Advertisement
ಚುನಾವಣ ಅಧಿಕಾರಿಗಳ ಲೆಕ್ಕಾಚಾರದಂತೆ ಒಟ್ಟು 5 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳಾಗಿ ಸೇರಿಸಲಾಗಿದೆ. ಇದರಲ್ಲಿ ಕಳೆದಬಾರಿ ಚುನಾವಣೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನವಾದ 205ನೇ ಪದ್ಮುಂಜ ಮತಗಟ್ಟೆಯೂ ಸೇರಿದೆ. ಕಳೆದ ಬಾರಿ ಚುನಾವಣೆಯಲ್ಲಿ ಇಲ್ಲಿ ಶೇ. 92.63 ಮತದಾನವಾದ ಕಾರಣ ವರ್ಗೀಕರಿಸಿ ಸೂಕ್ಷ್ಮ ಮತಗಟ್ಟೆಯಾಗಿ ಪರಿಗಣಿಸಿ ನಿಗಾವಹಿಸಲಾಗಿದೆ. 4 ಮತಗಟ್ಟೆಗಳಲ್ಲಿ ಕಳೆದ ಚುನಾವಣೆಯಲ್ಲಿ ಒಂದೇ ಅಭ್ಯರ್ಥಿಗೆ ಶೇ.75ಕ್ಕಿಂತ ಹೆಚ್ಚು ಮತದಾನವಾಗಿದ್ದು, 113ನೇ ಮತಗಟ್ಟೆ ಪಿಲಿಚಾಮುಂಡಿಕಲ್ಲು, 51ನೇ ಮತಗಟ್ಟೆ ಪೇಂದಡ್ಕ, 85ನೇ ಮತಗಟ್ಟೆ ಗಂಡಿಬಾಗಿಲು, 221ನೇ ಕರಾಯ ಸೂಕ್ಷ್ಮ ಮತಗಟ್ಟೆಗಳೆಂದು ಪರಿಗಣಿಸಲಾಗಿದೆ.
46 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ವಿಶೇಷವಾಗಿ 20ರಿಂದ 24 ಮತಗಟ್ಟೆಗಳಲ್ಲಿ ಅರೆಸೇನಾ ಪಡೆಗಳ ಸಿಬಂದಿ ವಿಶೇಷ ಭದ್ರತೆ ನಿಯೋಜಿಸುವ ಜತೆಗೆ ಸಿಸಿ ಕೆಮರಾ ಕಣ್ಗಾವಲಿಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮೈಕ್ರೋಅಬ್ಸರ್‌ವರ್ಸ್ ನೇಮಿಸಲಾಗಿದ್ದು, ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಬಂತು ಮತಯಂತ್ರ
ತಾಲೂಕಿಗೆ ಈಗಾಗಲೇ ಮತಯಂತ್ರ ಗಳು ಆಗಮಿಸಿವೆ. ಮತಯಂತ್ರಗಳನ್ನು ಉಜಿರೆಯಲ್ಲಿರುವ ಎಸ್.ಡಿ.ಎಂ. ಪಿಯು ಕಾಲೇಜಿನಲ್ಲಿ ಇಡಲಾಗಿದೆ. ಬಳಿಕ ಇಲ್ಲಿಯೇ ಚುನಾವಣೆಯ ಕಾರ್ಯ ಚಟುವಟಿಕೆ ಗಳು ನಡೆಯಲಿವೆ.
Related Articles
ತಾಲೂಕಿನಾದ್ಯಂತ ಒಟ್ಟು 46 ನಕ್ಸಲ್ ಪೀಡಿತ ಮತಗಟ್ಟೆಗಳಲ್ಲಿ ವಿಶೇಷ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ನಾರಾವಿ, ಚಾರ್ಮಾಡಿಯಲ್ಲಿ ತಲಾ 4, ನಡ, ಕಾಯರ್ತಡ್ಕದಲ್ಲಿ ತಲಾ 3, ಕುತ್ಲೂರು, ಶಿರ್ಲಾಲು, ಸವಣಾಲು, ನಾವೂರು, ಕರಂಬಾರು, ನೆರಿಯಾ, ಶಿಶಿಲಾ, ಸಲೆತಡ್ಕ, ಅರಸಿನಮಕ್ಕಿಗಳಲ್ಲಿ ತಲಾ 2, ಸುಲ್ಕೇರಿ ಮೊಗ್ರು, ನಾವರ, ಯಳನೀರು, ದಿಡುಪೆ, ಕರಿಯಾಲು, ಮಿತ್ತಬಾಗಿಲು, ಕುಕ್ಕಾವು, ಕಿಲ್ಲೂರು, ಕಡಿರುದ್ಯಾವರ, ಸುಲ್ಕೇರಿ, ಲಾೖಲ, ಬಾಂಜಾರು, ಮಿಯಾರುಮಠ, ಮೊಂಟೆತಡ್ಕಗಳಲ್ಲಿ ತಲಾ 1 ನಕ್ಸಲ್ ಪೀಡಿತ ಪ್ರದೇಶಗಳಿವೆ.
Advertisement
— ಹರ್ಷಿತ್ ಪಿಂಡಿವನ