Advertisement

ವಿದ್ಯಾಪೋಷಕ್‌ನಿಂದ 74.1 ಲಕ್ಷ ರೂ. ಸಹಾಯಧನ

02:27 AM Dec 06, 2021 | Team Udayavani |

ಉಡುಪಿ: ಯಕ್ಷಗಾನ ಕಲಾರಂಗ, ವಿದ್ಯಾಪೋಷಕ್‌ ವತಿ ಯಿಂದ ರವಿವಾರ ಪೂರ್ಣಪ್ರಜ್ಞ ಕಾಲೇಜಿನ ಸಭಾಭವನದಲ್ಲಿ ಜರಗಿದ ವಿನಮ್ರ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ 1,023 ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 74.10 ಲಕ್ಷ ರೂ., ಮೂವರು ವಿದ್ಯಾರ್ಥಿಗಳಿಗೆ ಸೋಲಾರ್‌ ದೀಪ ಮತ್ತು ಇಬ್ಬರಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.

Advertisement

ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಅಧ್ಯಕ್ಷತೆಯಲ್ಲಿ ಸಮಾರಂಭ ಜರಗಿತು. ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಎಂ.ಎಸ್‌. ಮಹಾಬಲೇಶ್ವರ ಶುಭಾಶಂಸನೆಗೈದರು. ಮಂಗಳೂರು ಪ್ರೇರಣ ಇನ್ಫೋಸಿಸ್‌ನ ಪ್ರಮುಖ ರವಿರಾಜ್‌ ಬೆಳ್ಮ, ಉದ್ಯಮಿಗಳಾದ ಸಜಿತ್‌ ಹೆಗ್ಡೆ, ಯು. ವಿಶ್ವನಾಥ ಶೆಣೈ, ಸದಾಶಿವ ಭಟ್‌, ಹರಿಯಪ್ಪ ಕೊಟ್ಯಾನ್‌, ಪುರುಷೋತ್ತಮ ಪಟೇಲ್‌, ಸೆಲ್ಕೊ ಸೊಲಾರ್‌ ಸಂಸ್ಥೆಯ ಡಿಜಿಎಂ ಗುರುಪ್ರಸಾದ್‌ ಶೆಟ್ಟಿ, ನಿವೃತ್ತ ಅಧ್ಯಾಪಕ ರಾಜಗೋಪಾಲ ಆಚಾರ್ಯ ವೇದಿಕೆಯಲ್ಲಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರು ನಿರೂಪಿಸಿದರು. ಜತೆ ಕಾರ್ಯದರ್ಶಿ ಎಚ್‌.ಎನ್‌. ಶೃಂಗೇಶ್ವರ್‌ ವಂದಿಸಿದರು.

ಗಳಿಕೆ ಒಂದಂಶ ಸಮಾಜಕ್ಕಿರಲಿ
ಸಮಾಜದಲ್ಲಿರುವ ಒಂದಿಷ್ಟು ವ್ಯಕ್ತಿ ಗಳು ಕೈಲಾದ ಸಹಾಯ ಮಾಡುತ್ತ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಾರೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉನ್ನತ ಹಂತಕ್ಕೆ ಏರಬೇಕು. ಬಳಿಕ ಇನ್ನುಳಿದವರಿಗೆ ಸಹಾಯ ಮಾಡಬೇಕು ಎಂದು ಎಂ.ಎಸ್‌. ಮಹಾಬಲೇಶ್ವರ ಅವರು ಕಿವಿಮಾತು ಹೇಳಿದರು.

ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

ಡಾ| ಜಿ. ಶಂಕರ್‌ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರ ರೂಪಿಸಿಕೊಳ್ಳುವುದರಿಂದ ಸಾಮಾಜಿಕವಾಗಿ ತೊಡಗಿಸಿ ಕೊಳ್ಳಲು ಸಹಕಾರಿ. ಗಳಿಸಿದ ಸಂಪತ್ತಿನ ಒಂದಂಶವನ್ನಾದರೂ ಸಮಾಜಕ್ಕೆ ವಿನಿಯೋಗಿಸಬೇಕು. ವಿದ್ಯಾಪೋಷಕ್‌ನಿಂದ ನೆರವು ಪಡೆದ ವಿದ್ಯಾರ್ಥಿಗಳಿಗೆ ಹೊಣೆಗಾರಿಕೆ ದೊಡ್ಡದಿದೆ ಎಂದರು.

Advertisement

ಉದ್ಘಾಟನೆ ಕಾರ್ಯಕ್ರಮ
ಕಾರ್ಯಕ್ರಮವನ್ನು ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿ ಅನುಗ್ರಹಿಸಿದರು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್‌ ಸೊಸೈಟಿ ಅಧ್ಯಕ್ಷ ಎಚ್‌.ಎಸ್‌. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಬಂಟಕಲ್ಲು ಎಸ್‌ಎಂವಿಟಿಟಿ ಕಾಲೇಜಿನ ಕಾರ್ಯದರ್ಶಿ ರತ್ನಕುಮಾರ್‌, ಲೆಕ್ಕಪರಿಶೋಧಕ ಗಣೇಶ್‌ ಕಾಂಚನ್‌, ಆದರ್ಶ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ| ಜಿ. ಎಸ್‌. ಚಂದ್ರಶೇಖರ್‌, ಮಂಗಳೂರಿನ ಡಾ| ಜೆ.ಎನ್‌. ಭಟ್‌, ಮೈಲೈಫ್ ಸಂಸ್ಥಾಪಕ ಪ್ರವೀಣ್‌ ಗುಡಿ ಭಾಗವಹಿಸಿದ್ದರು. ಎಸ್‌.ವಿ. ಭಟ್‌ ಸ್ವಾಗತಿಸಿ, ಅಶೋಕ್‌ ಎಂ. ವಂದಿಸಿ, ಗಣೇಶ್‌ ರಾವ್‌ ಎಲ್ಲೂರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next