“ಮಧ್ಯಪ್ರದೇಶ ಸರ್ಕಾರಕ್ಕೆ ಕೋರ್ಸ್‌ಗಳಿಗೆ ಸಂಬಂಧಿಸಿ ಸೀಟುಗಳನ್ನು ಮೀಸಲಾಗಿಡಲು ಅಧಿಕಾರ ಇದೆ. ಆದರೆ, ಶೇ.75ರ ಮಿತಿ ಎನ್ನುವುದು ಹೆಚ್ಚಾಯಿತು. 2 ವರ್ಷಗಳ ಅಂಶಗಳನ್ನು ಪರಿಶೀಲಿಸಿದಾಗ ಸರ್ಕಾರದ ಉದ್ದೇಶ ಈಡೇರಿಕೆ ಕಷ್ಟ ಎಂದು ತೋರುತ್ತದೆ. ಇದರ ಹೊರತಾಗಿಯೂ ಇಂಥ ವಿಚಾರಗಳಲ್ಲಿ ಕೆಲವೊಂದು ವಾಸ್ತವಿಕ ಅಂಶಗಳನ್ನು ಗಮನಿಸುವುದು ಅಗತ್ಯ” ಎಂದು ನ್ಯಾಯಪೀಠ ಹೇಳಿದೆ,
Advertisement
ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ನಿವಾಸಿಗಳಿಗೆ, ರಾಜ್ಯ ನಿವಾಸಿಗಳಲ್ಲದವರಿಗೆ ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ಮತ್ತೂಮ್ಮೆ ನಿರ್ಧಾರವನ್ನು ಪರಿಶೀಲನೆ ಮಾಡಬೇಕಾದ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.