Advertisement

ಬರ ನಿಭಾಯಿಸಲು 700 ಕೋಟಿ ರೂ.

05:09 PM Jul 06, 2019 | Suhan S |

ಮಧುಗಿರಿ: ಬರ ಸಮಸ್ಯೆ ನಿಭಾಯಿಸಲು 700 ಕೋಟಿ ಮೀಸಲಿಟ್ಟಿದ್ದು, ಜಿಲ್ಲಾಧಿ ಕಾರಿ ಖಾತೆಯಲ್ಲಿ 12 ಕೋಟಿ ರೂ. ಇದೆ. ಮೇವು ಹಾಗೂ ಕುಡಿಯುವ ನೀರಿಗೆ ಸಮಸ್ಯೆಗೆ ಕ್ರಮವಹಿಸುವಂತೆ ಅಧಿಕಾರಿ ಗಳಿಗೆ ಸೂಚಿಸಿರುವುದಾಗಿ ಸಚಿವ ಆರ್‌. ವಿ.ದೇಶಪಾಂಡೆ ತಿಳಿಸಿದರು.

Advertisement

ಕಸಬಾ ಚಿನಕವಜ್ರ ಗ್ರಾಮದ ಬರಗಾಲ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದರು.ಎಲ್ಲಿವರೆಗೂ ಮೇವು ಬ್ಯಾಂಕಿನ ಅಗತ್ಯವಿರುತ್ತದೋ ಅಲ್ಲಿಯ ವರೆಗೂ ಮೇವು ಹಾಗೂ ನೀರಿಗೆ ಅನುದಾನ ನೀಡಲಾಗುವುದು.

ಕೇಂದ್ರ ಸರ್ಕಾರ 3 ತಿಂಗಳ ನಂತರ ನೀರು ನೀಡಲು ಹಣಕಾಸು ಕೊಡು ವುದಿಲ್ಲ. ಆದರೆ ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ಮಾಡಿ ತಹಶೀಲ್ದಾರ್‌ರವರಿಗೆ ಅಧಿಕಾರಿ ನೀಡಿದ್ದು, ಸಾಧ್ಯ ವಾದಷ್ಟು ನೀರು ಮೇವು ನೀಡಲು ಆದೇಶಿಸಿದ್ದೇವೆ. ಕನಿಷ್ಠ 40 ಲಕ್ಷ ರೂ. ತಹಶೀಲ್ದಾರ್‌ ಖಾತೆಯಲ್ಲೇ ಇರುವಂತೆ ಕ್ರಮಕೈಗೊಳ್ಳಲಾಗಿದೆ ಎಂದರು.

ಈ ವೇಳೆ ಶಾಸಕ ಎಂ.ವಿ. ವೀರಭದ್ರಯ್ಯ, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್‌ ನಂದೀಶ್‌, ತಾಪಂ ಕಾರ್ಯ ನಿರ್ವಹಣಾಧಿಕಾರಿ ನಂದಿನಿ, ಪಶು ಸಂಗೋಪನೆ ಸಹಾಯಕ ನಿರ್ದೇಶಕ ನಾಗಭೂಷಣ್‌, ತುಂಗೋಟಿ ರಾಮಣ್ಣ, ಪಿಡಿಒ ಉತ್ತಮ್‌ ಹಾಗೂ ಗ್ರಾಮಕ್ಕೆ ನೀರು ನೀಡಿದ ರೈತ ದಂಪತಿ ಗೌರಮ್ಮ ದೊಡ್ಡತಿಮ್ಮಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next