Advertisement

ಮೂರೂವರೆ ವರ್ಷದ ಮರಿ ಮೊಮ್ಮಗಳ ಮೇಲೆ ಮುತ್ತಜ್ಜನಿಂದ ಅತ್ಯಾಚಾರ

04:20 PM Jan 23, 2017 | Team Udayavani |

ನಾಶಿಕ್‌: 75 ವರ್ಷ ಪ್ರಾಯದ ಮುತ್ತಜ್ಜನೋರ್ವ ತನ್ನ ಮೂರೂವರೆ ವರ್ಷ ಪ್ರಾಯದ ಮರಿ ಮೊಮ್ಮಗಳ ಮೇಲೆ, ಮನೆಯಲ್ಲಿ ಯಾರೂ ಇಲ್ಲದೇ ವೇಳೆ, ಅತ್ಯಾಚಾರ ನಡೆಸಿರುವ ಅತ್ಯಂತ ಹೇಯ ಹಾಗೂ ನಿರ್ಲಜ್ಜ ಘಟನೆ ವರದಿಯಾಗಿದೆ.

Advertisement

ದೇವಲಾಲಿ ಸಮೀಪದ ಶಿಂಗಾವೆ ಬಹುಳ ಗ್ರಾಮದಲ್ಲಿನ ಕುಟುಂಬವೊಂದರ ಸದಸ್ಯರು ಯಾವುದೋ ಕಾರ್ಯಕ್ರಮಕ್ಕೆಂದು ಹೊರಗೆ ಹೋಗಿದ್ದರು. ಮನೆಯಲ್ಲಿ ಮುತ್ತಜ್ಜ ಮತ್ತು ಮರಿ ಮೊಮ್ಮಗಳು ಮಾತ್ರವೇ ಇದ್ದರು. ಆಗ ಆತ ಆಕೆಯ ಮೇಲೆ ನಿರ್ಲಜ್ಜೆಯಿಂದ ಅತ್ಯಾಚಾರದ ಈ ಅತ್ಯಂತ ಹೇಯ ಕೃತ್ಯ ಎಸಗಿದ. ಕಳೆದ ಜನವರಿ 21 ಮತ್ತು 22 ರ ನಡುವೆ ಈ ಅಮಾನುಷ ಘಟನೆ ನಡೆದಿದ್ದು ತಡವಾಗಿ ಬಹಿರಂಗವಾಗಿದೆ.

ಮಗುವಿನ ತಾಯಿಯು ತನ್ನ ಮಗಳ ಗುಪ್ತಾಂಗದಲ್ಲಿ ಗಾಯವಾಗಿ ರಕ್ತ ಸುರಿಯುತ್ತಿರುವುದನ್ನು ಗಮನಿಸಿ ಒಡನೆಯೇ ಪೊಲೀಸರಿಗೆ ದೂರು ನೀಡಿದಳು.

ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next