ಉಡುಪಿ: ಯಕ್ಷಗಾನ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ. ತೆಂಕು ಮತ್ತು ಬಡಗುತಿಟ್ಟಿಗೆ ಸಮಾನ ಪ್ರೇಕ್ಷಕರು ಇರುವ ಜಾಗ ಉಡುಪಿ. ಇಂತಹ ಕೇಂದ್ರ ಸ್ಥಾನದಲ್ಲಿ ಮೊದಲ ಸಮ್ಮೇಳನ ನಡೆಯುತ್ತಿರುವುದು ಅರ್ಥಪೂರ್ಣ. ಕಾಲಕ್ಕೆ ತಕ್ಕಂತೆ ಯಕ್ಷಗಾನ ಕ್ಷೇತ್ರದಲ್ಲೂ ಮಾರ್ಪಾಡು ಅವಶ್ಯ. ಆದರೆ ಬದಲಾವಣೆಗಳು ಯಕ್ಷಗಾನದ ಮೂಲಸತ್ವಕ್ಕೆ ಧಕ್ಕೆಯಾಗದೆ ರೀತಿಯಲ್ಲಿ ನಿರ್ದಿಷ್ಟ ಚೌಕಟ್ಟಿನಲ್ಲಿರಬೇಕು ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.
ರವಿವಾರ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದಲ್ಲಿ ಸಾಧಕರನ್ನು ಸಮ್ಮಾನಿಸಿ ಅವರು ಆಶೀರ್ವಚನ ನೀಡಿದರು. ವೇದ, ಪುರಾಣ, ಇತಿಹಾಸ ಭಾರತೀಯ ಸಂಸ್ಕೃತಿಯ ಜೀವಾಳ. ಇದು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತಗೊಳ್ಳದೆ ಯಕ್ಷಗಾನ ಮಾಧ್ಯಮ ಜನಸಾಮನ್ಯರಿಗೆ ತಲುಪುವಂತಾಗಿದೆ. ಪೌರಾಣಿಕ ಪಾತ್ರಗಳ ಚಿತ್ರಣಗಳನ್ನು ಕಣ್ಣಿಗೆ ಕಟ್ಟುವಂತೆ ಮೂಡಿಸುವ ಜವಾಬ್ದಾರಿ ಕಲಾವಿದರಿಗಿದೆ ಎಂದರು.
ಯಕ್ಷಗಾನ ಕಲಾವಿದರು ಶಿಲ್ಪಿಯಂತೆ ವಿಗ್ರಹ ಸುಂದರವಾಗಿ ಮೂಡಲು ಶಿಲ್ಪಿಯಲ್ಲಿ ಅಸಾಧಾರಣ ಪ್ರತಿಭೆ ಇರಬೇಕು. ಕಲಾವಿದರು ಎಷ್ಟು ಪಾತ್ರ ಮಾಡಿದರೂ ವಿಭಿನ್ನತೆ ಇರುತ್ತದೆ. ಹೀಗಾಗಿ ಯಕ್ಷಗಾನ ಜೀವಂತ ಕಲೆಯಾಗಿದೆ. ಯಕ್ಷಗಾನ ಸಮ್ಮೇಳನ ಮಾಪಾxಗಳಿಗೆ ಸೂಕ್ತ ವೇದಿಕೆಯಾಗಬೇಕು. ಸರಕಾರ, ಸಂಘ-ಸಂಸ್ಥೆಗಳ ವತಿಯಿಂದ ಕಲೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಭಿಮಾನಿಗಳಿಂದ ಯಕ್ಷಗಾನ ಕಲೆ ಮತ್ತಷ್ಟು ಶ್ರೀಮಂತವಾಗಲಿದೆ. ಸಮ್ಮೇಳನದ ಮೂಲಕ ಯಕ್ಷಗಾನದ ಜ್ವಾಲಾಂತ ಸಮಸ್ಯೆಗಳು ಪರಿಹಾರವಾಗಬೇಕು ಎಂದರು.
