Advertisement

Mangaluru ಅಭಿವೃದ್ಧಿಗೆ 75 ಕೋ.ರೂ.: ಬೈರತಿ ಸುರೇಶ್‌

11:07 PM Nov 24, 2023 | Team Udayavani |

ಮಂಗಳೂರು: ಮಂಗಳೂರು ನಗರವನ್ನು ಅತ್ಯಾಧುನಿಕ ಪ್ರವಾಸಿ ತಾಣವಾಗಿ ರೂಪಿಸಲು 50 ಕೋಟಿ ರೂ. ವಿಶೇಷ ಅನುದಾನ, ನಗರದ ಅಭಿವೃದ್ಧಿಗಾಗಿ ಪಾಲಿಕೆಗೆ 25 ಕೋಟಿ ರೂ. ಅನುದಾನವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.

Advertisement

ಜಿಲ್ಲಾಡಳಿತ, ಮಂಗಳೂರು ಸ್ಮಾರ್ಟ್‌ಸಿಟಿ ವತಿಯಿಂದ ಮಂಗಳೂರಿನ ಎಮ್ಮೆಕೆರೆಯಲ್ಲಿ 24.9 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅಂತಾ ರಾಷ್ಟ್ರೀಯ ಈಜುಕೊಳ ಶುಕ್ರವಾರ ಉದ್ಘಾಟಿಸಿದ ಅವರು ಮಾತನಾಡಿ, ಅಭಿ ವೃದ್ಧಿಯಲ್ಲಿ ಯಾವುದೇ ರಾಜಕೀಯವಿಲ್ಲ. ಜನರ ತೆರಿಗೆ ಹಣ ಸಾರ್ವಜನಿಕರ ಅನುಕೂಲಕ್ಕೆ ಬಳಕೆ ಯಾಗಬೇಕು ಎಂದರು.

ಎಮ್ಮೆಕೆರೆಯಲ್ಲಿ ಸುಸಜ್ಜಿತ ಈಜು ಕೊಳ ನಿರ್ಮಾಣಗೊಂಡಿದೆ. ಮಂಗಳೂರು ಹಾಗೂ ಸುತ್ತಲಿನ ಜಿಲ್ಲೆಯ ಮಂದಿ ಈ ಈಜುಕೊಳದ ಸದುಪ ಯೋಗ ಪಡೆಯಬೇಕು. 749 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಸ್ಮಾರ್ಟ್‌ಸಿಟಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. 24 ಕಾಮಗಾರಿ ಪ್ರಗತಿ ಯಲ್ಲಿದ್ದು, 262 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯ 4 ಕಾಮಗಾರಿ ನಡೆಯುತ್ತಿದೆ. 3 ಕಾಮಗಾರಿಗೆ ಇನ್ನಷ್ಟೇ ಅನು ಮೋದನೆ ಸಿಗಬೇಕಿದೆ ಎಂದು ವಿವರಿಸಿದರು.

ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಮಾತನಾಡಿ, ಎಮ್ಮೆಕೆರೆ ಈಜುಕೊಳ ರಾಜ್ಯದಲ್ಲೇ ಅತ್ಯುತ್ತಮ ಈಜುಕೊಳವಾಗಿ ನಿರ್ಮಾಣಗೊಂಡಿದೆ. ಇಲ್ಲಿ ತರಬೇತಿ ಪಡೆದ ಸ್ಪರ್ಧಾಳುಗಳು ಮುಂದೊಂದು ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು. ಉಳ್ಳಾಲ- ಮಂಗಳೂರು ನಡುವಣ ಸುಗಮ ಸಂಚಾರಕ್ಕೆ ಮಹಾಕಾಳಿಪಡ್ಪು ಬಳಿ ಅಂಡರ್‌ಪಾಸ್‌ ನಿರ್ಮಾಣ ಆಗುತ್ತಿದೆ. ವಾಹನ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಂತೂರಿನಲ್ಲಿ ಸೂಕ್ತ ವ್ಯವಸ್ಥೆ ಆಗಬೇಕು ಎಂದರು.

ಮಂಗಳೂರಿಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಗಳು ಬರಬೇಕಿವೆ. ಬೃಹತ್‌ ಗೋಪುರ ನಿರ್ಮಿಸಿ ಅದರ ಮೇಲಿ ನಿಂದ ನಗರದ ಸೌಂದರ್ಯವನ್ನು ವೀಕ್ಷಿಸಲು ಅನುವು ಮಾಡಿಕೊಡಬೇಕು. ಸ್ಥಳೀಯರ ಬೇಡಿಕೆಯಂತೆ ಎಮ್ಮೆಕೆರೆ ಮೈದಾನವನ್ನು 2.5 ಕೋಟಿ ರೂ. ವೆಚ್ಚದಲ್ಲಿ ಅಭಿ ವೃದ್ಧಿ ಪಡಿಸಲಾಗುತ್ತದೆ. ವಾಕಿಂಗ್‌ ಟ್ರಾÂಕ್‌, ಕ್ರಿಕೆಟ್‌, ಕಬಡ್ಡಿ ಅಂಕಣ ಸೇರಿದಂತೆ ಮಿನಿ ಕ್ರೀಡಾಂಗಣವಾಗಿ ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿದರು.

