ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆಗಳು ಗುಂಡಿ ಬಿದ್ದಿದ್ದು, ಈ ಬಗ್ಗೆ ಸ್ಥಳೀಯಾಡಳಿತಕ್ಕೆ ಅನೇಕ ಬಾರಿ ದೂರು ನೀಡಲಾಗಿತ್ತು. ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಇದೀಗ 72 ವರ್ಷದ ಉದ್ಯಮಿ ಸಹಿತ ತಂಡವೊಂದು ಗುಂಡಿ ಮುಚ್ಚಲು ಮುಂದಾಗಿದೆ.
ಹೌದು… ಮಹಾನಗರ ಪಾಲಿಕೆಯ ಲೆಕ್ಕಾಚಾರದ ಪ್ರಕಾರ ಮಂಗಳೂರು ನಗರದಲ್ಲಿ 63 ಮತ್ತು ಸುರತ್ಕಲ್ ಸುತ್ತಮುತ್ತಲು ಸುಮಾರು 27 ಗುಂಡಿಬಿದ್ದ ರಸ್ತೆಗಳಿವೆ. ಇದಲ್ಲದೆ, ಕೆಲವೆಡೆ ಫುಟ್‌ಪಾತ್‌ಗಳಿಗೆ ಹಾಕಿರುವ ಇಂಟರ್‌ಲಾಕ್ ಕೂಡ ಎದ್ದುಹೋಗಿದೆ. ಇದರಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು, ಮಳೆ ಮುಗಿದ ಬಳಿಕ ವಷ್ಟೇ ಕಾಮಗಾರಿ ಆರಂಭಿಸುತ್ತೇವೆ ಎಂದು ಪಾಲಿಕೆ ಸಬೂಬು ನೀಡಿದೆ.
ಉದ್ಯಮಿ 72 ವರ್ಷದ ಗಿಲ್ಬರ್ಟ್ ಡಿ’ಸೋಜಾ ಸಹಿತ ತಂಡವೊಂದು ನಗರದ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇವರಿಗೆ ಅರ್ಜುನ್ ಮಸ್ಕರೇನ್ಹಸ್, ಅಬ್ದುಲ್ ರವೂಫ್, ನಸೀರ್ ಮತ್ತು ಹೆಡ್ ಟ್ರಾಫಿಕ್ ವಾರ್ಡನ್ ಸ್ಕಾ Ìಡ್ ಆದ ಜೋಯ್ ಗೋನ್ಸಾಸ್ವಿಸ್ ಅವರು ಸಾಥ್ ನೀಡಿದ್ದಾರೆ.
ಅರ್ಜುನ್ ಮಸ್ಕರೇನ್ಹಸ್ ಅವರು “ಸುದಿನ’ ಜತೆ ಮಾತನಾಡಿ, “ಗುಂಡಿ ಮುಚ್ಚುವ ಕೆಲಸಕ್ಕೆ ಮಹಾನಗರ ಪಾಲಿಕೆ ಮುಂದಾಗಬೇಕಿತ್ತು. ಆದರೆ ಇದೀಗ ನಾವೇ ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಕೆಲವೊಂದು ಕಡೆಗಳಲ್ಲಿ ಇಂಟರ್‌ಲಾಕ್ ಎದ್ದು ಹೋಗಿದೆ. ಮತ್ತೂ ಕೆಲವೆಡೆ ರಸ್ತೆ ಮಧ್ಯದಲ್ಲೇ ಗುಂಡಿ ಬಿದ್ದಿದೆ. ಇದೀಗ ನಮ್ಮದೇ ಹಣದಲ್ಲಿ ಸಾಮಗ್ರಿಗಳನ್ನು ತಂದು ಕೆಲವೊಂದು ಕಡೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ನಗರದ ಬಂಟ್ಸ್‌ಹಾಸ್ಟೆಲ್ ಸರ್ಕಲ್ ಸಮೀಪ ರಸ್ತೆ ಬದಿಯ ಗುಂಡಿಯೊಂದನ್ನು ಟ್ರಾಫಿಕ್ ಪೂರ್ವ ಠಾಣೆ (ಕದ್ರಿ) ಯ ಸಿಬಂದಿ ಪುಟ್ಟರಾಮ ಅವರು ತಾನೇ ಕಲ್ಲು, ಮಣ್ಣು ಹಾಕಿ ಮುಚ್ಚುವ ಮೂಲಕ ಇತ್ತೀಚೆಗೆ ಜನಪರ ಕಾಳಜಿ ಮೆರೆದಿದ್ದರು. ಇನ್ನು, ಗುಂಡಿ ಬಿದ್ದ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರ ಕಷ್ಟವಾಗುತ್ತಿದ್ದು, ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳಬೇಕು. ಜತೆಗೆ ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಬೇಕು ಎಂಬ ಉದ್ದೇಶದಿಂದ “ಎಂಸಿಸಿ ಸಿವಿಕ್’ ಎಂಬ ಫೇಸ್‌ಬುಕ್, ಟ್ವಿಟ್ಟರ್ ಗ್ರೂಫ್‌ನಲ್ಲಿ “ಕುಡ್ಲ ಸೆಲ್ಫಿà ಮೂಮೆಂಟ್’ ಎಂಬ ಅಭಿಯಾನವೂ ಇತ್ತೀಚೆಗೆ ಆರಂಭಗೊಂಡಿತ್ತು.