Advertisement

ಸತ್ತಿದ್ದು ತಿಳಿದಿದ್ದು ತಿಂಗಳ ಬಳಿಕ

07:35 AM Oct 08, 2017 | Team Udayavani |

ಹೈದರಾಬಾದ್‌: ಅಪಾರ್ಟ್‌ಮೆಂಟ್‌ವೊಂದ ರಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದ ಹಿರಿಜೀವವೊಂದು ಮೃತಪಟ್ಟ ವಿಷಯ ಗೊತ್ತಾಗಿದ್ದು, ಅಮೆರಿಕದಲ್ಲಿದ್ದ ಮಗ ವಾಪಸಾದ ಬಳಿಕವೇ. ಇದು ಎರಡು ತಿಂಗಳ ಹಿಂದೆ ಮುಂಬೈನಲ್ಲಿ ನಡೆದ ಘಟನೆ. 

Advertisement

ಇದೀಗ ಹೈದರಾಬಾದ್‌ನಲ್ಲೂ ಇಂಥದ್ದೇ ಮನ ಕಲಕುವ ಘಟನೆಯೊಂದು ನಡೆದಿದೆ. ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದ ರಿಂದ ಏಕಾಂಗಿಯಾಗಿ ಫ್ಲ್ಯಾಟ್‌ವೊಂದರಲ್ಲಿ ನೆಲೆಸಿದ್ದ ಲಕ್ಷ್ಮೀ ನಾರಾಯಣ ಮೂರ್ತಿ(75) ಎಂಬ ನಿವೃತ್ತ ಸರ್ಕಾರಿ ನೌಕರರೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಮೃತಪಟ್ಟು 1 ತಿಂಗಳು ಕಳೆದಿದೆ. ಸ್ನಾನ ಮುಗಿಸಿ ಬರುವಾಗ ಹಲ್ಲಿಯೊಂದರ ಮೇಲೆ ಕಾಲಿಟ್ಟು, ಜಾರಿ ಬಿದ್ದು, ತಲೆಗೆ ಪೆಟ್ಟಾಗಿದ್ದರಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಬಿದ್ದಿರುವ ಜಾಗದಲ್ಲಿ ಸತ್ತ ಹಲ್ಲಿಯೊಂದು ಪತ್ತೆಯಾಗಿದೆ. 

ತಿಂಗಳುಗಳಿಂದ ಪತಿ ಫೋನ್‌ ಕರೆ ಸ್ವೀಕರಿಸುತ್ತಿಲ್ಲ ಎಂದು ಆತಂಕಗೊಂಡ ಅವರ ಪತ್ನಿ, ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಅಮೆರಿಕದಿಂದ ವಾಪಸಾಗಿ ನೋಡಿದಾಗಲೇ ಪತಿ ಮೃತಪಟ್ಟಿರುವುದು ಗೊತ್ತಾಗಿದೆ. ಮೂರ್ತಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರೂ ಅಮೆರಿಕದಲ್ಲಿ ನೆಲೆಸಿದ್ದಾರೆ. ಮಕ್ಕಳು ಅಮೆರಿಕಕ್ಕೆ ಬಂದು ವಾಸಿಸುವಂತೆ ಒತ್ತಾಯಿಸಿ ದರೂ ಒಪ್ಪದ ಮೂರ್ತಿ ಅವರು ಪತ್ನಿಯನ್ನು ಜುಲೈನಲ್ಲಿ ಅಮೆರಿಕಕ್ಕೆ ಕಳುಹಿಸಿದ್ದರು.

ಮೂರ್ತಿಯವರನ್ನು ಅಕ್ಕಪಕ್ಕದ ಮನೆಯವರು ನೋಡಿದ್ದು ಬಹಳ ಕಡಿಮೆ. ನೆರೆಹೊರೆಯವರು ಈ ಮನೆಗೆ ಬೀಗ ಹಾಕಿ, ಎಲ್ಲರೂ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದೇ ಭಾವಿಸಿದ್ದರು. ಹಾಗಾಗಿ ಮೂರ್ತಿ ಅವರು ಮೃತರಾಗಿದ್ದು ತಿಂಗಳವರೆಗೂ ಯಾರಿಗೂ ಗೊತ್ತೇ ಆಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next