Advertisement

ವೆಸ್ಟರ್ನ್ ಇಂಡಿಯಾ ಪೂಜಾ ಸಮಿತಿಯ 73ನೇ ವಾರ್ಷಿಕ ಮಹಾಪೂಜೆ

02:59 PM Dec 28, 2017 | Team Udayavani |

ಮುಂಬಯಿ: ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಹಿರಿಯರು ಕಡು ಬಡತನದಲ್ಲಿದ್ದರೂ ನಮ್ಮಸಂಸ್ಕೃತಿಯನ್ನು ಉಳಿಸುವುದಕ್ಕೋ ಸ್ಕರ ಮುಂಬಯಿಯಲ್ಲಿ ಈ ಪೂಜಾ ಸಮಿತಿಯನ್ನು ಕಟ್ಟಿ ಬೆಳೆಸಿದ್ದಾರೆ. ಜಾತಿ, ಮತ ಭೇದವಿಲ್ಲದೆ ಈ ಸಮಿತಿಯು 73ನೇ ವರ್ಷ ಪೂರೈಸಿರುವುದು ಹೆಮ್ಮೆಯ ವಿಷಯ. ಶನಿ ದೇವರ ಆಶೀರ್ವಾದ ಪಡೆದು ಶನಿಭಕ್ತರಾದ ನಾವೆಲ್ಲರೂ ಕೂಡಿ ಪೂಜಾ ಸಮಿತಿಯನ್ನು ಮಂದಿರ ನಿರ್ಮಾಣ ಕಾರ್ಯಕ್ಕೆ ತೊಡಗಿಸಿಕೊಳ್ಳಬೇಕು. ಇದರಿಂದ ಧಾರ್ಮಿಕ ಚಿಂತನೆಗೆ ಒತ್ತು ನೀಡಬೇಕು ಎಂದು ಚಿತ್ರನಟ, ನಿರ್ದೇಶಕ, ನಿರ್ಮಾಪಕ ಹಾಗೂ ಸಮಾಜ ಸೇವಕ ರಾಜಶೇಖರ ಕೋಟ್ಯಾನ್‌ ಅವರು ನುಡಿದರು.

Advertisement

ಡಿ. 16ರಂದು ಫೋರ್ಟ್‌ ವೆಸ್ಟರ್ನ್ ಇಂಡಿಯಾ ಪೂಜಾ ಸಮಿತಿಆಯೋಜಿಸಿದ್ದ  73ನೇ ವಾರ್ಷಿಕಮಹಾಪೂಜೆಯ ಧಾರ್ಮಿಕ ಸಭೆ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸಮಾರಂಭದಲ್ಲಿ ನೆರೂಲ್‌ ಶ್ರೀ ಶನೀಶ್ವರ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ, ರಂಗಕರ್ಮಿ  ವಿ. ಕೆ. ಸುವರ್ಣ ಸಮಿತಿಯ ಹಿರಿಯ ಸದಸ್ಯ ಚಂದ್ರಶೇಖರ ವಿ. ಪೂಜಾರಿ ಮತ್ತು ಸಮಿತಿಯ ಮಾಜಿ ಭುವಾಜಿ ಬಾಬು ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ರಂಗಕರ್ಮಿ ವಿ. ಕೆ. ಸುವರ್ಣ ಅವರು,  ಶನಿದೇವರು, ಗುರು ಸ್ವಾಮಿ ಹಾಗೂ ಶಾರದಾ ಮಾತೆಯ ನಿರಂತರ ಸೇವೆ ಮಾಡಿದ ಫಲವಾಗಿ ಇಂದು ಈ ದಿವ್ಯ ವೇದಿಕೆಯಲ್ಲಿ ಅಪ್ರತಿಮ ಧಾರ್ಮಿಕ ವ್ಯಕ್ತಿ ನಾರಾಯಣ ಸಾಲ್ಯಾನ್‌ ಅವರ ಸ್ಮರಣಾರ್ಥ
ಪ್ರಶಸ್ತಿಯೊಂದಿಗೆ ಸಮ್ಮಾನ ದೊರಕಿದೆ. ಇದು ನನ್ನ ಪೂರ್ವ ಜನ್ಮದ ಫಲ ಹಾಗೂ ಶನಿದೇವರ ಆಶೀರ್ವಾದ ಎಂದು ಹೇಳಿದರು. 

  ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಕರ್ನಿರೆ ಗಂಗಾಧರ ಎನ್‌. ಅಮೀನ್‌, ಜೂನಿಟಾ ಬಿಲ್ಡರ್ìನ ನಿರ್ದೇಶಕ ಗಿಲ್ಬರ್ಟ್‌ ಡಿಸೋಜಾ, ಉದ್ಯಮಿ ಯಕ್ಷಗಾನದ ಹಿರಿಯ ಅರ್ಥದಾರಿ ಕೆ. ಕೆ. ಶೆಟ್ಟಿ, ದಹಿಸರ್‌ ಕೊಂಕಣಿಪಾಡಾ ಶ್ರೀ ದುರ್ಗಾಪರಮೇಶ್ವರಿ ಶನೀಶ್ವರ ಮಂದಿರದ ಮಾಜಿ ಅಧ್ಯಕ್ಷ ಶೇಖರ ಶೆಟ್ಟಿ, ಬಿಲ್ಲವ ಛೇಂಬರ್‌ ಆಫ್‌ ಕಾಮರ್ಸ್‌ನ
ಅಧ್ಯಕ್ಷ ಎನ್‌. ಟಿ. ಪೂಜಾರಿ, ನೆರೂಲ್‌ ಶನಿ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ಅವರು ಮಾತನಾಡಿದರು.

Advertisement

ಅತಿಥಿಗಳನ್ನು ಜೆ. ಜೆ. ಕೋಟ್ಯಾನ್‌, ರವಿ ಬಂಗೇರ, ಜನಾರ್ದನ ಶೆಟ್ಟಿ, ವಿಶ್ವನಾಥ ಭಂಡಾರಿ, ಶರದ್‌ ಪೂಜಾರಿ, ಮೋಹನ್‌ ಪೂಜಾರಿ ಹಾಗೂ ಪದಾಧಿಕಾರಿಗಳು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಸಮಿತಿಯ ಗೌರವಾಧ್ಯಕ್ಷ ಹರೀಶ್‌ ಜಿ. ಅಮೀನ್‌ ಮಾತನಾಡಿ, ಸಂಸ್ಥೆಯನ್ನುಕಟ್ಟಿ ಬೆಳೆಸಲು ಕಾರಣರಾದ ಹಿರಿಯರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಮಹಾಪೂಜೆಗೆ ಧನ ಸಂಗ್ರಹ ಮಾಡಿದಸದಸ್ಯರನ್ನು ಹಾಗೂ ಪರಿಸರದ ರಾತ್ರಿಶಾಲೆಗಳಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಮತ್ತು ಬಹುಮಾನವನ್ನಿತ್ತು ಸಮ್ಮಾ
ನಿಸಲಾಯಿತು. ವಿದ್ಯಾರ್ಥಿಗಳ ಯಾದಿಯನ್ನು ಶರದ್‌ ಪೂಜಾರಿ ವಾಚಿಸಿದರು. ಸಮಿತಿಯ ಅಧ್ಯಕ್ಷ ಜೆ. ಜೆ. ಕೋಟ್ಯಾನ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿ ತಿಯ 74ನೇ ವಾರ್ಷಿಕ ಮಹಾಪೂಜೆಯಲ್ಲಿ ಸಮಿತಿಯ ಅಮೃತ ಮಹೋ ತ್ಸವಕ್ಕೆ ಚಾಲನೆ ನೀಡಲಾಗುವುದೆಂದು ನುಡಿದು ಅತಿಥಿಗಳನ್ನು ಸ್ವಾಗತಿಸಿದರು. ವಿಶ್ವನಾಥ ಭಂಡಾರಿ ವಂದಿಸಿದರು. ಹರೀಶ್‌ ಶಾಂತಿ ಅವರಿಂದ ಗಣ ಹೋಮ, ಶ್ರೀ ಸತ್ಯನಾರಾಯಣ ಮಹಾ ಪೂಜೆ ನಡೆಯಿತು. ಸತೀಶ್‌ ಎನ್‌. ಕೋಟ್ಯಾನ್‌ ಅವರಿಂದ ಶ್ರೀ ಶನೀಶ್ವರ ಕಲಶ ಪ್ರತಿಷ್ಠೆ, ಮಹಾಪೂಜೆ ನಡೆಯಿತು.

ಸಮಿತಿಯ ಸದಸ್ಯರು ಹಾಗೂ ಆಮಂತ್ರಿತ ಅರ್ಥದಾರಿಗಳಿಂದ ಶ್ರೀ ಶನೀಶ್ವರ ಗ್ರಂಥ ಪಾರಾಯಣ ನಡೆಯಿತು. ರಾಜೇಂದ್ರ ದುಬೆ ಅವರಿಂದ ಶನೀಶ್ವರ ದೇವರ ಕುರಿತು ಹಿಂದಿಯಲ್ಲಿ ಪ್ರವಚನ ನಡೆಯಿತು. ಆಜೆªಪಾಡಾ ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next