Advertisement
ಜಿಲ್ಲಾಡಳಿತ, ಸರ್ಕಾರ, ಜನನಾಯಕರು ಬಾಧಿತ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಿದೆ. ಜಿಲ್ಲೆಯನ್ನು “ಖನಿಜ ಪ್ರದೇಶ‘ ಎಂದೇ ಹೆಸರಿಸಲಾಗಿದೆ. ಈ ಭಾಗದಲ್ಲಿ ಹಲವು ಗುಡ್ಡಗಾಡು ಪ್ರದೇಶಗಳು ಇರುವುದರಿಂದ ಕಲ್ಲು ಗಣಿಗಾರಿಕೆ ಉದ್ಯಮವೂ ಹಲವು ವರ್ಷಗಳಿಂದ ಇಲ್ಲಿ ತಲೆ ಎತ್ತಿ ನಿಂತಿವೆ.
Related Articles
Advertisement
ಪರೋಕ್ಷ ಬಾಧಿತ ಗ್ರಾಮಗಳು: ಕಲ್ಲು ಕ್ವಾರಿ ಹಾಗೂ ಕ್ರಷರ್ ಇರುವ ಹಳ್ಳಿಗಳಲ್ಲಿ ಉದ್ಯಮದಿಂದ ಕುಡಿಯುವ ನೀರು, ರಸ್ತೆ ಸೇರಿ ಪರಿಸರಕ್ಕೆ ನೇರವಾಗಿ ಹಾನಿಯಾಗುತ್ತದೆ. ಅಂತಹ ಹಳ್ಳಿಗಳು ಜಿಲ್ಲೆಯಲ್ಲಿ 35 ಇವೆ. ಅವುಗಳನ್ನು ನೇರ ಬಾಧಿತ ಗ್ರಾಮಗಳೆಂದು ಗುರುತಿಸಿದ್ದರೆ, ಇನ್ನೂ ಆ ಹಳ್ಳಿಗಳ ಅಕ್ಕಪಕ್ಕ ಕಡಿಮೆ ಪ್ರಮಾಣದಲ್ಲಿ ಹಾನಿಯಾಗುವ ಹಳ್ಳಿಗಳನ್ನು
ಪರೋಕ್ಷ ಗಣಿ ಬಾಧಿತ ಪ್ರದೇಶಗಳೆಂದು ಇಲಾಖೆ ಗುರುತಿಸಿದ್ದು, ಅಂತಹ 35 ಹಳ್ಳಿಗಳು ಇವೆ.
ವಿಶೇಷ ಅಭಿವೃದ್ಧಿ ಅವಶ್ಯ: ಗಣಿ ಬಾಧಿತ 70 ಹಳ್ಳಿಗಳಲ್ಲಿ ಉದ್ಯಮದಿಂದ ಕುಡಿಯುವ ನೀರು, ಪರಿಸರ, ರಸ್ತೆ ಸೇರಿದಂತೆ ಪ್ರತಿಯೊಂದಕ್ಕೂ ಹಾನಿಯಾಗುತ್ತದೆ. ಜನತೆಯ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇಲ್ಲಿ ಸರ್ಕಾರವೇ ಗಣಿ ಬಾಧಿತ ಪ್ರದೇಶದಲ್ಲಿ ವಿಶೇಷ ಅನುದಾನ ನೀಡಿ ಅಭಿವೃದ್ಧಿ ಕೆಲಸ ಆರಂಭಿಸಬೇಕಿದೆ. ಅಲ್ಲದೇ ಸರ್ಕಾರ
ಈಗಾಗಲೇ ಬಾಧಿತ ಪ್ರದೇಶದಲ್ಲಿ ಪಡೆಯುವ ಶೇ.30 ಪಡೆಯುವ ರಾಯಲ್ಟಿ ಹಣವು ಇಂತಹ ಗ್ರಾಮಗಳಿಗೆ ವಿನಿಯೋಗ ಮಾಡಬೇಕಿದೆ. ಇಂಥ ಹಳ್ಳಿಗಳ ಬಗ್ಗೆ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಕಾಳಜಿ ವಹಿಸುವುದು ಅವಶ್ಯವಾಗಿದೆ.
-ದತ್ತು ಕಮ್ಮಾರ