Advertisement

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ ಕಾರಕ್ಕೆ ಇಂದಿಗೆ, ಅಂದರೆ ಮೇ 30ಕ್ಕೆ ಏಳು ವರ್ಷ ತುಂಬುತ್ತದೆ. 2014ರ ಮೇ 26ರಂದು ಅವರು ಭಾರತ ಗಣರಾಜ್ಯದ 14ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. (2ನೇ ಅವಧಿಗೆ 2019ರ ಮೇ 30ರಂದು ಅವರು ಮತ್ತೆ ಪ್ರಧಾನಿಯಾಗಿ ಪ್ರತಿಜ್ಞೆ ಸ್ವೀಕರಿಸಿದ್ದರು.) ಸ್ವಾತಂತ್ರ್ಯದ ನಂತರ, ಅದರಲ್ಲೂ ಭಾರತವು ಮುಕ್ತ ಆರ್ಥಿಕ ವ್ಯವಸ್ಥೆಗೆ ತೆರೆದುಕೊಂಡ ಮೇಲೆ ಸುಭದ್ರ, ಸ್ಥಿರ ಸರಕಾರ ರಚನೆ ಮಾಡಿದ ಹೆಗ್ಗಳಿಕೆ ಮೋದಿಗೆ ಸಲ್ಲುತ್ತದೆ.

Advertisement

ಅಧಿಕಾರಕ್ಕೆ ಬಂದ ಮೊದಲ ವರ್ಷವೂ ಮೋದಿ ಮುಂದೆ ಸವಾಲು ಗಳಿದ್ದವು. ಏಳು ವರ್ಷಗಳ ಅನಂತರ ಅದಕ್ಕಿಂತ ಬೃಹತ್‌ ಸವಾಲುಗಳಿವೆ. 2014ಕ್ಕೆ ಮುನ್ನ ಭಾರತ ಪ್ರಬಲ ನಾಯಕತ್ವದ ಕೊರತೆ ಎದುರಿಸಿತ್ತು. ಜಾಗತಿಕ ಮಟ್ಟದಲ್ಲಿ ಅನೇಕ ಬಾರಿ ಮುಗ್ಗರಿಸಿತ್ತು. ರಾಜತಾಂತ್ರಿಕ ಸೋಲು ಕಂಡಿತ್ತು. ವರ್ಚಸ್ಸು ಹೀನವಾಗಿ ನೂರಾರು ದೇಶಗಳಲ್ಲಿ ತಾನೂ ಒಂದು ದೇಶವಾಗಿ ಇಂಡಿಯಾ ಉಳಿದುಕೊಂಡಿತ್ತು.

2014ರ ಅನಂತರ ಈ ಪರಿಸ್ಥಿತಿ ಬದಲಾಯಿತು. ಇಡೀ ಜಾಗತಿಕ ಸಮುದಾಯ ಭಾರತದ ಮೂಲಕವೇ ಜಗತ್ತನ್ನು ನೋಡುವುದು ಶುರುವಾಯಿತು. ಸುಧಾರಣೆಗಳ ಬೃಹತ್‌ ಪರ್ವವೇ ಆರಂಭ ವಾಯಿತು. ಅಚ್ಚರಿ ಎಂದರೆ, 1947ರಿಂದ ತೆವಳುತ್ತಿದ್ದ ಸುಧಾರಣೆಗಳಿಗೆ 2014ರಿಂದ ವೇಗ ಬಂತು. ಉದಾಹರಣೆಗೆ ಪಂಚವಾರ್ಷಿಕ ಯೋಜ ನೆಗಳ ಹೆಸರಿನಲ್ಲಿ ಕೊಳ್ಳೆ ಹೊಡೆಯುತ್ತಿದ್ದ, ಭಾರತದ ಪಾಲಿಗೆ ಅತಿ ದೊಡ್ಡ “ಬಿಳಿಯಾನೆ’ ಆಗಿದ್ದ ಯೋಜನಾ ಆಯೋಗವನ್ನು ಮೋದಿ ರದ್ದುಪಡಿಸಿದರು. ಅದು “ನೀತಿ ಆಯೋಗ’ವಾಗಿ ರೂಪುಗೊಳ್ಳಲು ತಿಂಗಳುಗಟ್ಟಲೇ ವ್ಯರ್ಥ ಚರ್ಚೆ ನಡೆಯಲಿಲ್ಲ.

