Advertisement

73ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟ

04:25 PM Aug 15, 2019 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಫುಟ್‌ಬಾಲ್ ಮೈದಾನದಲ್ಲಿ ಕಳೆದ ಇಪ್ಪತ್ತು ದಿನಗಳಿಂದ ನಡೆಯುತ್ತಿದ್ದ 73ನೇ ವರ್ಷದ ಇಂಡಿಪೆಂಡೆನ್ಸ್ ಕಪ್ ಫುಟ್ಬಾಲ್ ಪಂದ್ಯಾಟದ ಪೈನಲ್ ಪಂದ್ಯಾಟ ರವಿವಾರದಂದು ನಡೆಯಿತು.

Advertisement

ಹಿರಿಯ ಪ್ರಾಥಮಿಕ ಶಾಲಾ ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಮಂಗಳೂರು ಒನ್, ರನ್ನರ್‌ಅಪ್ ಪ್ರಶಸ್ತಿಯನ್ನು ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಪ್ರೈಮರಿ ಸ್ಕೂಲ್ ಪಡೆದುಕೊಂಡಿತು. ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಮಂಗಳೂರು ಒನ್ ತಂಡದ ಮಹೀ ಅಮೀನ್ ಪಡೆದುಕೊಂಡರು. ಹಿರಿಯ ಪ್ರಾಥಮಿಕ ಶಾಲಾ ಹುಡುಗರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಉಳ್ಳಾಲದ ಹಜರತ್ ಸೈಯದ್ ಮದನಿ ಶಾಲಾ ತಂಡ ಪಡೆದುಕೊಂಡಿತು. ಇಕ್ರಾ ಶಾಲೆ ರನ್ನರ್‌ಅಪ್ ಪಡೆದಿದೆ. ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಇಕ್ರಾ ಶಾಲೆಯ ಮೊಹಮ್ಮದ್ ಪಡೆದುಕೊಂಡರು.

ಪ್ರೌಢಶಾಲಾ ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸೈಂಟ್ ಜೋಸೆಫ್ ಶಾಲೆ ಪಡೆದುಕೊಂಡರೆ, ರನ್ನರ್‌ಅಪ್ ಸ್ಥಾನವನ್ನು ಎನ್‌ಐಟಿಕೆ ಪಡೆದುಕೊಂಡಿದೆ. ಉತ್ತಮ ಆಟಗಾರ್ತಿಯಾಗಿ ಸೈಂಟ್ ಸೋಸೆಫ್ ಶಾಲೆಯ ರಚನಾ ಶೆಟ್ಟಿ ಹೊರಹೊಮ್ಮಿದರು. ಪ್ರೌಢಶಾಲಾ ಹುಡುಗರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ರೋಸಾರಿಯೋ ಶಾಲೆ ಪಡೆದುಕೊಂಡರೆ, ರನ್ನರ್‌ಅಪ್ ಸ್ಥಾನವನ್ನು ಸ್ನೇಹ ಪಬ್ಲಿಕ್ ಶಾಲೆ ಪಡೆಯಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ಸ್ನೇಹ ಪಬ್ಲಿಕ್ ಶಾಲೆಯ ರಯೀದ್ ಪಡೆದರು.

ಪಿಯುಸಿ ಕಾಲೇಜು ವಿಭಾದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಬಿ ತಂಡ ಪ್ರಥಮ ಬಹುಮಾನ ಪಡೆದರೆ, ರನ್ನರ್‌ಅಪ್ ಸ್ಥಾನವನ್ನು ಸಂತಅಲೋಶಿಯಸ್ ಎ ತಂಡ ಪಡೆಯಿತು. ಉತ್ತಮ ಆಟಗಾರ ಪ್ರಶಸ್ತಿಯನ್ನು ಸಂತ ಅಲೋಶಿಯಸ್ ಎ ತಂಡದ ಮಾಜ್ ಅವರು ಪಡೆದರು. ಕಾಲೇಜು ಹುಡುಗಿಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸಂತ ಅಲೋಶಿಯಸ್ ಕಾಲೇಜಿನ ಎ ತಂಡ ಪಡೆದರೆ, ರನ್ನರ್‌ಅಪ್ ಸ್ಥಾನವನ್ನು ಸಂತಅಲೋಶಿಯಸ್ ಬಿ ತಂಡ ಪಡೆಯಿತು. ಉತ್ತಮ ಆಟಗಾರರಾಗಿ ಡಿಯೋನ ಡಿಸೋಜಾ ಹೊರಹೊಮ್ಮಿದರು.

Advertisement

ಪದವಿ ಕಾಲೇಜು ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಸಂತ ಅಲೋಶಿಯಸ್ ತಂಡ ಪಡೆದರೆ, ರನ್ನರ್‌ಅಪ್ ಪ್ರಶಸ್ತಿಯನ್ನು ಯೆನೆಪೋಯ ಕಾಲೇಜು ಬಿ ತಂಡ ಪಡೆಯಿತು. ಉತ್ತಮ ಆಟಗಾರರಾಗಿ ಸಂತ ಅಲೋಶಿಯಸ್ ಕಾಲೇಜಿನ ನಿಯಾಜ್ ಅವರು ಹೊರಹೊಮ್ಮಿದರು.

ಕಾರ್ಯಕ್ರಮದಲ್ಲಿ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಣೇಶ್ ರಾವ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಪ್ರಧಾನ ವ್ಯವಸ್ಥಾಕ ಟಿ. ನಂಜುಡಪ್ಪ, ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ವಂ| ಫಾ| ಡೈನೇಶಿಯಸ್ ವಾಸ್, ದ.ಕ. ಜಿಲ್ಲಾ ಫುಟ್‌ಯಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ. ಅಸ್ಲಂ, ಮೀನುಗಾರರ ಮುಖಂಡ ಮೋಹನ್ ಬೇಂಗ್ರೆ, ಬೆಂಗಳೂರು ಫುಟ್‌ಬಾಲ್ ಕ್ಲಬ್‌ನ ಕೋಚ್ ಬಿ.ಬಿ. ಥಾಮಸ್, ಎ.ಕೆ. ಫ್ಲೆ ವುಡ್ಸ್ ನಿರ್ದೇಶಕ ಎ.ಕೆ. ನಿಯಾಜ್, ಆಟಗಾರ ಮುಶ್ರಫ್, ಜಾನ್, ಸಮೀರ್, ಸತೀಶ್ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next