ಕುಂದಾಪುರ: ಅಸ್ಸಾಂನ ಗುವಾಹಟಿಯಲ್ಲಿ ಗುರುವಾರ ಆರಂಭವಾಗಿರುವ 71ನೇ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ನಾಯಕನಾಗಿ ಕುಂದಾಪುರದ ಅನೂಪ್ ಡಿ’ಕೋಸ್ಟಾ ಆಯ್ಕೆಯಾಗಿ ದ್ದಾರೆ. ಈ ಪಂದ್ಯಾವಳಿ ಫೆ. 8ರ ವರೆಗೆ ನಡೆಯಲಿದೆ.
ಗುವಾಹಟಿಗೆ ತೆರಳಿರುವ 12 ಮಂದಿಯ ಕರ್ನಾಟಕ ತಂಡದಲ್ಲಿ ಕೋಟೇಶ್ವರ ಸಮೀಪದ ಕಟೆRàರಿಯ ಚಂದನ್ ಆಚಾರ್ಯ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ಭಟ್ಕಳದ ನವೀದ್ ಖಾನ್ ಕೂಡ ಆಯ್ಕೆಯಾಗಿದ್ದಾರೆ.
ಅನೂಪ್ ಡಿ’ಕೋಸ್ಟಾ ಹೈದರಾಬಾದ್‌ನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಜೂನಿಯರ್ ತಂಡದ ನಾಯಕನಾಗಿ, ಸೀನಿ ಯರ್ ತಂಡದ ಆಟ ಗಾರನಾಗಿ ದೇಶವನ್ನು ಪ್ರತಿ ನಿಧಿಸಿರುವ ಅನುಭವ ಹೊಂದಿರುವ ಇವರು, ಕಳೆದ 15 ವರ್ಷಗಳಿಂದ ಕರ್ನಾಟಕ ತಂಡ ವನ್ನು ಪ್ರತಿನಿಧಿಸುತ್ತಿದ್ದಾರೆ. 13 ಬಾರಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿ ಯಲ್ಲಿ ಕರ್ನಾಟಕ ತಂಡದ ಪರ ಆಡಿ ರುವ ಹೆಗ್ಗಳಿಕೆ ಇವರದು. ರಾಷ್ಟ್ರೀಯ ಟೂರ್ನಿಯೊಂದರಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕ ತಂಡವನ್ನು ಮುನ್ನ ಡೆಸುವ ಅವಕಾಶ ಪಡೆದಿದ್ದಾರೆ.
ಆಲ್‌ರೌಂಡ್ ಆಟಗಾರ:
ಅತ್ಯುತ್ತಮ ವಾಲಿಬಾಲ್ ಕೌಶಲ ಗಳನ್ನು ಪ್ರಯೋಗಿಸುವ ಅನೂಪ್ ಅವರಿಗೆ ಏಷ್ಯಾದ ಅತ್ಯಂತ ಎತ್ತರದ ನೆಗೆತಗಾರ ಎನ್ನುವ ಖ್ಯಾತಿಯಿದೆ. ಆಲ್‌ರೌಂಡರ್ ಆಗಿದ್ದು, ಬ್ಲಾಕ್, ಡಿಫೆನ್ಸ್ ಹಾಗೂ ಸ್ಮಾಷ್‌ನಲ್ಲೂ ಪರಿಣತಿ ಹೊಂದಿದ್ದಾರೆ. 2008ರಲ್ಲಿ ರಾಜ್ಯ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದು, ಅದೇ ವರ್ಷ ಇರಾನ್‌ನಲ್ಲಿ ನಡೆದ ಜೂನಿಯರ್ ಏಷ್ಯನ್ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಬೆಸ್ಟ್ ಸ್ಕೋರರ್ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದು, ಬೆಸ್ಟ್ ಏಷ್ಯನ್ ಯೂತ್ ಪ್ರಶಸ್ತಿಗೆ ಪಾತ್ರರಾಗಿದ್ದರು. 2013ರಲ್ಲಿ ಕಿರಿಯರ ಏಷ್ಯನ್ ಚಾಂಪಿಯನ್ ಶಿಪ್‌ನಲ್ಲಿ ಮಿಂಚಿದ್ದು, 2015ರಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ ಕರ್ನಾಟಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ದ್ದರು. 2015ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.