೊಪ್ಪದ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಕನ್ನಪ್ಪಳವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಮುಖ್ಯ ಯೋಜನಾಧಿಕಾರಿ ನಿರ್ಮಲಾ, ತಹಶೀಲ್ದಾರ್ ಸವದಿ, ಪೌರಾಯುಕ್ತ ಪರಶುರಾಮ ಚಲವಾದಿ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ವಂದಿಸಿದರು.