Advertisement

73,000 ಕಿ.ಮೀ. ಪಯಣಿಸಿ ಪಕ್ಷ ಸಂಘಟಿಸಿದ್ದ ಅಮಿತ್‌ ಶಾ

02:08 AM Apr 14, 2019 | mahesh |

ಹೊಸದಿಲ್ಲಿ: 2013ರಲ್ಲಿ ಉತ್ತರಪ್ರದೇಶ ಬಿಜೆಪಿ ಉಸ್ತುವಾರಿ ವಹಿಸಿಕೊಂಡಿದ್ದ ಅಮಿತ್‌ ಶಾ, 2014ರಲ್ಲಿ ಆ ರಾಜ್ಯದ ಉದ್ದಗಲಕ್ಕೂ ಸುಮಾರು 73,000 ಕಿ.ಮೀ.ವರೆಗೆ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ್ದರಿಂದಲೇ ಬಿಜೆಪಿ ಅಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು “ಅಮಿತ್‌ ಶಾ ಔರ್‌ ಭಾಜಪಾ ಕಿ ಯಾತ್ರಾ’ ಪುಸ್ತಕದಲ್ಲಿ ಹೇಳಲಾಗಿದೆ. ಬಿಜೆಪಿಯ ಚಿಂತನಾ ತಂಡವಾದ ಶ್ಯಾಮ ಪ್ರಸಾದ್‌ ಮುಖರ್ಜಿ ರಿಸರ್ಚ್‌ ಫೌಂಡೇಶನ್‌ ಈ ಪುಸ್ತಕ ಬಿಡುಗಡೆ ಮಾಡಿದೆ. ಶಾ ಪಕ್ಷ ಸಂಘಟನೆಗಾಗಿ 53 ಜಿಲ್ಲೆಗಳಿಗೆ ಭೇಟಿ ನೀಡಿ ಎಲ್ಲ ಜನತೆಯನ್ನೂ ಮುಟ್ಟುವಲ್ಲಿ ಯಶಸ್ವಿಯಾಗಿದ್ದರು. ಇದರ ಫ‌ಲವಾಗಿ, 2014ರಲ್ಲಿ ಬಿಜೆಪಿ, ಉ.ಪ್ರ.ದ 80 ಸ್ಥಾನಗಳಲ್ಲಿ 71 ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next