ಜಿಎಸ್‌ಟಿಯಿಂದ ಪುಟಿದೆದ್ದ ಜಿಡಿಪಿ: ಒಂದು ದೇಶ- ಒಂದು ತೆರಿಗೆ ನೀತಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಭಾರತೀಯ ತೆರಿಗೆ ವ್ಯವಸ್ಥೆಯಲ್ಲಿಯೇ ಮಹತ್ವದ ಸುಧಾರಣೆ. ಸರಕಾರದ ಆದಾಯ ಸೋರಿಕೆ ತಡೆಗಟ್ಟುವುದು ಮಾತ್ರವಲ್ಲದೆ, ನ್ಯಾಯಯುತ, ಕ್ರಮಬದ್ಧ ಸಂಪನ್ಮೂಲ ಸಂಗ್ರಹಕ್ಕೆ ಜಿಎಸ್‌ಟಿ ನಾಂದಿ ಯಾಯಿತು. ಈ ಆದಾಯದಲ್ಲಿ ಕೇಂದ್ರ, ರಾಜ್ಯಗಳ ನಡುವೆ ಸಮರ್ಪಕ ಹಂಚಿಕೆಯಾಗಿ ತೆರಿಗೆ ಹಣದಲ್ಲಿ ಈಗ ಪೈಸೆ ಪೈಸೆಗೂ ಲೆಕ್ಕ ಸಿಗುತ್ತಿದೆ. 2017ರಲ್ಲಿ ಜಾರಿಗೆ ಬಂದ ಈ ಕ್ರಮ ಹೊಸ ಭಾರತ ನಿರ್ಮಾಣಕ್ಕೆ ನೀಡುತ್ತಿರುವ ಕೊಡುಗೆಯನ್ನು ಅಲ್ಲಗಳೆಯುತ್ತಿಲ್ಲ.

“ಮನ್‌ ಕೀ ಬಾತ್‌’ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾದ ಮೋದಿ, ಒಂದರ ಹಿಂದೆ ಒಂದರಂತೆ ಪ್ರಗತಿ ಪರ ಕೆಲಸ ಕೈಗೊಂಡರು. ಆ ಪೈಕಿ ‘ಡಿಜಿಟಲ್‌ ಇಂಡಿಯಾ’, “ಮೇಕ್‌ ಇನ್‌ ಇಂಡಿಯಾ’ ಅತಿ ಮುಖ್ಯ. “ಉಜ್ವಲ’ ಯೋಜನೆ ಗ್ರಾಮೀಣ ಭಾಗದ ಮಹಿಳೆಯರ ಮೊಗದಲ್ಲಿ ಬೆಳಕು ಮೂಡಿಸಿತು. ಮನೆ ಮನೆಗೂ ಎಲ್‌ಪಿಜಿ ಸಂಪರ್ಕ ಬಂತು. ಅರ್ಥಪೂರ್ಣ ಸುಧಾರಣಾ ಕ್ರಮ ವೆಂದರೆ “ಸ್ವತ್ಛ ಭಾರತ್‌’. ಗಾಂಧಿ ಪ್ರೇರಣೆಯಾಗಿ ಜಾರಿಗೆ ಬಂದ ಈ ಅಭಿಯಾನ ದೇಶದ ಉದ್ದಗಲಕ್ಕೂ ಎದ್ದು ಕಾಣುತ್ತಿದೆ.