ಸಮ್ಮೇಳನಾಧ್ಯಕ್ಷ ಡಾ| ಎಂ. ಪ್ರಭಾಕರ ಜೋಶಿ, ಶಾಸಕ ಕೆ.ರಘುಪತಿ ಭಟ್, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್, ಸಮ್ಮೇಳನ ಕಾರ್ಯಾಧ್ಯಕ್ಷ ಡಾ| ಜಿ.ಎಲ್. ಹೆಗಡೆ, ಹಿರಿಯ ಕಲಾವಿದರಾದ ಡಾ| ಕೋಳ್ಯೂರು ರಾಮಚಂದ್ರ ರಾವ್, ಪಾತಾಳ ವೆಂಕಟರಮಣ ಭಟ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಎನ್. ಪಂಜಾಜೆ ಹಾಗೂ ಸುರೇಂದ್ರ ಪಣಿಯೂರು ಅವರ 2 ಕೃತಿಗಳನ್ನು ಸೋದೆ ಶ್ರೀಗಳು ಬಿಡುಗಡೆಗೊಳಿಸಿದರು. ವಿದ್ಯಾ ಪ್ರಸಾದ್ ಮತ್ತು ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
75 ಮಂದಿ ಸಾಧಕರಿಗೆ ಸಮ್ಮಾನ
ಜನ ಮನದ ಜೀವನಾಡಿ “ಉದಯವಾಣಿ’ಯು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಗಣನೀಯ ಸೇವೆಯನ್ನು ಸ್ಮರಿಸಿ ಸಮ್ಮಾನ ಮಾಡಲಾಯಿತು. ಸಂಪಾದಕ ಅರವಿಂದ ನಾವಡ ಅವರು “ಉದಯವಾಣಿ’ ಪರವಾಗಿ ಸಮ್ಮಾನ ಸ್ವೀಕರಿಸಿದರು.
ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘ ಮಂಗಳೂರು, ಯಕ್ಷಗಾನ ಕೇಂದ್ರ ಎಂಜಿಎಂ, ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ಸಾಲಿಗ್ರಾಮ, ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ, ಯಕ್ಷಕಲಾ ಕೇಂದ್ರ ಕೆರೆಮನೆ, ಸಾಲಿಗ್ರಾಮ ಮಕ್ಕಳ ಮೇಳ ಕೋಟ, ಯಕ್ಷ ದೇಗುಲ ಬೆಂಗಳೂರು, ಪಡ್ರೆ ಚಂದು ಯಕ್ಷಗಾನ ಕಲಾ ಪ್ರತಿಷ್ಠಾನ ಕಾಸರಗೋಡು, ಸಿರಿಬಾಗಿಲು ವೆಂಕಪ್ಪಯ್ಯ ಯಕ್ಷಕಲಾ ಪ್ರತಿಷ್ಠಾನ ಕಾಸರಗೋಡು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು, ಯಕ್ಷಮಿತ್ರ ಟೊರೆಂಟೊ ಕೆನಡಾ, ಉದಯವಾಣಿ ಮಣಿಪಾಲ, ನಮ್ಮ ಕುಡ್ಲ ಮಂಗಳೂರು, ಯಕ್ಷಪ್ರಭಾ ಪತ್ರಿಕೆ ಕಟೀಲು, ಯಕ್ಷರಂಗ ಪತ್ರಿಕೆ ಹಳದಿಪುರ, ಕಣಿಪುರ ಪತ್ರಿಕೆ ಕುಂಬ್ಳೆ, ಗೋಪಾಲಕೃಷ್ಣ ಕುರುಪ್, ಸುಜನಾ ಸುಳ್ಯ, ಬಲಿಪ ನಾರಾಯಣ ಭಾಗವತ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ, ಗೋಡೆ ನಾರಾಯಣ ಹೆಗಡೆ, ಕೆ.