Advertisement

ಕೋವಿಡ್ ಲಸಿಕೆ 1 ಡೋಸ್‌ಗೆ 75 ರೂ.?

01:03 AM Oct 15, 2020 | mahesh |

ಹೊಸದಿಲ್ಲಿ: ಮುಂದಿನ ವರ್ಷ ಮಾರುಕಟ್ಟೆಗೆ ಲಭ್ಯವಾಗಲಿರುವ ಕೋವಿಡ್ ಲಸಿಕೆಗೆ ಒಂದು ಡೋಸ್‌ಗೆ 75 ರೂ. ವಿಧಿಸುವ ಸಾಧ್ಯತೆಗಳಿವೆ. ಈ ಬಗ್ಗೆ “ದ ಇಕನಾಮಿಕ್‌ ಟೈಮ್ಸ್‌’ ವರದಿ ಮಾಡಿದೆ. ಇದರ ಜತೆಗೆ ಲಸಿಕೆಯನ್ನು ಎಲ್ಲರಿಗೂ ನೀಡುವ ಉದ್ದೇಶಕ್ಕಾಗಿ ಸಂಪನ್ಮೂಲ ಸಂಗ್ರಹಿಸಲು ಕೋವಿಡ್‌ ಸೆಸ್‌ ಸಂಗ್ರಹಿಸುವ ಇರಾದೆಯೂ ಇಲ್ಲ. ಅದನ್ನು ಸರಕಾರದಿಂದಲೇ ಭರಿಸ ಲಾಗುತ್ತದೆ ಎಂದು ಪತ್ರಿಕೆಯ ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

ಮತ್ತೂಂದು ಬೆಳವಣಿಗೆಯಲ್ಲಿ ದೇಶದಲ್ಲಿ ಒಂಬತ್ತು ಕೋಟಿ ಕೋವಿಡ್ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ ಸೋಂಕಿನ ಪಾಸಿಟಿವಿಟಿ ಪ್ರಮಾಣ ಶೇ.8.04 ಆಗಿದೆ. 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪಾಸಿಟಿವಿಟಿ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತಲೂ ಹೆಚ್ಚಾಗಿದೆ. ಹೀಗಾಗಿ ಸೋಂಕಿನ ಪ್ರಮಾಣ ನಿರಂತರವಾಗಿ ಇಳಿಮುಖವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.

63,509 ಕೇಸುಗಳು: ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 63,509 ಹೊಸ ಪ್ರಕರಣ ಮತ್ತು 730 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಗುಣಮುಖರಾಗುವ ಪ್ರಮಾಣ ಶೇ.87.05ಕ್ಕೆ ಏರಿಕೆಯಾಗಿದೆ.

ವಿಶ್ವಬ್ಯಾಂಕ್‌ನಿಂದ ನೆರವು: ಜಗತ್ತಿನ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಲಸಿಕೆ ಮತ್ತು ವಿತರಣೆಗಾಗಿ 12 ಬಿಲಿಯನ್‌ ಡಾಲರ್‌ ಮೊತ್ತದ ನೆರವನ್ನು ವಿಶ್ವಬ್ಯಾಂಕ್‌ ಪ್ರಕಟಿಸಿದೆ. ಇದು ರಾಷ್ಟ್ರಗಳಿಗೆ ನೆರವು ನೀಡುವ 160 ಬಿಲಿಯನ್‌ ಡಾಲರ್‌ ಮೊತ್ತದ ನಿಧಿಯಿಂದ ಅದನ್ನು ಪ್ರಕಟಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮೂಲಕ ರಾಷ್ಟ್ರಗಳಿಗೆ ಅದನ್ನು ವಿತರಿಸಲಾಗುತ್ತದೆ.

ಪಾಲ್ಫರ್‌ ಮಹಿಳೆಗೆ ನೆನಪು ಶಕ್ತಿ ನಷ್ಟ
ಮಹಾರಾಷ್ಟ್ರದ ಪಾಲ್ಫರ್‌ ಜಿಲ್ಲೆಯ ಶಹಿಷ್ಟಾ ಪಠಾಣ್‌ (47) ಅವರು ಸೋಂಕಿನಿಂದಾಗಿ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ. ಜತೆಗೆ ಮೆದುಳಿಗೆ ಮಂಕು ಕವಿದ (ಬ್ರೈನ್‌ ಫಾಗ್‌) ಅನುಭವ ಉಂಟಾಗಿದೆ. ಆರಂಭದಲ್ಲಿ ಅವರು ಕಿಬ್ಬೊಟ್ಟೆ ಮತ್ತು ತಲೆಯಲ್ಲಿ ನೋವು ಉಂಟಾಗುತ್ತಿದೆ ಎಂದು ಹೇಳಿಕೊಂಡಿದ್ದರು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ಅವರಿಗೆ ಮೆದುಳಿಗೆ ಮಂಕು ಕವಿದ ಪರಿಸ್ಥಿತಿ ಉಂಟಾಗಿದೆ ಎಂಬುದು ಖಚಿತವಾಗಿದೆ. ಆ.14ರಂದು ಕಿಬ್ಬೊಟ್ಟೆ ಮತ್ತು ತಲೆಯಲ್ಲಿ ನೋವು ಕಾಣಿಸಿಕೊಂಡಿದ್ದ ರಿಂದ ಪಠಾಣ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಮರು ಸೋಂಕಿನಿಂದ ಮಹಿಳೆ ಸಾವು
ನೆದರ್‌ಲ್ಯಾಂಡ್‌ನ‌ಲ್ಲಿ ಮತ್ತೂಮ್ಮೆ ಸೋಂಕಿಗೆ ಒಳಗಾದ ಹಿರಿಯ ಮಹಿಳೆ ಕೊನೆಯುಸಿರೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಇಂಥ ಘಟನೆ ವರದಿಯಾಗುತ್ತಿದೆ. ಎಲುಬಿನ ಕ್ಯಾನ್ಸರ್‌ ರೋಗಿಯಾಗಿದ್ದ ಅವರಿಗೆ ಕಿಮೋಥೆರಪಿಯನ್ನೂ ನೀಡಲಾಗಿತ್ತು. ಹೀಗಾಗಿ, ಆ ಮಹಿಳೆಯ ರೋಗ ನಿರೋಧಕ ಶಕ್ತಿ ಕುಂಠಿತವಾಗಿತ್ತು. ಅದಕ್ಕೆ ಪೂರಕವಾಗಿ ಎರಡನೇ ಬಾರಿಗೆ ಮತ್ತೂಮ್ಮೆ ಸೋಂಕಿಗೆ ಒಳಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next