Advertisement

ವಕ್ಫ್ ಆಸ್ತಿ ರಕ್ಷಣೆ, ಅಭಿವೃದ್ಧಿಗೆ 700 ಕೋ.ರೂ. ಬೇಡಿಕೆ

01:54 AM Nov 24, 2021 | Team Udayavani |

ಬೆಳ್ತಂಗಡಿ: ವಕ್ಫ್ ಆಸ್ತಿ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಈಗಾಗಲೇ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ಕೇಂದ್ರ ವಕ್ಫ್ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರ ಬಳಿ 500 ಕೋಟಿ ರೂ. ಅನುದಾನದ ಬೇಡಿಕೆ ಇಟ್ಟಿದ್ದಾರೆ. ನಾನು ಕೂಡ 200 ಕೋಟಿ ರೂ. ಬೇಡಿಕೆ ಇರಿಸಿದ್ದು, ಈಹಿಂದೆ 100 ಕೋಟಿ ರೂ. ದೊರೆಯುತ್ತಿದ್ದಲ್ಲಿಗೆ ಈ ಬಾರಿ 700 ಕೋಟಿ ರೂ. ಸಿಗುವ ಭರವಸೆ ಲಭಿಸಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್‌.ಕೆ.ಎಂ. ಶಾಫಿ ಸಅದಿ ಹೇಳಿದರು.

Advertisement

ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಬಳಿಕ ಸೋಮವಾರ ಮಂಗಳೂರಿಗೆ ಮೊದಲ ಬಾರಿ ಆಗಮಿಸಿದ ಅವರು ಕಾಜೂರು ದರ್ಗಾ ಶರೀಫ್ ಗೆ ಪ್ರಥಮ ಭೇಟಿ ನೀಡಿ ಸಮಿತಿಯವರ ಗೌರವ ಸ್ವೀಕರಿಸಿ ಮಾತನಾಡಿದರು.

ಕೇಂದ್ರ ಸರಕಾರದ ಮಹತ್ವಪೂರ್ಣ ವಾದ ಹೊಸ ಯೋಜನೆಯಾದ ಪ್ರವಾಸಿ ತಾಣಗಳಾಗಿರುವ ಧಾರ್ಮಿಕ ಕೇಂದ್ರಗಳನ್ನು ಆಕರ್ಷಣೀಯ ಗೊಳಿಸಲು ಉದ್ಯಾನವನ ನಿರ್ಮಿಸಲು ಅನುದಾನದ ಅವಕಾಶ ಇದ್ದು ಆ ಪಟ್ಟಿಯಲ್ಲಿ ಈಗಾಗಲೇ ಕಾಜೂರಿನ ಹೆಸರನ್ನು ನಮೂದಿಸಿ ಕೇಂದ್ರಕ್ಕೆ ಕಳಿಸಲಾಗಿದೆ. ಸದ್ಯದಲ್ಲೇ ಅನುದಾನ ಒದಗ‌ಲಿದೆ.

ಮುಂದಕ್ಕೆ ಇಲ್ಲಿ ಯಾತ್ರಿ
ನಿವಾಸ, ಶಿಕ್ಷಣ ಸಂಸ್ಥೆಗಳ ಅಭಿವೃದ್ದಿ, ಉನ್ನತ ವಿದ್ಯಾಭ್ಯಾಸ ಕೇಂದ್ರ ಸ್ಥಾಪನೆ, ಉರೂಸ್‌ಗೆ ಅನುದಾನ ಇತ್ಯಾದಿ ಚಟುವಟಿಕೆಗೆ ವಕ್ಫ್ ಮಂಡಳಿಯಿಂದ ಏನೆಲ್ಲಾ ಸಾಧ್ಯತೆಗಳು ಇವೆಯೋ ಅವೆಲ್ಲವನ್ನೂ ಒದಗಿಸಲು ಪ್ರಯತ್ನಪಡಲಾಗುವುದು ಎಂದರು.

ಇದನ್ನೂ ಓದಿ:ಕಾಂಪ್ಲೆಕ್ಸ್‌ ಗೊಬ್ಬರ ಬಳಕೆಗೆ ಹೆಚ್ಚಿನ ಗಮನ ನೀಡಲು ಕ್ರಮ: ಬಿ.ಸಿ.ಪಾಟೀಲ್‌

Advertisement

ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ರಿಯಾಝ್ ಖಾನ್‌, ಸದಸ್ಯ ಯಾಕೂಬ್‌ ಯೂಸುಫ್ ಹೊಸನಗರ ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಮುಸ್ಲಿಂ ಜಮಾಅತ್‌ ಪರವಾಗಿ ಎಸ್‌.ಎಂ. ತಂಙಳ್ಉಜಿರೆ, ಕಾಜೂರು ಸಮಿತಿ ಅಧ್ಯಕ್ಷ ಕೆ.ಯು. ಇಬ್ರಾಹಿಂ ಮೊದಲಾದವರು ಅಭಿ ನಂದನೆ ಸಲ್ಲಿಸಿದರು.

31.50 ಕೋ.ರೂ. ಮಂಜೂರು
ಕೇಂದ್ರದ ಯೋಜನೆಯೊಂದರಲ್ಲಿ ಈಗಾಗಲೇ ಜಿಲ್ಲೆಯ ಲೈನ್‌ ಮಸೀದಿಗೆ 12 ಕೋಟಿ ರೂ., ಹಂಪನಕಟ್ಟೆ ಮಸೀದಿಗೆ 14 ಕೋಟಿ ರೂ. ಹಾಗೂ ದಾರುಲ್‌ ಇರ್ಷಾದ್‌ ಸಂಸ್ಥೆಗೆ 5.50 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್‌.ಕೆ.ಎಂ. ಶಾಫಿ ಸಅದಿ ತಿಳಿಸಿದರು.

ಉಳ್ಳಾಲ ದರ್ಗಾಕ್ಕೆ ಭೇಟಿ
ಉಳ್ಳಾಲ: ವಕ್ಫ್ ಬೋರ್ಡ್‌ ರಾಜ್ಯಾಧ್ಯಕ್ಷ ಶಾಫಿ ಸಅದಿ ಅವರು ಮಂಗಳವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್‌ ನಡೆಸಿದರು. ದರ್ಗಾ ಅಧ್ಯಕ್ಷ ಅಬ್ದುಲ್‌ ರಶೀದ್‌ ಗೌರವಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next