Advertisement

ರಾಜ್ಯದ ಶೇ. 74ರಷ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ರೋಗ ಲಕ್ಷಣಗಳೇ ಇಲ್ಲ 

12:02 AM Dec 26, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪಾಟಿಸಿವ್‌ ಪ್ರಕರಣಗಳಲ್ಲಿ ಶೇ. 74ರಷ್ಟು ಮಂದಿಗೆ ರೋಗಲಕ್ಷಣಗಳೇ ಇಲ್ಲ!

Advertisement

ಹೀಗಾಗಿ, ಕೆಲವು ವಲಯಗಳಲ್ಲಿ ರ್‍ಯಾಂಡಮ್‌ ಪರೀಕ್ಷೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದ್ದು, ಎಲ್ಲ ಜಿಲ್ಲೆಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ಗುರಿ ನೀಡಿರುವ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ರ್‍ಯಾಂಡಮ್‌ ಪರೀಕ್ಷೆ ಮಾಡಲಾಗುತ್ತಿದೆ. ಈ ವೇಳೆ ಕ್ಲಸ್ಟರ್‌ಗಳಲ್ಲಿ ಲಕ್ಷಣಗಳಿರದ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢಗೊಳ್ಳುತ್ತಿದೆ. ನಿತ್ಯ 1.14 ಲಕ್ಷ ಕೊರೊನಾ ಸ್ವಾéಬ್‌ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಆ ಪೈಕಿ ಕೊರೊನಾ ಲಕ್ಷಣಗಳಿರುವ 9,422 ಮಂದಿಯ ಸ್ವಾéಬ್‌ ಪರೀಕ್ಷೆಗೆ ಒಳಪಡಿಸಿದಾಗ ಕೇವಲ 58 ಮಂದಿ ಯಲ್ಲಿ ಕೊರೊನಾ ಪಾಸಿಟಿವ್‌ ವರದಿ ಯಾಗಿದೆ. ಕೊರೊನಾ ಲಕ್ಷಣಗಳಿರದ 84,792 ಮಂದಿಯಲ್ಲಿ 331 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

5,894 ಲಕ್ಷಣ ರಹಿತರು :

ಡಿ. 1ರಿಂದ ಡಿ. 24ವರೆಗೆ ರಾಜ್ಯದಲ್ಲಿ 6,902 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ 1,008 ಮಂದಿ ಯಲ್ಲಿ ಕೊರೊನಾ ಲಕ್ಷಣಗಳು ಹಾಗೂ 5,894 ಸೋಂಕಿತರಿಗೆ ಲಕ್ಷಣಗಳು ಇಲ್ಲ. ಬೆಂಗಳೂರಿನಲ್ಲಿ 4,272 ಸೋಂಕಿತರಲ್ಲಿ 3,936 ಮಂದಿ, ಕೊಡಗು 364 ಸೋಂಕಿತರಲ್ಲಿ 308 ಮಂದಿ, ದ.ಕ. ಜಿಲ್ಲೆಯ 377 ಪ್ರಕರಣದಲ್ಲಿ 301, ಚಿಕ್ಕಮಗಳೂರು 308 ಸೋಂಕಿತರಲ್ಲಿ 186 ಮಂದಿ, ಮೈಸೂರು 307 ಸೋಂಕಿತರಲ್ಲಿ 169 ಮಂದಿಯಲ್ಲಿ ಕೊರೊನಾ ಲಕ್ಷಣಗಳೇ ಪತ್ತೆಯಾಗಿಲ್ಲ.

Advertisement

ಎಲ್ಲೆಲ್ಲಿ-ಯಾರಿಗೆ ಪರೀಕ್ಷೆ? :

ರಾಜ್ಯದ ಶೈಕ್ಷಣಿಕ ಸಂಸ್ಥೆ, ಹೊಟೇಲ್‌, ರೆಸ್ಟೋರೆಂಟ್‌, ಮಾಲ್‌ ಹಾಗೂ ಅಂಗಡಿ, ಕಾರ್ಖಾನೆ, ಡೋರ್‌ ಡೆಲಿವರಿ ಸರ್ವೀಸ್‌ ಕಚೇರಿ, ಅಂಗನವಾಡಿ ಮೆಲ್ವಿಚಾರಕರು, ಸಹಾಯಕರು ಸೇರಿದಂತೆ ಇತರ ಜನಸಂದಣಿಯಲ್ಲಿ ಕೆಲಸ ಮಾಡುವ ಸಿಬಂದಿಯನ್ನು ಪ್ರತಿ 15 ದಿನಗಳಿಗೊಮ್ಮೆ ಕಡ್ಡಾಯವಾಗಿ ಕೊರೊನಾ ರ್‍ಯಾಂಡಮ್‌ ಪರೀಕ್ಷೆ ಮಾಡಲಾಗುತ್ತಿದೆ. ಶೀತ, ಜ್ವರ, ಗಂಟಲು ನೋವು, ಉಸಿರಾಟದ ತೊಂದರೆ ಲಕ್ಷಣಗಳಿರುವವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಒಮಿಕ್ರಾನ್‌ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟ 31 ಒಮಿಕ್ರಾನ್‌ ಪತ್ತೆಯಾಗಿದ್ದು, ಅದರಲ್ಲಿ ಪ್ರವಾಸದ ಹಾಗೂ ಸೋಂಕಿತರ ಸಂಪರ್ಕಕ್ಕೆ ಬಾರದ 10 ಮಂದಿಗೆ ಒಮಿಕ್ರಾನ್‌ ಸೋಂಕು ದೃಢಪಟ್ಟಿದೆ.

ಡಿ. 1ರಿಂದ 24ವರೆಗೆ ಪತ್ತೆಯಾದ ಒಟ್ಟು ಪ್ರಕರಣದಲ್ಲಿ  ಕೋವಿಡ್‌ ಲಕ್ಷಣ ಹಾಗೂ ಲಕ್ಷಣವಿಲ್ಲದವರ ವಿವರ :

ಜಿಲ್ಲೆ/ ಕೋವಿಡ್‌ ಲಕ್ಷಣ/      ಲಕ್ಷಣವಿಲ್ಲದ ಪ್ರಕರಣ

ಬೆಂಗಳೂರು ನಗರ:       336/    3936

ಕೊಡಗು :         61/      308

ದ.ಕ. :   76/      301

ಚಿಕ್ಕಮಗಳೂರು :          22/      186

ಮೈಸೂರು :      138      /169

ರಾಜ್ಯದಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳಲ್ಲಿ ಹೆಚ್ಚಿನ ಮಂದಿಗೆ ರೋಗ ಲಕ್ಷಣಗಳು ಕಂಡು ಬರುತಿಲ್ಲ. ಈ ನಿಟ್ಟಿ ನಲ್ಲಿ ರ್‍ಯಾಂಡಮ್‌ ಪರೀಕ್ಷೆಯನ್ನು ನಡೆಸಲು ಆದೇಶಿಸಲಾಗಿದ. ಆ ಮೂಲಕ ಸೋಂಕು ಹರಡುವುದನ್ನು ತಡೆ ಯಲು ಆರೋಗ್ಯ ಇಲಾಖೆ ಮುಂದಾಗಿದೆ. -ರಂದೀಪ್‌,  ಆಯುಕ್ತ, ಆರೋಗ್ಯ ಇಲಾಖೆ

 

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next