Advertisement

ಪೈ ಸಂಸ್ಥೆಯಿಂದ 70 ಸಾವಿರ ಪುಸ್ತಕ ವಿತರಣೆ

06:55 AM Jul 07, 2018 | Team Udayavani |

ತುಮಕೂರು: ಶ್ರೀಮಠದ ವಿದ್ಯಾರ್ಥಿಗಳಿಗೆ ಕಳೆದ 13 ವರ್ಷಗಳಿಂದ ಉಚಿತವಾಗಿ ನೋಟ್‌ ಪುಸ್ತಕ ವಿತರಿಸುವುದರ ಜೊತೆಗೆ, ಪ್ರತಿಭಾನ್ವಿತ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಅವರ ಜ್ಞಾನಾರ್ಜನೆಗೆ ಪೈ ಕುಟುಂಬ ಸಹಾಯ ಮಾಡುತ್ತಿದೆ ಎಂದು ಮಠದ ಪೀಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರದ ಸಿದ್ಧಗಂಗಾ ಮಠದಲ್ಲಿ ಪೈ ಇಂಟರನಾಷ್ಯನಲ್‌ ಸಂಸ್ಥೆಯಿಂದ ಆಯೋಜಿಸಿದ್ದ 70 ಸಾವಿರ ಉಚಿತ ನೋಟ್‌
ಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಠದಲ್ಲಿ ಓದಿದ ವಿದ್ಯಾರ್ಥಿಗಳು ಪೋಷಕರಿಗೆ ಒಳ್ಳೆಯ ಮಗನಾಗಿ, ದೇಶಕ್ಕೆ ಉತ್ತಮ ಪ್ರಜೆಯಾಗಿ ಬಾಳುತ್ತಾರೆ ಎಂಬ ನಂಬಿಕೆ ಆವರದ್ದು, ಮಕ್ಕಳು
ಈ ನಂಬಿಕೆ ಹುಸಿಗೊಳಿಸದಂತೆ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಪೈ ಇಂಟರ್‌ ನ್ಯಾಷನಲ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ್‌ ಪೈ ಮಾತನಾಡಿ,ನಡೆದಾಡುವ ದೇವರು, ಶತಾಯುಷಿ ಡಾ.ಶಿವ ಕುಮಾರಸ್ವಾಮೀಜಿ ಸನ್ನಿಧಿಯಲ್ಲಿ ಓದುತ್ತಿರುವ ನೀವೇ ಧನ್ಯರು. ಇಂತಹ ಸೌಭಾಗ್ಯ ಎಲ್ಲರಿಗೂ
ದೊರೆಯುವುದಿಲ್ಲ. ಮುಂದೆ ಉನ್ನತ ಹುದ್ದೆ ತಲುಪಿದಾಗ ಮಠದಲ್ಲಿ ನಿಮ್ಮಂತೆ ಶಿಕ್ಷಣ ಪಡೆಯುವ ಮಕ್ಕಳಿಗೆ ನೆರವಾಗಬೇಕು. ಜೊತೆಗೆ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಠದ ಆಧೀನದಲ್ಲಿ ನಡೆಯುತ್ತಿರುವ 13 ವಿವಿಧ ಶಾಲಾ,ಕಾಲೇಜುಗಳ 9 ಸಾವಿರ ಮಕ್ಕಳಿಗೆ 70 ಸಾವಿರ ನೋಟ್‌ ಪುಸ್ತಕ ವಿತರಿಸಲಾಯಿತು. ವೇದಿಕೆಯಲ್ಲಿ ಪೈ ಇಂಟರ ನ್ಯಾಷನಲ್‌ ಸಂಸ್ಥೆ ನಿರ್ದೇಶಕರಾದ ಗುರುದಾಸ್‌ ಪೈ, ಉತ್ತಮ ಪೈ,ಅಜಿತ್‌ ಕುಮಾರ್‌ ಪೈ, ನಿರ್ಮಲ ಪೈ, ಮೀನಾ ಪೈ, ಜಯಶ್ರೀ ಪೈ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next