Advertisement

ಭಾರತೀಯ ಪೌರತ್ವಕ್ಕಾಗಿ 7,306 ಪಾಕಿಸ್ತಾನಿಯರಿಂದ ಅರ್ಜಿ: ಕೇಂದ್ರ ಗೃಹ ಖಾತೆ

02:58 PM Dec 22, 2021 | Team Udayavani |

ನವದೆಹಲಿ: ಭಾರತದ ಪೌರತ್ವಕ್ಕಾಗಿ ಸುಮಾರು 7,306 ಮಂದಿ ಪಾಕಿಸ್ತಾನಿಯರು ಅರ್ಜಿಯನ್ನು ಸಲ್ಲಿಸಿದ್ದು, ಇವುಗಳೆಲ್ಲ ವಿಲೇವಾರಿ ಮಾಡಲು ಬಾಕಿ ಇದ್ದಿರುವುದಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಎಂಇಎಸ್ ವಿರುದ್ಧ ಕನ್ನಡ ಪರ ಸಂಘಟನೆ ಆಕ್ರೋಶ: ಡಿಸೆಂಬರ್ 31ರಂದು ಕರ್ನಾಟಕ ಬಂದ್

ಲೋಕಸಭಾ ಸದಸ್ಯ ಅಬ್ದುಲ್ ವಾಹಾಬ್ ಅವರು, ಭಾರತದ ಪೌರತ್ವಕ್ಕಾಗಿ ಪ್ರಸ್ತುತ ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆಂದು ಕೇಳಿರುವ ಪ್ರಶ್ನೆಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್, 2021ರ ಡಿಸೆಂಬರ್ 14ರವರೆಗೆ ಭಾರತೀಯ ಪೌರತ್ವಕ್ಕಾಗಿ ಸುಮಾರು 10,635 ಅರ್ಜಿಗಳು ಬಂದಿದ್ದು, ಇದರಲ್ಲಿ 7,306 ಪಾಕಿಸ್ತಾನದಿಂದ ಬಂದಿರುವುದಾಗಿ ತಿಳಿಸಿದ್ದಾರೆ.

ಈವರೆಗೆ ಬಂದಿರುವ 10,635 ಅರ್ಜಿಗಳಲ್ಲಿ 7,306 ಪಾಕಿಸ್ತಾನದಿಂದ ಬಂದಿದ್ದು, 1,152 ಅಫ್ಘಾನಿಸ್ತಾನ್, ಶ್ರೀಲಂಕಾ ಮತ್ತು ಯುಎಸ್ ಎನಿಂದ 223, ನೇಪಾಳದಿಂದ 189, ಬಾಂಗ್ಲಾದೇಶದಿಂದ 161 ಹಾಗೂ ಸ್ಟೇಟ್ ಲೆಸ್(ರಾಜ್ಯರಹಿತ)ನಿಂದ 428 ಅರ್ಜಿಗಳು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ ಚೀನಾದಿಂದಲೂ ಹತ್ತು ಮಂದಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಪೌರತ್ವ ನೀಡುವ ಬಗ್ಗೆ ಅನುಮತಿ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next