Advertisement

ನಗರದ ಚಿತ್ರಣ ಬದಲು
ಸಂಸದ ನಳಿನ್‌ ಕುಮಾರ್‌ ಕಟೀಲುಮಾತನಾಡಿ, ಸ್ಮಾರ್ಟ್‌ ಸಿಟಿ ಯೋಜ ನೆಯ ಮೂಲಕ ಮಂಗಳೂರು ನಗರದ ಚಿತ್ರಣ ಬದ ಲಾಗಿದೆ. ಎಮ್ಮೆಕೆರೆ ಈಜುಕೊಳ ನಿರ್ಮಾಣಕ್ಕೆ ಅನೇಕ ಸಮಸ್ಯೆಗಳಿದ್ದವು. ಶಾಸಕ ವೇದವ್ಯಾಸ ಕಾಮತ್‌ ನೇತೃತ್ವ ದಲ್ಲಿ ಹಲವು ಸುತ್ತಿನ ಸಭೆ ನಡೆಸಿ ಕಾಮಗಾರಿಗೆ ವೇಗ ನೀಡಲಾಗಿತ್ತು. ಜಲಾಭಿಮುಖ ಅಭಿವೃದ್ಧಿ ಯೋಜನೆಗೆ (ವಾಟರ್‌ ಫ್ರಂಟ್‌) ಗುರುತಿಸಲಾದ ಸರಕಾರಿ ಜಾಗ ಖಾಸಗಿಯವರಿಂದ ಅತಿಕ್ರಮಣವಾಗಿದೆ. ಸಚಿವರು ಈ ಸಮಸ್ಯೆ ಬಗೆ ಹರಿಸಬೇಕು. ನಂತೂರು ಮೇಲ್ಸೇತುವೆ ಕಾಮಗಾರಿಗೆ ಟೆಂಡರ್‌ ಆಗಿದ್ದು, 5 ಹೆದ್ದಾರಿಗಳ ಕೆಲಸ ನಡೆ ಯು ತ್ತಿದೆ. ಕಾನೂನು ತೊಡಕಿ ನಿಂದಾಗಿ, ಕೆಲಸಕ್ಕೆ ವೇಗ ನೀಡಲು ಸಾಧ್ಯ ವಾಗು ತ್ತಿಲ್ಲ. ಕೂಳೂರು ಸೇತುವೆ ಕಾಮ ಗಾರಿಗೆ ವೇಗ ನೀಡಲಾಗಿದೆ ಎಂದರು.

ಅಭಿವೃದ್ಧಿಯ ದಾಪುಗಾಲು
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಮಂಗಳೂರು ನಗರ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಪಿಪಿಪಿ ಮಾದರಿ ಯಲ್ಲಿ ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆ ಅಭಿವೃದ್ಧಿ ನಡೆಯುತ್ತಿದೆ ಎಂದರು.

ವಿಧಾನಪರಿಷತ್‌ ಸದಸ್ಯ ಮಂಜು ನಾಥ ಭಂಡಾರಿ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಉಪಮೇಯರ್‌ ಸುನೀತ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಎಂ. ಶಶಿಧರ ಹೆಗ್ಡೆ, ದಿವಾಕರ ಪಾಂಡೇಶ್ವರ, ವಿಪಕ್ಷ ನಾಯಕ
ಪ್ರವೀಣ್‌ ಚಂದ್ರ ಆಳ್ವ, ಪಾಲಿಕೆ ಸದಸ್ಯರಾದ ಲೋಹಿತ್‌ ಅಮೀನ್‌, ರೇವತಿ ಶ್ಯಾಂಸುಂದರ್‌, ಅಬ್ದುಲ್‌ ಲತೀಫ್‌, ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಎಲ್‌.ಕೆ. ಅತೀಕ್‌, ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌, ಜಿ.ಪಂ. ಸಿಇಒಡಾ| ಆನಂದ್‌, ಪಾಲಿಕೆ ಆಯುಕ್ತ ಆನಂದ್‌, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್‌ ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಈಜು ಚಾಂಪಿಯನ್‌ಶಿಪ್‌ ಆಯೋಜನ ಸಮಿತಿ ಕಾರ್ಯಾಧ್ಯಕ್ಷ ಕೆ. ತೇಜೋಮಯ ಉಪಸ್ಥಿತರಿದ್ದರು. ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜು ಸ್ವಾಗತಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ ಕಾರ್ಯಕ್ರಮ ನಿರ್ವಹಿಸಿದರು.

ರಾಷ್ಟ್ರೀಯ ಈಜು ಸ್ಪರ್ಧೆಗೆ ಚಾಲನೆ
ಎಮ್ಮೆಕೆರೆ ಈಜುಕೊಳದಲ್ಲಿ 19ನೇ ರಾಷ್ಟ್ರೀಯ ಮಾಸ್ಟರ್ಸ್‌ ಈಜು ಚಾಂಪಿಯನ್‌ಶಿಪ್‌ಗೆ ಚಾಲನೆ ದೊರೆಯಿತು. ಮೂರು ದಿನಗಳ ಸ್ಪರ್ಧೆಯಲ್ಲಿ 29 ರಾಜ್ಯಗಳ 750ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next