Advertisement

ಬಲಿಷ್ಠವಾದ ರಾಜತಾಂತ್ರಿಕ ನೀತಿ: ವಿದೇಶ ವ್ಯವ ಹಾರವನ್ನು ಮೋದಿ ಅವರು ರಾಜತಾಂತ್ರಿಕ ಸಂಬಂಧವನ್ನು ಕೇವಲ ಭಾವನಾತ್ಮಕ ಅಥವಾ ಅಪ್ರಸ್ತುತ ಸೈದ್ಧಾಂತಿಕ ಹಿನ್ನೆಲೆ, ಇಲ್ಲವೇ ಅಲ್ಪಕಾಲೀನ ಲಾಭದ ದೃಷ್ಟಿ ಯಿಂದ ನೋಡದೇ ದೀರ್ಘ‌ಕಾಲದ ದೃಷ್ಟಿಕೋನದಿಂದ ನೋಡಿ ದರು. ವ್ಯವಹಾರಿಕವಾಗಿ ಭಾರತಕ್ಕೆ ದಕ್ಕಬೇಕಾದ ಅನು ಕೂಲಗಳ ಹಿನ್ನೆಲೆಯಲ್ಲಿ ಕಂಡರು. ಅದರ ಪರಿಣಾಮವೇ ಏಳು ದಶಕಗಳ ಕಾಲ ಭಾರತಕ್ಕೆ ದೂರವೇ ಉಳಿದಿದ್ದ ಇಸ್ರೇಲ್‌ ನಮ್ಮ ಪರಮಾಪ್ತ ದೇಶವಾಗಲು ಸಾಧ್ಯ ವಾಯಿತು. ಅಮೆರಿಕದ ನಿಲುವಿನಲ್ಲಿ ಬದಲಾಯಿತು. ಆ ದೇಶಕ್ಕೆ ಭಾರತ ಈಗ ಆಪ್ತ ದೇಶ ಮಾತ್ರವಲ್ಲ, ಅನಿವಾ ರ್ಯವಾಗಿ ಜತೆಯಲ್ಲೇ ಇರಲೇ ಬೇಕಾದ ಮಿತ್ರದೇಶವೂ ಹೌದು. ಇನ್ನೂ ಯುರೋಪಿನ ಬಹುತೇಕ ಎಲ್ಲ ದೇಶಗಳು ಭಾರತಕ್ಕೆ ಹೆಚ್ಚು ನಿಕಟವಾಗಿವೆ. ಇನ್ನು, ಭಾರತ- ಜಪಾನ್‌ – ಆಸ್ಟ್ರೇಲಿಯಾ ನಡುವಿನ ಬಾಂಧವ್ಯದ ಬಗ್ಗೆ ಹೇಳು ವಂತೆಯೇ ಇಲ್ಲ. ಈ ಮೂರು ದೇಶಗಳು “ಮೂರು ದೇಹ- ಒಂದು ಹೃದಯ’ದಂತೆ ಬೆಸೆದು ಹೋಗಿವೆ.

ಪಾಠ ಕಲಿತ ಚೀನ!: ಭಾರತವನ್ನು ಹಣೆಯಬಹುದು ಎಂದು ಚೀನ ಹೊಂಚು ಹಾಕಿದ್ದು ಸುಳ್ಳಲ್ಲ. ಪಾಕಿ ಸ್ತಾನ ವನ್ನೂ ಛೂ ಬಿಟ್ಟು ಅದು ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಅದೂ ಸಾಲದೆಂಬಂತೆ ಚಿರ ಕಾಲದ ಮಿತ್ರದೇಶವಾಗಿದ್ದ ನೇಪಾಳವನ್ನೂ ಎತ್ತಿಕಟ್ಟಿತು. ಬಾಂಗ್ಲಾ ದೇಶವನ್ನೂ ಪ್ರಭಾವಿಸಲು ಪ್ರಯತ್ನಿಸಿತು. ಅರುಣಾಚಲದಲ್ಲಿ ಗಡಿ ದಾಟಲೆತ್ನಿಸಿದ ಹಾಗೂ ಗಾಲ್ವಾನ್‌ ಕಣಿವೆಯಲ್ಲಿ ಅತಿಕ್ರಮಣಕ್ಕೆ ಹೊರಟ ಚೀನ ವಿಧಿ ಇಲ್ಲದೆ ಹಿಂದೆ ಹೆಜ್ಜೆ ಇಡಬೇಕಾದ ಸ್ಥಿತಿ ಸೃಷ್ಟಿ ಯಾಯಿತು. ಸಾಮಾನ್ಯವಾಗಿ ಹತ್ತು ಹೆಜ್ಜೆ ಮುಂದೆ ಬಂದು ಐದು ಹೆೆಜ್ಜೆ ಮಾತ್ರ ಹಿಂದಕ್ಕೆ ಹೋಗುವ ನಾಟಕವಾಡುವ ಚೀನ ಈ ಬಾರಿ ಪೂರ್ಣ ಪ್ರಮಾಣದಲ್ಲಿ ವಾಪಸ್‌ ಹೋಯಿತು. ಇದಕ್ಕೆ ಕಾರಣ ಮೋದಿ ಅವರ ಪ್ರಬಲ ನಾಯಕತ್ವ.

