Advertisement

Delhi ಪ್ರತಿಭಟನೆಗೆ ತೆರಳುತ್ತಿದ್ದ ಕರ್ನಾಟಕದ 70 ರೈತರು ಭೋಪಾಲ್​ ನಲ್ಲಿ ವಶಕ್ಕೆ

05:54 PM Feb 12, 2024 | Team Udayavani |

ಹುಬ್ಬಳ್ಳಿ: ದೆಹಲಿಯ ಕಿಸಾನ್ ಮೋರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಧಾರವಾಡ ಜಿಲ್ಲೆಯ 16 ರೈತರು ಸೇರಿ ಕರ್ನಾಟಕದ 70 ರೈತರನ್ನು ಮಧ್ಯ ಪ್ರದೇಶದ ಭೋಪಾಲ್​ ನಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ.ಧಾರವಾಡ ಜಿಲ್ಲೆಯ16 ರೈತರಲ್ಲಿ ಹೆಚ್ಚಿನವರು ಕಲಘಟಗಿ ತಾಲೂಕಿನವರು ಎಂದು ತಿಳಿದು ಬಂದಿದೆ.

Advertisement

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ನೇತೃತ್ವದಲ್ಲಿ ರೈತರು ದೆಹಲಿಗೆ ತೆರಳುತ್ತಿದ್ದರು.ದೆಹಲಿಯ‌ ಜಂತರ್​ ಮಂತರ್​​ನಲ್ಲಿ ಮಂಗಳವಾರ ಕಿಸಾನ್ ಮೋರ್ಚಾ ವತಿಯಿಂದ ಕಾರ್ಯಕ್ರಮ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗವಹಿಸುವುದಕ್ಕಾಗಿ ರಾಜ್ಯದ ರೈತರು ನಿಜಾಮುದ್ದೀನ್ ಎಕ್ಸಪ್ರೆಸ್ ರೈಲು ಮೂಲಕ ತೆರಳುತ್ತಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next