ನವದೆಹಲಿ:ಹರಿದ್ವಾರದ ಐತಿಹಾಸಿಕ ಕುಂಭಮೇಳದಲ್ಲಿ ಸುಮಾರು 70ಲಕ್ಷ ಭಕ್ತರು ಭಾಗವಹಿಸಿದ್ದು, ಶುಕ್ರವಾರ ಕುಂಭಮೇಳ ಮುಕ್ತಾಯಗೊಂಡಿದ್ದು, ಈ ಸಂದರ್ಭದಲ್ಲಿ ಕುಂಭಮೇಳ ಕೋವಿಡ್ 19 ವೈರಸ್ ನ ಸೂಪರ್ ಸ್ಪ್ರೆಡರ್ ಆಗಬಹುದು ಎಂಬ ಭೀತಿಯನ್ನು ಹುಟ್ಟುಹಾಕಿತ್ತು.
ಇದನ್ನೂ ಓದಿ:ಭಾರತ ಕೋವಿಡ್ ಸಂಕಷ್ಟದಲ್ಲಿದ್ದರೆ, ಲಡಾಖ್ ನಲ್ಲಿ ಕುತಂತ್ರವಾಡುತ್ತಿದೆ ಕಪಟಿ ಚೀನಾ!
ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಲು ಹರಿದ್ವಾರದ ಸುತ್ತಮುತ್ತಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. 2021ನೇ ಸಾಲಿನ ಕುಂಭಮೇಳ ಅದ್ದೂರಿಯಾಗಿಲ್ಲದೇ, ಕೋವಿಡ್ ನಿಂದಾಗಿ ಕೇವಲ ಒಂದು ತಿಂಗಳ ಕಾಲ ಕುಂಭಮೇಳ ನಡೆದಿರುವುದಾಗಿ ವರದಿ ತಿಳಿಸಿದೆ.
ಸಾಮಾನ್ಯವಾಗಿ ಕುಂಭಮೇಳ ಮೂರು ತಿಂಗಳ ಕಾಲ ನಡೆಯುತ್ತಿತ್ತು. ಆದರೆ ಈ ಬಾರಿ ಕೋವಿಡ್ ಕಳವಳದಿಂದ ಏಪ್ರಿಲ್ 1ರಂದು ಕುಂಭಮೇಳ ಆರಂಭವಾಗಿದ್ದು, ಏ.30ರಂದು ಮುಕ್ತಾಯಗೊಳಿಸಲಾಗಿದೆ ಎಂದು ವರದಿ ಹೇಳಿದೆ. ಏಪ್ರಿಲ್ 2, 14ರಂದು ನಡೆದ ಎರಡು ಶಾಹಿ ಸ್ನಾನಗಳಲ್ಲಿ ಅಪಾರ ಭಕ್ತರು ಪಾಲ್ಗೊಂಡಿದ್ದರು. ಪ್ರಧಾನಿ ಮೋದಿ ಅವರ ಮನವಿ ನಂತರ ಏಪ್ರಿಲ್ 27ರ ಶಾಹಿ ಸ್ನಾನವನ್ನು ಸಾಂಕೇತಿಕವಾಗಿ ನಡೆಸುವ ಮೂಲಕ ಕಡಿಮೆ ಪ್ರಮಾಣದಲ್ಲಿ
ಭಕ್ತರು ಭಾಗವಹಿಸಿದ್ದರು.
ಕೋವಿಡ್ ಎರಡನೇ ಅಲೆ ಸಂದರ್ಭದ ಹಿನ್ನೆಲೆಯಲ್ಲಿ ಕುಂಭಮೇಳ ನಡೆಸುವುದು ದೊಡ್ಡ ಸವಾಲಿನ ಪ್ರಶ್ನೆಯಾಗಿತ್ತು ಎಂದು ಹರಿದ್ವಾರದ ಮುಖ್ಯ ವೈದ್ಯಾಧಿಕಾರಿ ಎಸ್ ಕೆ ಜಾ ತಿಳಿಸಿದ್ದಾರೆ.