ಎರಡನೇ ಅವಧಿ ಸಂಘರ್ಷಮಯ: ಮೋದಿ ಎರಡನೇ ಅವಧಿ ಸಂಘರ್ಷಮಯ. ಕಣ್ಣಿಗೆ ಕಾಣದ ವೈರಿ ವಿರುದ್ಧ ಎರಡೂ ವರ್ಷ ಹೋರಾಟ ನಡೆಸಿದ್ದೇ ಆಯಿತು. ಮೊದಲ ಅವಧಿಯಲ್ಲಿ ಸುಧಾರಣಾ ಪರ್ವ ವೇಗವಾದರೂ, ಅದರ ಫಲಿತಾಂಶ ಗೋಚರವಾಗಬೇಕಿದ್ದ ದ್ವಿತೀಯಾರ್ಧದಲ್ಲಿ ಕೊರೊನಾ ವಿರುದ್ಧ ಸೆಣಸುವುದೇ ಸರಕಾರದ ನಿತ್ಯ ಕೆಲಸವಾಯಿತು. ಕೋವಿಡ್‌-19 ಇಲ್ಲದಿದ್ದರೆ ಮೋದಿ ಕಂಡ ಕನಸುಗಳು ಈ ವೇಳೆಗೆಲ್ಲ ಸಂಪೂರ್ಣವಾಗಿ ಕಾರ್ಯಗತವಾಗಿ ಕಣ್ಣಿಗೆ ಗೋಚರವಾಗುತ್ತಿದ್ದವು. 2019ರಲ್ಲಿ ಚೀನದ ವುಹಾನ್‌ನಲ್ಲಿ ಕಾಣಿಸಿಕೊಂಡ ಕೋವಿಡ್‌ ಭಾರತದೊಳಕ್ಕೆ ನುಸುಳಲು ಹೆಚ್ಚು ಕಾಲ ಬೇಕಾಗಲಿಲ್ಲ. (ದುಷ್ಟ ಚೀನ ಜೈವಿಕ ಯುದ್ಧ ಸಾರಲು ಕೊರೊನಾವನ್ನು ಸೃಷ್ಟಿಸಿದೆ ಎಂಬ ಬಗ್ಗೆ ಜಾಗತಿಕವಾಗಿ ಚರ್ಚೆ-ತನಿಖೆ ನಡೆಯುತ್ತಿದೆ.) ಭಾರತದ ಆರ್ಥಿಕತೆಗೆ ಆಘಾತ ಕೊಡಲು ಚೀನದ ಆಡಳಿತ ಕೋವಿಡ್‌ ಬಳಸಿಕೊಂಡಿತಾ? ಈ ಅನುಮಾನ ಇದ್ದೇ ಇದೆ. ಭಾರತ ಈ ಸವಾರಿ ಪ್ರಹಸನದಲ್ಲೇ ಬಲಿ ಯಾಗುತ್ತದೆ ಎಂದು “ಒಳಲೆಕ್ಕ’ ಹಾಕಿದ್ದ ಚೀನ, ಪಾಕ್‌ನ‌ಂಥ ದೇಶಗಳಿಗೆ ಶಾಕ್‌ ಕೊಟ್ಟವರು ಮೋದಿ.