ಗೋವಿಂದ ಭಟ್, ಪೇತ್ರಿ ಮಾಧವ ನಾಯ್ಕ, ಅರುವ ಕೊರಗಪ್ಪ ಶೆಟ್ಟಿ, ರಾಮ ಸುಬ್ರಾಯ ಹೆಗಡೆ ಚಿಟ್ಟಾಣಿ, ಬೋಳಾರ ಸುಬ್ಬಯ್ಯ ಶೆಟ್ಟಿ, ಪೆರುವಾಯಿ ನಾರಾಯಣ ಶೆಟ್ಟಿ, ಪುಂಡರೀಕಾಕ್ಷ ಉಪಾಧ್ಯಾಯ, ಶಿವರಾಮ ಜೋಗಿ ಬಿಸಿ ರೋಡ್, ಬಾಡ ಸುಕ್ರಪ್ಪ ನಾೖಕ್, ಐರೋಡಿ ಗೋವಿಂದಪ್ಪ, ಕುರಿಯ ಗಣಪತಿಶಾಸ್ತ್ರೀ, ಗಾವಳಿ ಶೀನ ಕುಲಾಲ್, ಎಂ.ಕೆ.ರಮೇಶ್ ಆಚಾರ್ಯ, ಆರ್ಗೋಡು ಮೋಹನದಾಸ ಶೆಣೈ, ಹೆಮ್ಮಾಡಿ ರಾಮ ಎಂ.ಚಂದನ್, ಬೇಗಾರು ಪದ್ಮನಾಭ ಶೆಟ್ಟಿಗಾರ್, ಎಳ್ಳಂಪಳ್ಳಿ ಜಗನ್ನಾಥ ಆಚಾರ್, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮುಂಬಯಿ, ಲೀಲಾವತಿ ಬೈಪಡಿತ್ತಾಯ ಗುರುವಯ್ಯ ಒಡೆಯರ್ ಹೊಳಲ್‌ಕೆರೆ, ಚಿಕ್ಕಚೌಡಯ್ಯ ನಾಯ್ಕ ಟಿ.ನರಸಿಪುರ, ಸಿ.ಲಿಂಗಪ್ಪ ಹೊಸಕೋಟೆ, ತಿಪ್ಪಣ್ಣ ಮೈಸೂರು, ಸಿ.ಚನ್ನಬಸವಯ್ಯ ತುಮಕೂರು, ಎಂ.ಮುನಿರೆಡ್ಡಿ ಕೋಲಾರ, ಮಾರ್ಥಾ ಏಸ್ಟನ್ ಸಿಕೋರಾ, ಡಾ| ಜಿ.ಎಸ್.ಭಟ್ ಸಾಗರ, ಎಸ್.ಎನ್.ಪಂಜಾಜೆ, ವಿನಾಯಕ ಹೆಗಡೆ ಕಲ್ಗದ್ದೆ, ತೋನ್ಸೆ ಜಯಂತ್ ಕುಮಾರ್, ಸುಬ್ರಾಯ ಈಶ್ವರ ಹೆಗಡೆ ಕಪ್ಪೆಕೆರೆ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್, ಕೆ.ವಿ.ರಮೇಶ್ ಕಾಸರಗೋಡು, ಶುಂಠಿ ಸತ್ಯನಾರಾಯಣ ಭಟ್ಟ, ಎನ್.ಜಿ.ಹೆಗಡೆ ಸಿದ್ದಾಪುರ, ಕೆ.ದಿವಾಕರ ಕಾರಂತ, ಐತಪ್ಪ ಟೈಲರ್ ಮಂಜೇಶ್ವರ, ರಾಮಚಂದ್ರ ಹೆಗಡೆ ಮೂರೂರು, ಬಾಲಕೃಷ್ಣ ನಾಯ್ಕ ಬ್ರಹ್ಮಾವರ, ಪ್ರಭಾಕರ ಪಾಂಡುರಂಗ ಭಂಡಾರಿ ಕರ್ಕಿ, ಸದಾನಂದ ಕಾಸರಗೋಡು, ಅಂಕುಶ ಗೌಡ ಇಡಗುಂಜಿ, ವಿಟuಲ ಶೆಟ್ಟಿ, ಗೋಪಾಲ ಪೂಜಾರಿ ಮಂಗಳೂರು, ಕುಶಾಲಪ್ಪ ನಾಯ್ಕ ಬೆಳಾಲು, ಬಸವ ಮೊಗವೀರ ಬೇಳೂರು, ಪುತ್ತು ನಾಯ್ಕ ವೇಣೂರು, ನರಸಿಂಹ ಮಡಿವಾಳ, ಮಾದೇವ ನಾಯ್ಕ ಕುಮಟ, ರಘುನಾಥ ಶೆಟ್ಟಿ ನಾಳ, ಬಾಬುನಾಯ್ಕ ಹೆನ್ನಾಬೈಲ್, ಶೇಖರ ಮಾಳ ಕೂಡುಬೆಟ್ಟು, ಮಧುಕರ ಭಟ್ ಅವರನ್ನು ಸಮ್ಮಾನಿಸಲಾಯಿತು.