Advertisement

72 ವರ್ಷದ ಹಿರಿಯ ಆನೆ, ಕೊಡಗು ಮೂಲದ ಅಂಬಿಕಾ ವಾಷಿಂಗ್ಟನ್ ನಲ್ಲಿ ವಿಧಿವಶ

09:07 AM Mar 30, 2020 | Nagendra Trasi |

ವಾಷಿಂಗ್ಟನ್: ಏಷ್ಯಾಖಂಡದಲ್ಲಿಯೇ ಅತೀ ಹಿರಿಯ ಆನೆ ಎನ್ನಿಸಿಕೊಂಡಿದ್ದ 72 ವರ್ಷದ ಭಾರತೀಯ ಮೂಲದ ಅಂಬಿಕಾ ಎಂಬ ಹೆಣ್ಣಾನೆ ವಾಷಿಂಗ್ಟನ್ ನ ಸ್ಮಿತ್ ಸೋನಿಯಾನ್ಸ್ ನ್ಯಾಷನಲ್ ಝೂನಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

Advertisement

ಕೊಡಗಿನಲ್ಲಿ ಜನಿಸಿದ್ದ ಅಂಬಿಕಾ ಅಮೆರಿಕ ಸೇರಿದ್ದು ಹೇಗೆ?
1948ರಲ್ಲಿ ಭಾರತದಲ್ಲಿ ಜನಿಸಿದ್ದ ಅಂಬಿಕಾ ಜಗತ್ತಿನ ಮೂರನೇ ಅತೀ ಹಿರಿಯ ಏಷಿಯನ್ ಆನೆಗಳಲ್ಲಿ ಒಂದಾಗಿದೆ. 8 ವರ್ಷದ ಆನೆಯನ್ನು ಕೊಡಗಿನ ಕಾಡಿನಲ್ಲಿ ಸೆರೆಹಿಡಿಯಲಾಗಿತ್ತು. ಬಳಿಕ 1961ರವರೆಗೂ ಮರದ ದಿಮ್ಮಿಗಳನ್ನು ಸಾಗಿಸುವ ಕೆಲಸಕ್ಕೆ ಅಂಬಿಕಾಳನ್ನು ಬಳಸಿಕೊಳ್ಳಲಾಗಿತ್ತು.

ನಂತರ ಚಿಲ್ಡ್ರನ್ ಆಫ್ ಇಂಡಿಯಾ ಅಂಬಿಕಾ ಹೆಸರಿನ ಆನೆಯನ್ನು ಝೂಗೆ ಕೊಡುಗೆಯಾಗಿ ನೀಡಲಾಗಿತ್ತು. ಆರ್ ಐಪಿ ಅಂಬಿಕಾ ಲವಿಂಗ್ ಗಿಫ್ಟ್ ಫ್ರಾಂ ಇಂಡಿಯಾ ಎಂದು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ತಾರನ್ ಜಿತ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಏಷ್ಯಾದ ಹಿರಿಯ ಆನೆ ಅಂಬಿಕಾ ಸ್ಮಿತ್ ಸೋನಿಯಾನ್ಸ್ ನ್ಯಾಷನಲ್ ಝೂನಲ್ಲಿ ಸಾವನ್ನಪ್ಪಿರುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

72 ವರ್ಷದ ಅಂಬಿಕಾಗೆ ಎದ್ದು ನಿಲ್ಲಲು ಕೂಡಾ ಸಾಧ್ಯವಾಗುತ್ತಿರಲಿಲ್ಲವಾಗಿತ್ತು. ಜೀವಿತಾವಧಿಯಲ್ಲಿ ಒಳ್ಳೆಯ ದಿನಗಳನ್ನು ಕಂಡಿದ್ದ ಅಂಬಿಕಾಗೆ ವಯೋ ಸಹಜ ದೌರ್ಬಲ್ಯದಿಂದಾಗಿ ಅನಾರೋಗ್ಯ ಅನುಭವಿಸಿತ್ತು. ಆದರೆ ಅಂಬಿಕಾಳನ್ನು ನೋಡಿಕೊಳ್ಳುವ ಮಾವುತರು ಪ್ರೀತಿಯಿಂದ ಅದರ ಆರೈಕೆ ಮಾಡಿರುವುದಾಗಿ ವರದಿ ತಿಳಿಸಿದೆ.

ಮುಪ್ಪಿನಿಂದಾಗಿ ಅಂಬಿಕಾ ದೈಹಿಕವಾಗಿ ಸೇರಿದಂತೆ ಎಲ್ಲಾ ರೀತಿಯಿಂದಲೂ ನಿಶ್ಯಕ್ತಿಗೆ ಒಳಗಾಗಿತ್ತು. ವೈದ್ಯಕೀಯ ಚಿಕಿತ್ಸೆಯಿಂದ ಆನೆ ಬಳಲಿ ಹೋಗಿತ್ತು ಇದರಿಂದಾಗಿ ಕೊನೆಗೆ ನೋವಿಲ್ಲದ ದಯಾಮರಣಕ್ಕೆ ಗುರಿಪಡಿಸುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ವರದಿ ವಿವರಿಸಿದೆ.

Advertisement

ಆನೆಗಳ ಕೋಠಿಯಲ್ಲಿ ಅಂಬಿಕಾ ಆನೆಯನ್ನು ದಯಾಮರಣಕ್ಕೊಳಪಡಿಸಲಾಗಿತ್ತು. ಆದರೆ ಈ ಪ್ರಕ್ರಿಯೆ ನಡೆಸುವ ವೇಳೆ ಸಂಗಾತಿಗಳಾದ ಶಾಂತಿ ಮತ್ತು ಬೋಝೈ ಆನೆಗಳನ್ನು ದೂರ ಇಡಲಾಗಿತ್ತು. ಆದರೆ ಈ ಪ್ರಕ್ರಿಯೆ ನಡೆಸಿದ ನಂತರ ಮೃತ ಅಂಬಿಕಾಳ ಜತೆ ಕೆಲ ಸಮಯ ಕಳೆಯಲು ಎರಡು ಆನೆಗಳಿಗೆ ಅವಕಾಶ ನೀಡಲಾಗಿತ್ತು. ಸುಮಾರು 15-20 ನಿಮಿಷಗಳ ಕಾಲ
ಅಂಬಿಕಾಳ ದೇಹವನ್ನು ಎರಡು ಆನೆಗಳು ಸುತ್ತುವ ಮೂಲಕ ಪರೀಕ್ಷಿಸಿದ್ದವು. ಅಂಬಿಕಾಳ ಸೊಂಡಿಲನ್ನು ಸ್ಪರ್ಶಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next