ಮೋದಿ ಭಾರತದ ವೈದ್ಯ ಕ್ಷೇತ್ರದ ಕೊರತೆಗಳನ್ನು ಕಂಡುಕೊಂಡರು. ಇದುವರೆಗೂ ಭಾರತ ಎಲ್ಲೆಲ್ಲಿ ಎಡವಿದೆ ಎಂಬುದನ್ನು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ವೈರಸ್‌ ಸದ್ದಾಗುವ ತನಕ ನಮ್ಮ ದೇಶದಲ್ಲಿ ಮಾಸ್ಕ್, ಸ್ಯಾನಿ ಟೈಸರ್‌, ಐಸಿಯು, ಆಕ್ಸಿಜನ್‌, ಸ್ವತ್ಛತೆ ಇತ್ಯಾದಿ ಸೇರಿ ಇಡೀ ವೈದ್ಯ ಕೀಯ ವ್ಯವಸ್ಥೆ ಅದೆಷ್ಟು ಮುಖ್ಯ ಎಂಬ ಅರಿವೇ ಇರಲಿಲ್ಲ. ಅಷ್ಟೇ ಏಕೆ? ಪ್ರತಿಯೊಂದನ್ನೂ ಚೀನ ಅಥವಾ ಇನ್ನಾ ವುದೋ ದೇಶದಿಂದ ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಇನ್ನು, ಕೋವಿಡ್‌ ಲಸಿಕೆಯ ಮಾತಂತೂ ದೂರವೇ ಇತ್ತು. ಈ ಎಲ್ಲವನ್ನೂ ನಮ್ಮ ದೇಶದಲ್ಲೇ ತಯಾರಿಸಬೇಕು ಎಂಬ ಆಲೋಚನೆಯೇ ಯಾರಿಗೂ ಬಂದಿರಲಿಲ್ಲ.

ಭಾರತವೆಂದರೆ ಆಪದ್ಭಾಂದವ: ಕೇವಲ ಒಂದೇ ವರ್ಷದಲ್ಲಿ ಹೇಗಿದ್ದ ಸ್ಥಿತಿ ಹೇಗಾಯಿತು. ಮೋದಿ ಅವರ ಒಂದೇ ಒಂದು ಘೋಷಣೆಯಿಂದ ಎಲ್ಲವೂ ಸಾಧ್ಯ ವಾಯಿತು. “ಆತ್ಮನಿರ್ಭರ್‌ ಭಾರತ’ವೆಂಬ ಒಂದು ಸ್ಫೂರ್ತಿದಾಯಕ ಪದ ಇಡೀ ದೇಶದ ಉತ್ಪಾದಕ ಕ್ಷೇತ್ರದಲ್ಲಿ ವಿದ್ಯುತ್‌ ಸಂಚಾರ ಉಂಟು ಮಾಡಿತು. ರೈತನಿಂದ ಕಾರ್ಪೋರೇಟ್‌ ಕಂಪೆನಿವರೆಗೂ ಎಲ್ಲರೂ “ಆತ್ಮನಿರ್ಭರ್‌’ರಡಿ ಕೆಲಸ ಮಾಡುತ್ತಿದ್ದಾರೆ. ಪರಿಣಾಮ ವಾಗಿ, ಕೋವಿಡ್‌ ಎದುರಿಸಲು ಬೇಕಿರುವ ಎಲ್ಲದರಲ್ಲೂ ನಮ್ಮ ದೇಶ ಸ್ವಾವಲಂಬನೆ ಸಾಧಿಸಿದೆ. ಅಲ್ಲದೆ, ಜಗತ್ತಿನಲ್ಲಿಯೇ ಹೆಚ್ಚು ಕೋವಿಡ್‌ ಲಸಿಕೆ ತಯಾರು ಮಾಡುವ ಅಗ್ರ ದೇಶ ವಾಗಿದೆ ಭಾರತ. ಸಾರ್ಕ್‌ ದೇಶ ಗಳು ಒಳಗೊಂಡಂತೆ ಜಗತ್ತಿನ 75ಕ್ಕೂ ಹೆಚ್ಚು ದೇಶಗಳಿಗೆ ಸುಮಾರು 6ರಿಂದ 7 ಕೋಟಿ ಡೋಸ್‌ ಲಸಿಕೆ ಯನ್ನು ಭಾರತ ಉದಾರವಾಗಿ ನೀಡಿದೆ. ಭೂತಾನ್‌, ನೇಪಾಳ ದಂಥ ಅನೇಕ ದೇಶಗಳಿಗೆ ಉಚಿತವಾಗಿ ಕೊಟ್ಟಿದೆ. ಒಬ್ಬ ಅಸಾಮಾನ್ಯ ನಾಯ ಕತ್ವದ ಸ್ಥಿರ ಸರಕಾರದಿಂದ ಮಾತ್ರ ಇಂಥ ಸಾಧನೆ ಸಾಧ್ಯ. ಈಗ ಚೀನ ಜತೆಗೆ ರಷ್ಯಾ, ಅಮೆರಿಕ, ಯುರೋಪ್‌ ದೇಶಗಳು ಕೂಡ ಲಸಿಕೆ ತಯಾ ರಿಕೆಯಲ್ಲಿ ನಿರತವಾಗಿವೆ. ಆದರೆ, ಭಾರತಕ್ಕೆ ಹೋಲಿಸಿದರೆ ಅವುಗಳ ಸಾಮರ್ಥ್ಯ ಕಡಿಮೆ. ಚೀನದ ಲಸಿಕೆ ಬಗ್ಗೆ ಜಗತ್ತಿಗೆ ವಿಶ್ವಾಸವಿಲ್ಲ.

ಜಗತ್ತಿನ ಬೃಹತ್‌ ಲಸಿಕೆ ಅಭಿಯಾನ: ಭಾರತದಲ್ಲಿ ಎಲ್ಲರಿಗೂ ಲಸಿಕೆ ಕೊಡುವುದು ಸುಲಭದ ಮಾತಲ್ಲ. ಈಗಾಗಲೇ ಎಲ್ಲ ರಾಜ್ಯಗಳು ವಿವಿಧ ಹಂತಗಳಲ್ಲಿ ಲಸಿಕೆ ನೀಡಲಾಗಿದೆ. ಜಗತ್ತಿನ ಅತಿದೊಡ್ಡ ವ್ಯಾಕ್ಸಿನ್‌ ಅಭಿಯಾನ ಇನ್ನೊಂದು ಬೃಹತ್‌ ಘಟ್ಟ ಮುಟ್ಟಲಿದೆ. ಡಿಸೆಂಬರ್‌ ಕೊನೆ ಹೊತ್ತಿಗೆ 108 ಕೋಟಿ ಜನರಿಗೆ ಎರಡೂ ಡೋಸ್‌ ಲಸಿಕೆ ನೀಡಲು ಮೋದಿ ಸರಕಾರ ಸಿದ್ಧತೆ ಮಾಡಿಕೊಂಡಿದೆ.

ಸಂಕಷ್ಟ ಕಾಲದಲ್ಲಿ ದೇಶವನ್ನು ಮೋದಿ ಮುನ್ನಡೆಸಿದ ಬಗೆ ಸುಲಭದ ಮಾತಲ್ಲ. ಬರೀ ಟೀಕೆ ಮಾಡಲಿಕ್ಕೇನಿದೆ? ಅಖಾಡಕ್ಕಿಳಿದು ಯೋಧನಂತೆ 24 ಗಂಟೆ ಕಾಲ ಅವಿಶ್ರಾಂತವಾಗಿ ಕರ್ತವ್ಯ ನಿರ್ವಹಿಸುವುದು ಮೋದಿ ಅವರೊಬ್ಬರಿಗೆ ಸಲ್ಲ ಬೇಕಾದ ಗೌರವ. ಏಳು ವರ್ಷಗಳ ಮೋದಿ ಆಡಳಿತ ಒಂದು ಪ್ರಭಾವಶಾಲಿ ಅಧ್ಯಾಯ ಎನ್ನುವಲ್ಲಿ ಯಾವ ಸಂಶಯವೂ ಇಲ್ಲ.

– ಡಾ|ಸಿ.ಎನ್‌.ಅಶ್ವತ್ಥನಾರಾಯಣ, ಡಿಸಿ ಎಂ

Advertisement

Udayavani is now on Telegram. Click here to join our channel and stay updated with the latest news.

Next